Raj Kundra : ರಾಜ್ ಕುಂದ್ರಾ ‘ಬ್ರೇಕಪ್’ ಹೇಳಿದ್ದು ಶಿಲ್ಪಾ ಶೆಟ್ಟಿಗೆ ಅಲ್ಲಂತೆ !! ಮತ್ಯಾರಿಗೆ ?.. ಇಲ್ಲಿದೆ ಅಚ್ಚರಿ ಫ್ಯಾಕ್ಟ್

Bollywood news Actress shilpa shetty husband Raj Kundra not broken with her true fact is revealed

Raj Kundra: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ನಡುವಿನ ವೈವಾಹಿಕ ಜೀವನ ಬಿರುಕು ಕಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ವೈರಲ್ ಆಗಲು ಕಾರಣ ರಾಜ್ ಕುಂದ್ರಾ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಮಾಡಿರುವ ಫೋಸ್ಟ್. ಈ ಪೋಸ್ಟ್ ನೋಡಿ ,ಇವರಿಬ್ಬರು ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ, ಇದೀಗ ಸತ್ಯ ಹೊರಬಿದ್ದಿದೆ. ರಾಜ್ ಕುಂದ್ರಾ ‘ಬ್ರೇಕಪ್’ ಹೇಳಿದ್ದು ಶಿಲ್ಪಾ ಶೆಟ್ಟಿಗೆ ಅಲ್ಲಂತೆ. ಮತ್ಯಾರಿಗೆ ? ಇಲ್ಲಿದೆ ನೋಡಿ ಅಚ್ಚರಿ ಫ್ಯಾಕ್ಟ್!!!

ರಾಜ್ ತಮ್ಮ ವಿಚ್ಛೇದನದ (Divorce) ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ರಾಜ್ ಕುಂದ್ರಾ ಏಕಾಏಕಿ ಟ್ವೀಟರ್‌ನಲ್ಲಿ ʻʻನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಸಮಯವನ್ನು ನೀಡಿʼʼಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್ ನೋಡಿ, ಶಿಲ್ಪಾ ಶೆಟ್ಟಿ ಜೊತೆ ಡಿವೋರ್ಸ್ (Divorce) ಏನಾದರೂ ಆಯಿತಾ ಎಂದು ಅಭಿಮಾನಿಗಳು ಆತಂಕಗೊಂಡಿದ್ದರು.
ಹಲವರು ಹಲವು ರೀತಿಯ ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಆದರೆ, ವಿಷಯ ಬೇರೆನೇ ಆಗಿದೆ. ಹೌದು, ರಾಜ್ ಕುಂದ್ರಾ ಕಳೆದ ಎರಡು ವರ್ಷಗಳಿಂದ ಮನೆಯಿಂದ ಆಚೆ ಕಾಲಿಡುವಾಗ ಫೇಸ್ ಮಾಸ್ಕ್ ಧರಿಸುತ್ತಿದ್ದರು. ಇದೀಗ ಆ ಮಾಸ್ಕ್ ನಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಆ ವಿಷಯವನ್ನು ಅವರು ʻʻನಾವು ಬೇರ್ಪಟ್ಟಿದ್ದೇವೆ” ಎಂದು ಅನುಮಾನ ಬರುವ ರೀತಿಯಲ್ಲಿ ಬರೆದುಕೊಂಡಿದ್ದರು. ಆ ಬರಹ ಕಂಡು ಬಹಳಷ್ಟು ಜನ ಶಿಲ್ಪಾ ಶೆಟ್ಟಿ ಅವರಿಂದ ರಾಜ್ ಕುಂದ್ರಾ ದೂರವಾಗಿದ್ದಾರೆ ಎಂದು ತಿಳಿದುಕೊಂಡಿದ್ದರು. ಇದೀಗ ಎಲ್ಲದಕ್ಕೂ ರಾಜ್ ಕುಂದ್ರಾ ತೆರೆ ಎಳೆದಿದ್ದಾರೆ.

ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದ ನಂತರ ರಾಜ್ ಅವರು ಸಾರ್ವಜನಿಕವಾಗಿ ಯಾವತ್ತೂ ಮುಖ ತೋರಿಸಿರಲಿಲ್ಲ. ಸದಾ ಫೇಸ್ ಮಾಸ್ಕ್ ಹಾಕಿಕೊಂಡೇ ಮನೆಯಾಚೆ ಕಾಲಿಡುತ್ತಿದ್ದರು. ನಿನ್ನೆಯಷ್ಟೇ ಅವರು ತಮ್ಮ ಮುಖವನ್ನು ಕ್ಯಾಮೆರಾಗೆ ತೋರಿಸಿದ್ದಾರೆ. ಅವರದ್ದೇ ನಿರ್ಮಾಣದಲ್ಲಿ ಮೂಡಿ ಬಂದಿರುವ ಯುಟಿ 69 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮೊದಲ ಬಾರಿಗೆ ಮುಖ ತೋರಿಸಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಅವರು ತಮ್ಮ ‘UT 69’ (UT 69 Movie) ಸಿನಿಮಾ ಟ್ರೈಲರ್‌ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: Mars: ಅಬ್ಬಬ್ಬಾ.. ರಾತ್ರೋರಾತ್ರಿ ಮಂಗಳ ಗ್ರಹದಲ್ಲಿ ಏನಾಗಿದೆ ಗೊತ್ತಾ ?! ವಿಚಾರ ತಿಳಿದು ವಿಜ್ಞಾನಿಗಳಿಗೇ ಕಾದಿತ್ತು ಬಿಗ್ ಶಾಕ್

Leave A Reply

Your email address will not be published.