Anna Bhagya Scheme: ಅನ್ನಭಾಗ್ಯದ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ – ‘ಅಕ್ಕಿ ಹಣ’ದ ಕುರಿತು ಸರ್ಕಾರದಿಂದ ಬಂತು ಬಿಗ್ ಅಪ್ಡೇಟ್
Good news for Annabhagya beneficiaries October rice money deposit for account latest updates
Anna Bhagya Scheme: ರಾಜ್ಯ ಸರಕಾರದ(Government)ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ(Anna Bhagya Scheme) ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ(Ration Card Holder)ಪ್ರತಿ ಸದಸ್ಯರಿಗೆ 5 ಕೆಜಿಯ ಹಾಗೆ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ.ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರಿಗೆ (Ration Card)ಅನ್ವಯವಾಗುವ ಹಾಗೆ ಪಡಿತರ ಆಹಾರ ಧಾನ್ಯವನ್ನು ಹಂಚಿಕೆ ಮಾಡಲಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಿಗೆ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾದರೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ (Ration Shop)ಭೇಟಿ ನೀಡಿ ಪರಿಹರಿಸಿಕೊಳ್ಳಬಹುದೆಂದು ಆಹಾರ ಇಲಾಖೆ ತಿಳಿಸಿದೆ.
ಅಕ್ಟೋಬರ್ ಮಾಹೆಗೆ ಅಂತ್ಯೋದಯ ಪಡಿತರ ಚೀಟಿದಾರರಿಗೆ ಕಾಡ್‌ರ್ಗೆ 21 ಕೆ.ಜಿ ಅಕ್ಕಿ ಮತ್ತು 14 ರಾಗಿ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ 3 ಕೆ.ಜಿ ಅಕ್ಕಿ ಮತ್ತು ಪ್ರತಿ ಸದಸ್ಯರಿಗೆ 2ಕೆ.ಜಿ ರಾಗಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪ್ರತಿ ಕೆ.ಜಿ ಗೆ ರೂ.15ರಂತೆ ಗ್ರೀನ್ ಸಿಗ್ನಲ್ ನೀಡಿದ ಎ.ಪಿ.ಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ, ಎರಡು ಮತ್ತು ಹೆಚ್ಚಿನ ಸದಸ್ಯರಿದ್ದಲ್ಲಿ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತದೆ.
ಇದನ್ನು ಓದಿ: ಹಿಜಾಬ್ ಧರಿಸೇ ಪರೀಕ್ಷೆ ಬರೆಯಲು ಬಂತು ಅನುಮತಿ – ಪರ್ಮಿಷನ್ ಕೊಟ್ಟಿದ್ಯಾರು ಗೊತ್ತಾ ?!