Scam: ಕಾರ್ಮಿಕನ ಖಾತೆಗೆ ಬಂದು ಸೇರಿತು ಭರ್ಜರಿ 200 ಕೋಟಿ ರೂ!!! ಆದಾಯ ಇಲಾಖೆಯಿಂದ ನೋಟಿಸ್‌ ಬಂದಾಗ ಬಡ ಕಾರ್ಮಿಕ ಮಾಡಿದ್ದೇನು ಗೊತ್ತೇ?

delhi news rs.200 crore deposited in the bank account of a daily worker income tax department issues notice

Rs.200 Crore Deposited in Bank: ದಿನಗೂಲಿ ಕಾರ್ಮಿಕನೋರ್ವನ ಬ್ಯಾಂಕ್‌ ಖಾತೆಯಲ್ಲಿ (Daily Worker in Delhi) ಸುಮಾರು 200 ಕೋಟಿ ಹಣ ಜಮಾ ಆಗಿರುವುದು ಕಂಡು ಬಂದಿದ್ದು, ನಿಜಕ್ಕೂ ಸಂಚಲನ ಮೂಡಿಸಿದೆ. ಈ ಘಟನೆಗೆ ಪೂರಕವಾಗಿ ಆದಾಯ ಇಲಾಖೆ ಕೂಡಾ ತೆರಿಗೆ ಇಲಾಖೆ ನೋಟಿಸ್‌ (Income Tax Department Notice) ನೀಡಿದೆ.

ಈ ಘಟನೆ ಉತ್ತರ ಪ್ರದೇಶದ ದಿನಗೂಲಿ ಕಾರ್ಮಿಕನ ಬಾಳಲ್ಲಿ ನಡೆದಿದೆ. ಬಸ್ತಿ ಜಿಲ್ಲೆಯ ಬಟಾನಿಯಾ ಗ್ರಾಮದ ನಿವಾಸಿ ಶಿವಪ್ರಸಾದ್‌ ಎಂಬಾತನೇ ಈ ಸಂಕಷ್ಟಕ್ಕೆ ಒಳಗಾದ ವ್ಯಕ್ತಿ.

ಇತ್ತೀಚೆಗಷ್ಟೇ ಅವರ ಖಾತೆಗೆ ಇಷ್ಟು ಭಾರೀ ಮೊತ್ತದ ದುಡ್ಡು ಜಮೆ ಆಗಿದ್ದು, ನಿಜಕ್ಕೂ ಆತನಿಗೂ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮೂಲಗಳ ಪ್ರಕಾರ, ಈತ 2019ರಲ್ಲಿ ತನ್ನ ಪಾನ್‌ ಕಾರ್ಡ್‌ (Pan Card) ಕಳೆದುಕೊಂಡಿರುವುದಾಗಿ ತಿಳಿಸಿದ್ದು, ಈ ಕಾರ್ಡ್‌ ಸಹಾಯದಿಂದ ಯಾರೋ ತಮ್ಮ ವೈಯಕ್ತಿಕ ಬ್ಯಾಂಕ್‌ ಖಾತೆ ತೆರದು ಅಕ್ರಮ ವಹಿವಾಟು ಮಾಡಿದ್ದಾರೆ. ಈ ಹಿನ್ನೆಯಲ್ಲಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ದಿನಗೂಲಿ ಕಾರ್ಮಿಕ ಶಿವಪ್ರಸಾದ್‌ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಕೂಡಾ ಇದರ ಮೂಲ ಕಂಡು ಹಿಡಿಯಲು ಮುಂದಾಗಿದೆ.

 

ಇದನ್ನು ಓದಿ: Raj Kundra: ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿಚ್ಛೇದನ ?! ‘ನಾವು ಬೇರೆಯಾಗಿದ್ದೇವೆ’ ಪೋಸ್ಟ್ ವೈರಲ್ !!

Leave A Reply

Your email address will not be published.