Hair Care: ತಲೆಯ ಹೊಟ್ಟು ವಿಪರೀತ ಆಗಿದ್ಯಾ ?! ಹಾಗಿದ್ರೆ ಇಲ್ಲಿದೆ ನೋಡಿ ಸುಲಭದ ಮನೆ ಮದ್ದು
Lifestyle hair care easy home remedies for dandruff problem in kannada
Dandruff problem:ಹೆಚ್ಚಿನ ಮಂದಿ ಕೇಶರಾಶಿಯ ಬಗ್ಗೆ(Haircare)ವಿಶೇಷ ಗಮನ ಹರಿಸುವುದು ಸಾಮಾನ್ಯ!!! ನೀವೇನಾದರೂ ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ತಲೆಯ ಹೊಟ್ಟು(Dandruff problem) ವಿಪರೀತವಾಗಿದ್ದರೆ, ಇಲ್ಲಿದೆ ನೋಡಿ ಸುಲಭದ ಮನೆ (Simple Tricks)ಮದ್ದು!!
* ಸೀತಾಫಲ ಹಣ್ಣು ಸಿಹಿ ಮತ್ತು ಔಷಧೀಯ ಗುಣಗಳನ್ನು ಹೊಂದಿದ್ದು, ಕಪ್ಪು ಬೀಜಗಳನ್ನು ಅರೆದು ಕೂದಲಿಗೆ ಹಚ್ಚುವ ಮೂಲಕ ತಲೆಹೊಟ್ಟಿನಿಂದ ಪರಿಹಾರ ಕಂಡುಕೊಳ್ಳಬಹುದು.
* ತೆಂಗಿನ ಎಣ್ಣೆಯನ್ನು(Cocunut Oil)ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ಕಡಿಮೆಯಾಗುತ್ತದೆ. ಇದರ ಜೊತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ. ಇದಕ್ಕಾಗಿ, ತೆಂಗಿನ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ತಲೆಗೆ ಹಚ್ಚಿಕೊಂಡು 2 ಗಂಟೆ ಬಿಟ್ಟು ತೊಳೆಯಿರಿ.
* ನಿಂಬೆರಸದಲ್ಲಿದಲ್ಲಿ ಆಂಟಿಮೈಕ್ರೋಬಿಯಲ್ ಅಂಶವಿರುವ ಹಿನ್ನಲೆ ಇದನ್ನು ಬಳಕೆ ಮಾಡಿದರೆ, ತಲೆಯಲ್ಲಿರುವ ಹೊಟ್ಟು ಸಂಪೂರ್ಣವಾಗಿ ದೂರವಾಗುವ ಜೊತೆಗೆ ನಿಮ್ಮ ಕೂದಲು (hair care)ಫಳಫಳನೇ ಹೊಳೆಯುತ್ತದೆ.
* ತಲೆಯಲ್ಲಿ ಹೊಟ್ಟು ಜಾಸ್ತಿಯಿದ್ದರೆ, ಸ್ವಲ್ಪ ನಿಂಬೆ ರಸವನ್ನು ಹಾಕಿ ಮೊಸರಿನೊಂದಿಗೆ(curd)ಬೆರೆಸಿ, ಚೆನ್ನಾಗಿ ನೀವು ನಿಮ್ಮ ಕೂದಲಿಗೆ ಹಚ್ಚಿ. ಈ ರೀತಿ, ವಾರಕ್ಕೆ 1 ಬಾರಿ ಮಾಡುವುದರಿಂದ ತಲೆಯಿಂದ ಹೊಟ್ಟು ನಿವಾರಣೆಯಾಗುತ್ತದೆ.
* ಕೊತ್ತಂಬರಿ ಸೊಪ್ಪಿನ ಕಪ್ಪು ಬೀಜಗಳಲ್ಲಿ ವಿಟಮಿನ್-ಸಿ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಕೊತ್ತಂಬರಿ ಸೊಪ್ಪಿನ ಕಪ್ಪು ಬೀಜಗಳಲ್ಲಿ ಸತು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳು ಕೂದಲಿಗೆ ಹೆಚ್ಚು ಪ್ರಯೋಜನ ಉಂಟು ಮಾಡುತ್ತವೆ.
* ತುಳಸಿ ಎಲೆಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚಿ, 1 ಗಂಟೆಯ ಬಳಿಕ ನೀವು ತಲೆ ಸ್ನಾನ ಮಾಡಿದರೆ ಹೊಟ್ಟಿನಿಂದ ಪರಿಹಾರ ಕಂಡುಕೊಳ್ಳಬಹುದು. ಹೀಗೆ ವಾರಕ್ಕೆ ಒಂದು ಬಾರಿಯಾದರೂ ಹಚ್ಚುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.