Ration: ಆಧಾರ್ ಕಾರ್ಡ್ ಹೊಂದಿರೋರು ಕೂಡಲೇ ಈ ಕೆಲಸ ಮಾಡಿಸಿ- ಬಳಿಕ ದೇಶದ ಯಾವುದೇ ಮೂಲೆಯಲ್ಲೂ ರೇಷನ್ ಪಡೆಯಬಹುದು !

If you have aadhar card do this and you can get ration anywhere in the country

Ration: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ.
ಇದೀಗ ಉಚಿತ ಪಡಿತರ ವಿತರಣೆಯ (Ration) ಕುರಿತಾಗಿ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಈ ಕೂಡಲೇ ಈ ಕೆಲಸ ಮಾಡಿಸಿ. ಬಳಿಕ ನೀವು ದೇಶದ ಯಾವುದೇ ಮೂಲೆಯಲ್ಲೂ ರೇಷನ್ ಪಡೆಯಬಹುದು.

ಪಡಿತರ ಚೀಟಿದಾರರಿಗೆ ಉಚಿತ ಪಡಿತರ ವಿತರಣೆ ನೀಡಲಾಗುತ್ತಿದೆ. ಆದರೆ ಪಡಿತರ ಚೀಟಿ ಹೊಂದಿರುವವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸಿದಾಗ ವಿಳಾಸ ಬದಲಾವಣೆ ಆಗುವುದು ಸಹಜ. ಇದೀಗ ಇಂತವರು ಉಚಿತ ಪಡಿತರ ವಿತರಣೆಯಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸರಕಾರ ಹೊಸ ನಿಯಮ ರೂಪಿಸಿದೆ. ಕೇಂದ್ರ ಸರ್ಕಾರಾ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.

ಆಧಾರ್ ಲಿಂಕ್ ಮಾಡುವ ಮೂಲಕ, ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಅಡಿಯಲ್ಲಿ, ಫಲಾನುಭವಿಯು ಯಾವುದೇ ರಾಜ್ಯ ಮತ್ತು ನಗರಕ್ಕೆ ಹೋಗಿ ಉಚಿತ ಪಡಿತರ ಪ್ರಯೋಜನವನ್ನು ಪಡೆಯಬಹುದು. ಇದಕ್ಕಾಗಿ ಆನ್‌ ಲೈನ್‌ ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಅನ್ನು ನವೀಕರಿಸಬೇಕಾಗಿದೆ. ಈ ರೀತಿ ಮಾಡುವುದರಿಂದ ದೇಶದ ಯಾವುದೇ ಸ್ಥಳದಲ್ಲಿ ಕೂಡ ನೀವು ರೇಷನ್ ಪಡೆಯಬಹುದು.

ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ವಿಧಾನ:-

ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ನೀವು ನಿಮ್ಮ ರಾಜ್ಯದ PDS ನ ಅಧಿಕೃತ ವೆಬ್‌ ಸೈಟ್‌ ಗೆ ಹೋಗಬೇಕು. ನಂತರ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಈ ಸಂಖ್ಯೆಗೆ OTP ಬರುತ್ತದೆ.
ಈ OTP ಅನ್ನು ನಮೂದಿಸಿ ಮತ್ತು ಆಧಾರ್‌ ಗೆ ಪಡಿತರವನ್ನು ಲಿಂಕ್ ಮಾಡಲು ನಿಮ್ಮ ವಿನಂತಿಯನ್ನು ಸಲ್ಲಿಸಲಾಗುತ್ತದೆ.

 

ಇದನ್ನು ಓದಿ: Vitla: ಬೀಚ್ ಗೆಂದು ತೆರಳಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು! ಅಲೆಗಳ ರಭಸಕ್ಕೆ ಓರ್ವ ಬಾಲಕಿ ಸಾವು!

Leave A Reply

Your email address will not be published.