Home latest LPG Gas Cylinder: ಇವರಿಗೆ ಖಾಲಿ 500 ರೂ. ಗೆ ಸಿಗ್ತಿದೆ LPG ಸಿಲಿಂಡರ್ –...

LPG Gas Cylinder: ಇವರಿಗೆ ಖಾಲಿ 500 ರೂ. ಗೆ ಸಿಗ್ತಿದೆ LPG ಸಿಲಿಂಡರ್ – ಪಡೆಯಲು ಮುಗಿ ಬಿದ್ದ ಜನ

PM Ujjwala Yojana
Image source Credit: IBC 24.in

Hindu neighbor gifts plot of land

Hindu neighbour gifts land to Muslim journalist

PM Ujjwala Yojana (PMUY): ಕೇಂದ್ರ ಸರ್ಕಾರವು (Central Government)ಉಜ್ವಲ ಯೋಜನೆಯ (Pradhan Mantri Ujjwala Yojana)ಫಲಾನುಭವಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ(PM Ujjwala Yojana)ಫಲಾನುಭವಿಗಳಿಗೆ ಕೇಂದ್ರ ಸರ್ಕಾರ (Central Government) ದ್ರವೀಕೃತ ಪೆಟ್ರೋಲಿಯಂ ಅನಿಲ (LPG Cylinder) ಸಿಲಿಂಡರ್ ಮೇಲೆ 300 ರೂ.ಗಳ ಹೆಚ್ಚುವರಿ ಸಬ್ಸಿಡಿಗೆ. ಅನುಮೋದನೆ ನೀಡಿದೆ.

ಉಜ್ವಲ ಯೋಜನೆಯಡಿ, ಅರ್ಹ ಫಲಾನುಭವಿಗಳು ಇದೀಗ, ಗ್ಯಾಸ್ ಸಿಲಿಂಡರ್ಗಳ ಮೇಲೆ 300 ರೂ.ಗಳ ಹೆಚ್ಚಿನ ಸಬ್ಸಿಡಿಯನ್ನು ಪಡೆಯಬಹುದಾಗಿದ್ದು, ಈ ಮೂಲಕ ಉಜ್ವಲ ಫಲಾನುಭವಿಗಳು ಒಟ್ಟು 500 ರೂ.ಗಳ ವೆಚ್ಚದಲ್ಲಿ ಗ್ಯಾಸ್ ಸಿಲಿಂಡರ್ಗಳನ್ನು ಖರೀದಿಸಬಹುದು. ಕೇಂದ್ರ ಸಚಿವ ಅನುರಾಗ್ ಠಾಕೂರ್(Anurag Thakur) ಈ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದು, “ಉಜ್ವಲ ಯೋಜನೆಯ ಫಲಾನುಭವಿಗಳು ಈಗ ಹಿಂದಿನ 200 ರೂ.ಗಳಿಂದ 300 ರೂ.ಗಳ ಸಬ್ಸಿಡಿಯನ್ನು ಪಡೆಯುವುದನ್ನು ಖಾತ್ರಿ ಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ(3ನೇ ಹಂತ)ಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಭಾಗವಾಗಿ ಮಹಿಳೆಯರಿಗೆ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತಿದೆ. ಉಜ್ವಲ್ ಯೋಜನೆ ಮೂಲಕ ಮೂರನೇ ಹಂತದ ಎಲ್.ಪಿ.ಜಿ(LPG Cylinder)ಸಂಪರ್ಕ ಪಡೆಯುವ ಗ್ರಾಹಕರಿಗೆ ಎರಡು ಬರ್ನರ್ ಸ್ಟವ್, 14.2 ಕೆ.ಜಿ ಸಿಲಿಂಡರ್(LPG Cylinder) ಹಾಗೂ ಎರಡು 5 ಕೆ.ಜಿ ಸಿಲಿಂಡರ್, ಒಂದು ರೆಗ್ಯುಲೇಟರ್, ಒಂದು ಸುರಕ್ಷಾ ಹೋಸ್, ಡಿ.ಜಿ.ಸಿ.ಸಿ ಬುಕ್‌ಗಳು ಉಚಿತವಾಗಿ ದೊರೆಯಲಿದೆ. ಎಲ್.ಪಿ.ಜಿ ಅನಿಲ ಸಂಪರ್ಕವಿಲ್ಲದೇ ಇರುವ ಕುಟುಂಬದ ಮಹಿಳೆಯರು ಅವಶ್ಯಕ ದಾಖಲೆಗಳನ್ನು ಹತ್ತಿರದ ಎಲ್.ಪಿ.ಜಿ ವಿತರಕ ಕಂಪನಿಗೆ ಒದಗಿಸಿ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ. ಇದರ ಜೊತೆಗೆ, ಕ್ಯೂ.ಆರ್.ಕೋಡ್ (QR Code)ಮೂಲಕ ಯೋಜನೆಯ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಯಜಮಾನಿಯರೇ, 2ನೇ ಕಂತಿನ ‘ಗೃಹಲಕ್ಷ್ಮೀ’ ಹಣ ಈ ದಿನ ಖಾತೆಗೆ ಜಮಾ ಆಗಲಿದೆ