Coriander Effect: ಕೊತ್ತಂಬರಿ ಸೊಪ್ಪು ತಿಂದ್ರೂ ಬರುತ್ತೆ ಈ ಎಲ್ಲಾ ಕಾಯಿಲೆಗಳು !! ತಿನ್ನೋ ಮುನ್ನ ಈ ಸ್ಟೋರಿಯನ್ನೊಮ್ಮೆ ತಪ್ಪದೇ ಓದಿ
Coriander Effect: ಕೊತ್ತಂಬರಿ ಸೊಪ್ಪನ್ನು (Coriander Effect) ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುತ್ತಾರೆ. ಅದರಲ್ಲೂ ಕೆಲವರು ಕೊತ್ತಂಬರಿ ಸೊಪ್ಪನ್ನು ತಿನಿಸಿನ ಮೇಲೆ ಕೊನೆಗೆ ಡೆಕೋರೇಶನ್‌ಗೆ ಹಾಕಿದಂತೆ ಹಾಕುತ್ತಾರೆ. ಕೊತ್ತಂಬರಿ ಸೊಪ್ಪು ಅಡುಗೆಗೆ ವಿಭಿನ್ನ ಘಮವನ್ನು ನೀಡುತ್ತದೆ. ನೀವು ಚಾಟ್ಸ್‌ಗಳಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುವುದನ್ನು ನೋಡಿರಬಹುದು. ಇದನ್ನು ಹಸಿ, ಸಣ್ಣಗೆ ಕತ್ತರಿಸಿ ಆಹಾರದ ಮೇಲೆ ಉದುರಿಸುತ್ತಾರೆ. ಇದು ಆಹಾರವನ್ನು ಸುಂದರವಾಗಿಸುವುದಲ್ಲದೆ , ಉತ್ತಮ ಘಮವನ್ನೂ ನೀಡುತ್ತದೆ. ಆದರೆ, ಕೊತ್ತಂಬರಿ ಸೊಪ್ಪು ತಿಂದ್ರೂ ಕಾಯಿಲೆ ಬರುತ್ತೆ !! ತಿನ್ನೋ ಮುನ್ನ ಈ ಸ್ಟೋರಿಯನ್ನೊಮ್ಮೆ ತಪ್ಪದೇ ಓದಿ!!!.
ಹಲವಾರು ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು (Coriander Leaves) ಒಂದು ಪರಿಣಾಮಕಾರಿ ಗಿಡಮೂಲಿಕೆಯಾಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಆದರೆ, ಕೊತ್ತಂಬರಿ ಸೊಪ್ಪು ತಿಂದ್ರೆ ಕಾಯಿಲೆಯೂ ಬರುತ್ತೆ. ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ.
ಹಸಿರು ಕೊತ್ತಂಬರಿಯು ಕೆಲವು ಔಷಧೀಯ ಮತ್ತು ಆಮ್ಲೀಯ ಗುಣಗಳನ್ನು ಹೊಂದಿದೆ, ಇದು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮವನ್ನು ಸಂರಕ್ಷಿಸುತ್ತದೆ ಮತ್ತು ಅದನ್ನು ಸೂಕ್ಷ್ಮಗೊಳಿಸುತ್ತದೆ. ಆದರೆ ಅತಿಯಾದ ಸೇವನೆಯಿಂದ ಸೂರ್ಯನ ಕಿರಣಗಳು ತ್ವಚೆಯೊಳಗೆ ತೂರಿಕೊಳ್ಳುವುದೇ ಇಲ್ಲ, ಹಾಗಾಗಿ ಚರ್ಮವು ವಿಟಮಿನ್ ಕೆ ಯಿಂದ ವಂಚಿತವಾಗುತ್ತದೆ. ಅಲ್ಲದೆ, ಕೊತ್ತಂಬರಿಯು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೊತ್ತಂಬರಿ ಸೊಪ್ಪನ್ನು ಅತಿಯಾಗಿ ಸೇವಿಸುವುದರಿಂದ ಎದೆನೋವಿನಂತಹ ಗಂಭೀರ ಸಮಸ್ಯೆಗಳೂ ಉಂಟಾಗಬಹುದು. ಇದು ಅಸಹನೀಯ ನೋವನ್ನು ಉಂಟುಮಾಡುವುದು ಮಾತ್ರವಲ್ಲದೇ ದೀರ್ಘಕಾಲದವರೆಗೆ ಇರುತ್ತದೆ. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಅತಿಸಾರ, ನಿರ್ಜಲೀಕರಣ ಉಂಟಾಗುತ್ತದೆ. ಹಾಗಾಗಿ ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಸೇವಿಸಿ!!!
ಇದನ್ನು ಓದಿ: Food Tips: ಹುಳಿ ಬಂದಿರೋ ಹಿಟ್ಟಲ್ಲಿ ಇಡ್ಲಿ- ದೋಸೆ ಮಾಡಿ ತಿಂತೀರಾ ?! ಯಪ್ಪಾ ದೇವ್ರೇ.. ಇದೆಷ್ಟು ಡೇಂಜರ್ ಗೊತ್ತಾ ?!