Home latest Deadly Accident: ಊಟಕ್ಕೆಂದು ಹೊರಗೆ ಬಂದಿದ್ದ ಸ್ನೇಹಿತರಿಗೆ ಯಮರೂಪದಲ್ಲಿ ಬಂದ ಲಾರಿ! ಸ್ಥಳದಲ್ಲೇ ನಾಲ್ವರು ಗೆಳೆಯರ...

Deadly Accident: ಊಟಕ್ಕೆಂದು ಹೊರಗೆ ಬಂದಿದ್ದ ಸ್ನೇಹಿತರಿಗೆ ಯಮರೂಪದಲ್ಲಿ ಬಂದ ಲಾರಿ! ಸ್ಥಳದಲ್ಲೇ ನಾಲ್ವರು ಗೆಳೆಯರ ಸಾವು!!

Vijayapura

Hindu neighbor gifts plot of land

Hindu neighbour gifts land to Muslim journalist

Vijayapura: ಅಪರಿಚಿತ ವಾಹನವೊಂದು ನಾಲ್ವರು ಯುವಕರ ಮೇಲೆ ಹರಿದ ಪರಿಣಾಮ ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈ ಘಟನೆ ವಿಜಯಪುರದ (Vijayapura) ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಟೋಲ್‌ಗೇಟ್‌ ಬಳಿ ನಡೆದಿದೆ.

ವಿಜಯಪುರದ ವಜ್ರಹನುಮಾನ್ ನಗರದ ಶಿವಾನಂದ ಚೌಧರಿ(25), ಸುನೀಲ್​(26), ಈರಣ್ಣ(26), ಪ್ರವೀಣ್ ಪಾಟೀಲ್(30) ಮೃತ ವ್ಯಕ್ತಿಗಳು. ನಾಲ್ವರು ಸ್ನೇಹಿತರಾಗಿದ್ದು, ರಾತ್ರಿ ಊಟಕ್ಕಾಗಿ ಹೊರಗೆ ಬಂದಿದ್ದ ಸಂದರ್ಭದಲ್ಲಿ ಈ ಘೋರ ಘಟನೆ ನಡೆದಿದೆ.

ಸರ್ವಿಸ್‌ ರಸ್ತೆಯ ಡಿವೈಡರ್‌ ಮೇಲೆ ಕುಳಿತಿದ್ದ ನಾಲ್ವರ ಮೇಲೆ ವಾಹನ ಸಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ,

ಇದನ್ನೂ ಓದಿ: Increase Car Mileage: Petrol, Diesel ಉಳಿಸಲು ಇಲ್ಲಿದೆ ಸುಲಭ 5 ಮಾರ್ಗಗಳು! ಈ ಮೂಲಕ ನೀವು ಸಾವಿರಾರು ರುಪಾಯಿ ಉಳಿಸಬಹುದು!!!