Aadhaar Card Update: ಜನಸಾಮಾನ್ಯರೇ ಎಚ್ಚರ !! ‘ಆಧಾರ್ ಕಾರ್ಡ್ ‘ ಅಪ್ಡೇಟ್ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಪೂರಾ ಖಾಲಿ ಖಾಲಿ !!
aadhaar card news don't do these mistake while update Aadhaar card otherwise bank account will be empty
Aadhaar Card Update: ದೇಶದಲ್ಲಿ ಆಧಾರ್ ಕಾರ್ಡ್ (Aadahr Card)ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದ್ದು, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆಧಾರ್ ಕಾರ್ಡ್ (Aadhar Card)ಅನ್ನು ಭಾರತದ ನಾಗರಿಕರಿಗೆ ವಿತರಣೆ ಮಾಡುತ್ತದೆ. ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಹೆಚ್ಚಿನ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯವಶ್ಯಕ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿರುವಂತದ್ದೇ!! ಜನಸಾಮಾನ್ಯರೇ ಎಚ್ಚರ !! ನೀವೇನಾದರೂ ‘ಆಧಾರ್ ಕಾರ್ಡ್ ‘ ಅಪ್ಡೇಟ್(Aadhaar Card Update) ಮಾಡುವಾಗ ಈ ತಪ್ಪು ಮಾಡಿದರೆ ನಿಮ್ಮ ಖಾತೆ ಆಗಲಿದೆ ಪೂರಾ ಖಾಲಿ ಖಾಲಿ !!
ಇತ್ತೀಚಿಗೆ ಆಧಾರ್ ಕಾರ್ಡ್ ಹೆಸರಿನಲ್ಲಿ ಅನೇಕ ವಂಚನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಿಕೊಳ್ಳಲು ಎಂಆಧಾರ್ ಅಪ್ಲಿಕೇಶನ್ ಇಲ್ಲವೇ ಯುಐಡಿಎಐ(UIDAI) ಜಾಲತಾಣಕ್ಕೆ ಭೇಟಿ ನೀಡಬೇಕು. ಎಇಪಿಎಸ್ (AEPS)@ ಅಂದರೆ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಅನ್ನು ಆಧಾರ್ ಕಾರ್ಡ್ ಹೊಂದಿರುವವರಿಗೆ ಡೀಫಾಲ್ಟ್ ಆಗಿ ಜೋಡಣೆ ಮಾಡಲಾಗುತ್ತದೆ. ಹೀಗಾಗಿ, ನೀವು ಆಧಾರ್ ಕಾರ್ಡ್ ಮುಖಾಂತರ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಇಲ್ಲವೇ ಅನ್ ಬ್ಲಾಕ್ ಮಾಡಬಹುದು.
mAadhaar ಅಪ್ಲಿಕೇಶನ್ ಮೂಲಕ ಬಯೋಮೆಟ್ರಿಕ್ಸ್ ಅನ್ನು ಹೇಗೆ ಲಾಕ್ ಮಾಡುವುದು??
* mAadhaar ಆ್ಯಪ್ ತೆರೆದು ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
* ಅಪ್ಲಿಕೇಶನ್ ಬಲ ಸೈಟ್ ನ ಮೇಲೆ ಕಂಡುಬರುವ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
* ಆ ಬಳಿಕ, ಬಯೋಮೆಟ್ರಿಕ್ ಸೆಟ್ಟಿಂಗ್ ಗಳ ಮೇಲೆ ಕ್ಲಿಕ್ ಮಾಡಿಕೊಂಡು ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಲಾಕ್ ಆಯ್ಕೆಯನ್ನು ಟಿಕ್ ಮಾಡಿಕೊಳ್ಳಿ.
* ನೀವು ಓಕೆ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಆಧಾರ್ ನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
* ನೀವು ಒಟಿಪಿಯನ್ನು ನಮೂದಿಸಿದರೆ ನಿಮ್ಮ ಬಯೋಮೆಟ್ರಿಕ್ ವಿವರಗಳು ಲಾಕ್ ಆಗುತ್ತವೆ.
ಎಂಆಧಾರ್ ಅಪ್ಲಿಕೇಶನ್ ಮುಖಾಂತರ ಬಯೋಮೆಟ್ರಿಕ್ಸ್ ಅನ್ನು ಅನ್ ಬ್ಲಾಕ್ ಮಾಡಲು mAadhaar ಅಪ್ಲಿಕೇಶನ್ ತೆರೆದುಕೊಂಡು ಮೆನು ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
# ಆ ಬಳಿಕ ಬಯೋಮೆಟ್ರಿಕ್ ಸೆಟ್ಟಿಂಗ್ ಗಳ ಮೇಲೆ ಕ್ಲಿಕ್ ಮಾಡಿಕೊಳ್ಳಿ.
# ಬಯೋಮೆಟ್ರಿಕ್ ಲಾಕ್ಸ್‌ನ್ ಡ್ರಾಪ್-ಡೌನ್ ಆಯ್ಕೆ ಮಾಡಿಕೊಳ್ಳಿ.
# ನಿಮ್ಮ ಬಯೋಮೆಟ್ರಿಕ್ ಅನ್ನು ತಾತ್ಕಾಲಿಕವಾಗಿ ಅನ್ ಲಾಕ್ ಮಾಡಲಾಗುತ್ತದೆ. ಈ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಬಯೋಮೆಟ್ರಿಕ್ ವಿವರಗಳು 10 ನಿಮಿಷಗಳವರೆಗೆ ಅನ್ ಲಾಕ್ ಆಗುತ್ತವೆ.
ಆಧಾರ್ ಕಾರ್ಡ್ ವಂಚನೆಯಿಂದ ಪಾರಾಗುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ mAadhaar ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಆ ಬಳಿಕ, ಈ ಅಪ್ಲಿಕೇಶನ್ ಗೆ 4 ಅಂಕಿಗಳ ಪಾಸ್ ವರ್ಡ್ ಹೊಂದಿಸಿ.
ಇದನ್ನೂ ಓದಿ: Parliament Election: ಲೋಕಸಭಾ ಚುನಾವಣೆ- ಈ ಭಾರಿ BJPಯಿಂದ ಇಬ್ಬರು ನಾಯಕಿಯರು ಕಣಕ್ಕೆ ?!