Watching Movies On Mobile While Driving: ವಾಹನ ಸವಾರರಿಗೆ ಬಂತು ಹೊಸ ಟಫ್ ರೂಲ್ಸ್- ಡ್ರೈವ್ ಮಾಡುವಾಗ ಈ ತಪ್ಪು ಮಾಡಿದ್ರೆ ಜೈಲು ಫಿಕ್ಸ್
Maharashtra govt warns to Vechicle drivers watching movies on mobile while driving is dangerous latest news updates
Watching Movies On Mobile While Driving: ಕಾರ್, ಬಸ್, ಆಟೋ ಸೇರಿದಂತೆ ಎಲ್ಲ ರೀತಿಯ ವಾಹನ ಚಾಲಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ(Mobile Phone)ಸಿನಿಮಾ ನೋಡುತ್ತಾ ವಾಹನ ಚಲಾಯಿಸುವ ಪ್ರಕರಣಗಳು(Rules Break)ದಿನೇ ದಿನೇ ಏರಿಕೆಯಾಗುತ್ತಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ (Maharashtra)ಸರ್ಕಾರ ಖಡಕ್ ವಾನಿಂಗ್ ನೀಡಿದೆ.
ಈ ಕುರಿತು ಮಹಾರಾಷ್ಟ್ರದ ನಾಗಪುರದಲ್ಲಿ ಮಾತನಾಡಿದ ಮಹಾರಾಷ್ಟ್ರ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ವಾಹನ ಚಾಲಕರು ತಮ್ಮ ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ವಿಡಿಯೋ ನೋಡುವುದು ಗಂಭೀರ ವಿಚಾರ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 15 ರಂದು ಮುಂಬೈ – ನಾಗಪುರ ಸಮೃದ್ದಿ ಎಕ್ಸ್‌ಪ್ರೆಸ್ ಹೈವೇನಲ್ಲಿ ಮಿನಿ ಬಸ್ ಒಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತದಲ್ಲಿ 12 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಸಮೃದ್ದಿ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಸಂಭವಿಸಲು ಅನೇಕ ಕಾರಣಗಳಿದ್ದು, ಅತಿ ವೇಗದ ವಾಹನ ಚಾಲನೆ, ಟಯರ್ ಸ್ಫೋಟ ಕೂಡ ಸೇರಿಕೊಂಡಿದೆ. ಈ ಕುರಿತಂತೆ ವಿಡಿಯೋ ವೊಂದು ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ನಾಗಪುರದಿಂದ ಪುಣೆ ಮಾರ್ಗದಲ್ಲಿ ಪ್ರಯಾಣಿಸುವ ಖಾಸಗಿ ಟ್ರಾವಲ್ಸ್ ಬಸ್ ಚಾಲಕನೊಬ್ಬ, ವಾಹನ ಚಲಾಯಿಸುವ ವೇಳೆ ತನ್ನ ಮೊಬೈಲ್ ಫೋನ್‌ನಲ್ಲಿ ಸಿನಿಮಾ ನೋಡುತ್ತಾ ವಾಹನ ಚಲಾಯಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಆರ್‌ಟಿಒ ಮತ್ತು ಪೊಲೀಸರು ಎಚ್ಚೆತ್ತುಕೊಂಡು ವಾಹನ ಚಾಲಕ ಹಾಗೂ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚಿದ್ದು ಮಾತ್ರವಲ್ಲದೇ, ವಾಹನ ಚಾಲಕ ಮತ್ತು ಟ್ರಾವಲ್ಸ್ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ವಾಹನ ಚಾಲಕರ ಈ ರೀತಿಯ ವರ್ತನೆ ಪ್ರಯಾಣಿಕರ ಜೀವಕ್ಕೆ ಸಂಚಕಾರ ತಂದೊಡ್ಡಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಆರೋಪಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಎಂದಿಗೂ ಈ ಪದಾರ್ಥಗಳಿಗೆ ನಿಂಬೆ ರಸ ಸೇರಿಸಬೇಡಿ, ಹೆಚ್ಚು ಕಡಿಮೆ ಆದ್ರೆ ಹಾರುತ್ತೆ ಪ್ರಾಣ