Bus Ticket Price: ಮಹಿಳೆಯರ ಬೆನ್ನಲ್ಲೇ ಪುರುಷ ಪ್ರಯಾಣಿಕರಿಗೂ ಭರ್ಜರಿ ಗುಡ್ ನ್ಯೂಸ್ – ಕೇವಲ 1ರೂ. ಗೆ ಟಿಕೆಟ್ ಬುಕ್ ಮಾಡಿ, ಬಸ್ಸಿನಲ್ಲಿ ಪ್ರಯಾಣಿಸಿ

Karnataka news Dasara festival travel offer book bus ticket with price only 1 rs

Bus Ticket Price: ದಸರಾ ಹಬ್ಬದ ಸಂಭ್ರಮ ಎಲ್ಲೆಡೆ ಕಳೆ ಕಟ್ಟಿದ್ದು, ದಸರಾ ಹಬ್ಬ ಆಚರಿಸಲು ಪಟ್ಟಣದಿಂದ(Bengaluru News) ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಪ್ರವಾಸಿ ತಾಣಗಳಿಗೆ (Dasara Travel Plan) ತೆರಳುವ ಯಾತ್ರಿಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆ ಬಸ್ ಟಿಕೆಟ್ ದರ (Bus Ticket Price) ದುಬಾರಿಯಾಗಿದೆ. ಈ ನಡುವೆ, ಪ್ರಯಾಣಿಕರಿಗೆ ಭರ್ಜರಿ ಖುಷಿ ಸುದ್ದಿ ಇಲ್ಲಿದೆ.

ಶಕ್ತಿ ಯೋಜನೆಯಿಂದ ಫ್ರೀ ಬಸ್ಸಿನಲ್ಲಿ ಟ್ರಿಪ್ ಹೊಡೆಯುತ್ತಿದ್ದ ಮಹಿಳೆಯರ ಕಂಡು ಬೇಸರ ಪಡುತ್ತಿದ್ದ ಪುರುಷರಿಗೂ ಕೂಡ ಖುಷಿ ಸುದ್ದಿ ಇಲ್ಲಿದೆ. ದಸರಾ ಹಬ್ಬದ ಹಿನ್ನೆಲೆ ಪುರುಷರಿಗೆ ಕೇವಲ 1 ರೂಪಾಯಿಗೆ ಬಸ್ ಟಿಕೆಟ್ ಬುಕ್ ಮಾಡಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ಸಂಸ್ಥೆ Abhi Bus ಕೇವಲ 1 ರೂ.ಗೆ ಬಸ್ ಟಿಕೆಟ್ ಬುಕಿಂಗ್ ಮಾಡಲು ಅನುವು ಮಾಡಿಕೊಟ್ಟಿದೆ. ಒಂದೇ ಒಂದು ರೂಪಾಯಿಯಲ್ಲಿ ಪ್ರಯಾಣಿಕರು ಬಸ್ ಟಿಕೆಟ್ ಬುಕ್ ಮಾಡಿ ಪ್ರಯಾಣ ಮಾಡಬಹುದು. ಆದರೆ,ಇಲ್ಲಿ ಪ್ರಯಾಣಿಕರು ಗಮನಿಸಬೇಕಾದ ಸಂಗತಿ ಎಂದರೆ, ಈ ಆಫರ್ ಅಕ್ಟೋಬರ್ 19, 2023 ಮತ್ತು ಅಕ್ಟೋಬರ್ 25, 2023 ರವರೆಗೆ ಮಾತ್ರವೇ ಪ್ರಯಾಣ ಮಾಡಲು ಮಾನ್ಯವಾಗುತ್ತದೆ.

ಇದನ್ನೂ ಓದಿ: Chaitra Fraud Case: ಚೈತ್ರಾ ಟಿಕೆಟ್ ಡೀಲ್ ಪ್ರಕರಣ- ಹಾಲಶ್ರೀ ಸ್ವಾಮಿಜಿಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್ !!

Leave A Reply

Your email address will not be published.