Gruha Jyothi Scheme Burden :ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್- 10 – 20 ರೂ. ಬರ್ತಿದ್ದ ವಿದ್ಯುತ್‌ ಬಿಲ್‌’ನಲ್ಲಿ ಭಾರೀ ಹೆಚ್ಚಳ !!

Karnataka news Congress guarantee burden gruha Jyothi scheme beneficiaries bill increased

Gruha Jyothi Scheme Burden : ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆ (Gruha Jyothi Scheme) ಘೋಷಿಸಿದ ಬೆನ್ನಲ್ಲೇ, ರಾಜ್ಯದಲ್ಲಿ ಹಲವು ಗ್ರಾಹಕರಿಗೆ ಝೀರೋ ಬಿಲ್ ಬರಿತ್ತಿದ್ದಲ್ಲಿ ಇನ್ನೂ ದುಬಾರಿ ವಿದ್ಯುತ್ ಬಿಲ್ (Gruha Jyothi Scheme Burden)ಬಂದಿದ್ದು, ಈ ರೀತಿ ವಿದ್ಯುತ್ ಬಿಲ್ (Electricity Bill)ದಿಡೀರ್ ಏರಿಕೆಗೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಗ್ರಾಹಕರಲ್ಲಿ ಉದ್ಭವವಾಗಿದೆ.

 

ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ 10 ಇಲ್ಲವೇ 20 ರೂ ಬರುತ್ತಿದ್ದ ಬಿಲ್ನ ಮೊತ್ತ ಅಕ್ಟೋಬರ್ನಿಂದ ಹೆಚ್ಚಾಗಿದೆ.ವರ್ಷದ ಒಟ್ಟು ವಿದ್ಯುತ್ ಬಳಕೆ ಆಧಾರದ ಮೇಲೆ ತಿಂಗಳ ಸರಾಸರಿ ಲೆಕ್ಕ ಹಾಕಿ, ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಯುನಿಟ್ ವಿದ್ಯುತ್ ಉಚಿತ ನೀಡಲಾಗುತ್ತದೆ. ಈ ನಡುವೆ, ಹಿಂದಿನ ತಿಂಗಳು ಗೃಹ ಜ್ಯೋತಿ (Gruha Jyoti)ಗ್ಯಾರಂಟಿಯಿಂದ ಶೂನ್ಯ, 10, 20, 30 ರೂ. ವಿದ್ಯುತ್ ಬಿಲ್ ಪಾವತಿಸಿದ ಮಂದಿಗೆ ಈ ತಿಂಗಳು 300, 400, 600 ರೂ. ವರೆಗೆ ಹೆಚ್ಚುವರಿ ಮೊತ್ತದ ಬಿಲ್ ಬಂದಿದ್ದು, ಇದಕ್ಕೆ ಹೆಚ್ಚಿದ ಫ್ಯಾನ್, ಎಸಿ ಬಳಕೆ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ

ಮಳೆಗಾಲದಲ್ಲಿ ಹೆಚ್ಚು ವಿದ್ಯುತ್ ಬಳಕೆಯ ಅವಶ್ಯಕತೆ ಇರುವುದಿಲ್ಲ. ಆದರೆ, ಬೇಸಿಗೆಯ ಸೆಖೆಯ ಬೇಗೆಗೆ ಫ್ಯಾನ್ , ಎಸಿ ಬಳಕೆ ಅನಿವಾರ್ಯ.ಈ ರೀತಿ, ಎಸಿ, ಫ್ಯಾನ್ ಹೆಚ್ಚು ಬಳಕೆ ಮಾಡುತ್ತಿರುವ ಹಿನ್ನೆಲೆ ಗೃಹ ಜ್ಯೋತಿ ಫಲಾನುಭವಿಗಳಿಗೆ ವಿದ್ಯುತ್ ಬಿಲ್ ಡಬಲ್ ಬಂದಿದೆ.ಈ ನಡುವೆ, ಕರಾವಳಿ ಭಾಗದಲ್ಲಿ ಬಹುತೇಕ ಗ್ರಾಹಕರ ವಿದ್ಯುತ್ ಬಳಕೆ ಗೃಹ ಜ್ಯೋತಿಯ ಸರಾಸರಿ ಮಿತಿ ಮೀರಿ ಹೆಚ್ಚು ಬಳಕೆಯಾಗಿದೆ. ಇದಲ್ಲದೇ, ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 1.56 ರೂ. ವಿದ್ಯುತ್ ವೆಚ್ಚ ಮತ್ತು ಯುನಿಟ್ ಮೇಲೆ ಶೇ.9 ರಷ್ಟು ಜಿಎಸ್ಟಿ ಸೇರುವ ಹಿನ್ನೆಲೆ ಹೆಚ್ಚುವರಿ ಯೂನಿಟ್ ವೆಚ್ಚ ತಲಾ 9 ರೂ. ವರೆಗಿದೆ.

ಮಳೆಗಾಲದಲ್ಲಿ 50 ಯುನಿಟ್ ವಿದ್ಯುತ್ ಬಳಕೆ ಆಗುವ ಮನೆಗೆ ಬೇಸಿಗೆಯಲ್ಲಿ 130- 150 ಯುನಿಟ್ ವರೆಗೆ ವಿದ್ಯುತ್ ಖರ್ಚಾಗುತ್ತದೆ. ಗೃಹ ಜ್ಯೋತಿ ನಿಯಮಾನುಸಾರ, ಈ ರೀತಿಯ ಗ್ರಾಹಕರ ತಿಂಗಳ ಸರಾಸರಿ ವಿದ್ಯುತ್ 100-110 ಯುನಿಟ್ ಬಳಕೆ ಆಗುತ್ತದೆ. ಹೀಗಾಗಿ, ಬೇಸಿಗೆಯಲ್ಲಿ ಹೆಚ್ಚುವರಿ ಬಿಲ್ ಸಾಮಾನ್ಯ ಎನ್ನುವುದು ವಿದ್ಯುತ್ ಅಧಿಕಾರಿಗಳ ಅಭಿಪ್ರಾಯ ವಾಗಿದೆ. ಇದರ ಜೊತೆಗೆ ಫ್ರೀ ಫ್ರೀ ಎಂದು ಬೇಕಾಬಿಟ್ಟಿ ವಿದ್ಯುತ್ ಬಳಸುತ್ತಾ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಕೂಡ ಹೆಚ್ಚಾಗುತ್ತಿದೆ. ಇದಲ್ಲದೆ, ವಿವಿಧ ಕಾರಣಗಳಿಗೆ ಈ ತಿಂಗಳ ವಿದ್ಯುತ್ ಬಿಲ್ ಹೆಚ್ಚಾಗಿ ಬಂದಿದೆ.

ಇದನ್ನೂ ಓದಿ: JDS ನಿಂದ ಹೆಚ್​ಡಿಕೆ ಉಚ್ಚಾಟನೆ ?! ಏನಂದ್ರು ಗೊತ್ತಾ ಕುಮಾರಸ್ವಾಮಿ ?!

Leave A Reply

Your email address will not be published.