Chaitra Fraud Case: ಚೈತ್ರಾ ಟಿಕೆಟ್ ಡೀಲ್ ಪ್ರಕರಣ- ಹಾಲಶ್ರೀ ಸ್ವಾಮಿಜಿಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್ !!
Karnataka news Chaitra MLA ticket fraud case High Court denied bail to halashree Swamiji latest news
Halashree Swamiji : ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಅಭಿನವ ಹಾಲವೀರಪ್ಪಜ್ಜರವರು (Halashree Swamiji)ಉದ್ಯಮಿ ಗೋವಿಂದ್ ಬಾಬು ಅವರ ಕಡೆಯಿಂದ ₹1.50 ಕೋಟಿ ಹಣವನ್ನು ಪಡೆದಿರುವ ವಂಚನೆ ಕೇಸ್ನಲ್ಲಿ ಬಂಧಿಸಲಾಗಿದೆ. ಬಿಜೆಪಿ (BJP)ಎಂಎಲ್ಎ ಟಿಕೆಟ್ ಕೊಡಿಸಲು ಹಣ ಪಡೆದ ಪ್ರಕರಣದಲ್ಲಿ ಬಂಧಿತರಾಗಿರುವ ತಾಲೂಕಿನ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಕೋರ್ಟ್ ಜಾಮೀನು(Halashree Swamiji Bail Rejected) ನಿರಾಕರಿಸಿದೆ.
ಹಿಂದೂ ಕಾರ್ಯಕರ್ತೆ ಚೈತ್ರಾ ಅವರು ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಗೆ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ. ಈ ವಂಚನೆ ಪ್ರಕರಣದಲ್ಲಿ 1.50 ಕೋಟಿ ರೂ. ಪಡೆದ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು ಸೆಪ್ಟೆಂಬರ್ 19 ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು. ಇದೀಗ, ನ್ಯಾಯಾಂಗ ಬಂಧನದಲ್ಲಿರುವ ಹಾಲಶ್ರೀ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಾಧೀಶರಾದ ಟಿ. ಗೋವಿಂದಯ್ಯರವರು ಆದೇಶ ಹೊರಡಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಹೊರಬೀಳಬೇಕಾಗಿದೆ. ಅಕ್ಟೋಬರ್ 11 ರಂದು ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ಸಿಸಿಬಿ ಪೊಲೀಸರು ಅವರ ತಂಡದಿಂದ ಶೇ. 80 ರಷ್ಟು ಹಣ ಜಪ್ತಿ ಮಾಡಿ ಹಿಂಪಡೆದಿದ್ದಾರೆ.
ಇದನ್ನೂ ಓದಿ: Self Harming: ಗರಡಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ 13ರ ಕುಸ್ತಿಪಟು ಬಾಲಕಿ !!