Navratri Festival : ನವರಾತ್ರಿ ಸಮಯದಲ್ಲಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಬೇಡಿ !! ಇಟ್ರೆ ನೀವು ಕೆಟ್ಟಂತೆ !!
Navratri Festival: ನವರಾತ್ರಿ ಹಬ್ಬ (Navratri Festival) ಶುರುವಾಗಿ ಎರಡು ದಿನಗಳು ಈಗಾಗಲೇ ಕಳೆದಿದೆ. ಈ ಹಬ್ಬವನ್ನು ಪ್ರತಿಯೊಬ್ಬರೂ ಸಹ ತಮ್ಮ ತನು-ಮನ ಅರ್ಪಿಸಿ ಭಯ ಭಕ್ತಿಯಿಂದ ಹಾಗೂ ಶ್ರದ್ಧೆ ಯಿಂದ ಆಚರಣೆ ಮಾಡುತ್ತಾರೆ. ಪ್ರತಿ ದೇವಸ್ಥಾನದಲ್ಲಿಯೂ ಕೂಡ, ದೇವಿಗೆ ಒಂಬತ್ತು ದಿನಗಳ ಕಾಲ ವಿಶೇಷವಾಗಿ ಅಲಂಕರಿಸಿ, ಪಟ್ಟದಲ್ಲಿ ಕೂರಿಸಿ, ಮನೆಯಲ್ಲಿಯೇ ಮಾಡಿದ ವಿವಿಧ ಬಗೆಯ ಸಿಹಿ ತಿಂಡಿಗಳು, ನೈವೇದ್ಯಗಳನ್ನು ದೇವಿಗೆ ಅರ್ಪಿಸಿ, ಕೊನೆಯ ದಿನ ವಿಜಯದಶಮಿಯಾಗಿ ಆಚರಣೆ ಮಾಡುತ್ತಾರೆ. ಆದರೆ, ದೇವಿಯ ಕೃಪೆ ನಿಮ್ಮ ಮೇಲೆ ಮತ್ತು ನಿಮ್ಮ ಮನೆಯ ಮೇಲೆ ಸದಾ ಇರಬೇಕು ಎಂದಾದರೆ ಇವತ್ತೆ ತಪ್ಪದೇ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ.
ಮುರಿದ ಗಾಜು ಮತ್ತು ಕನ್ನಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಹಾಗಾಗಿ, ಖಂಡಿತವಾಗಿಯೂ ನಿಮ್ಮ ಮನೆಯಿಂದ ಮುರಿದ ಗಾಜು ಮತ್ತು ಕನ್ನಡಿ ಇದ್ದರೆ ತೆಗೆದುಹಾಕಿ. ಹಾಗೆಯೇ ದೇವರ ಮುರಿದ ಪ್ರತಿಮೆಗಳು ಮತ್ತು ಹಾನಿಗೊಳಗಾದ ಛಾಯಾಚಿತ್ರಗಳನ್ನು ಹರಿಯುವ ನೀರಿಗೆ ಎಸೆಯಬೇಕು. ನವರಾತ್ರಿಯ ಸಮಯದಲ್ಲಿ ಅಂತಹ ವಿಗ್ರಹಗಳು ಮತ್ತು ಚಿತ್ರಗಳನ್ನು ಮನೆಯಲ್ಲಿ ಇಡಬಾರದು.
ಮನೆಯಲ್ಲಿ ಏನಾದರೂ ಕೆಟ್ಟ ಅಥವಾ ಹಳಸಿದ ಆಹಾರ ಇದ್ದರೆ, ಅದನ್ನು ಮನೆಯಿಂದ ಹೊರಹಾಕಿ. ಹಾನಿಗೊಳಗಾದ ಬೂಟು ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಇಡಬಾರದು. ಅವು ಮನೆಗೆ ಬಡತನವನ್ನು ತರುತ್ತವೆ. ಇದನ್ನು ಮನೆಯಿಂದ ದೂರವಿಡಿ. ಮನೆಯಲ್ಲಿ ಇರಿಸಲಾದ ಮುರಿದ ಪಾತ್ರೆಗಳು ಬಡತನವನ್ನು ಆಹ್ವಾನಿಸುತ್ತವೆ.
ನವರಾತ್ರಿಯ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಯಲ್ಲಿ ಇಡಬಾರದು. ನಿಂತ ಗಡಿಯಾರಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಇದನ್ನು ಮನೆಯಿಂದ ಹೊರ ಹಾಕಿರಿ.