Ration Card Holder: ರೇಷನ್ ಕಾರ್ಡ್’ದಾರರಿಗೆ ಮಹತ್ವದ ಸುದ್ದಿ- ಡಿಸೆಂಬರ್ ಒಳಗೆ ಈ ಕೆಲಸ ಮಾಡದಿದ್ರೆ ನಿಮ್ಮ ಕಾರ್ಡ್ ರದ್ದಾಗೋದು ಪಕ್ಕಾ !!
Ration card update if this work is not done before December ration card canceled
Ration – Aadhar Link: ಪಡಿತರ ಚೀಟಿದಾರರೇ(Ration Card Holder)ಗಮನಿಸಿ, ಡಿಸೆಂಬರ್ ತಿಂಗಳ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು(Ration Card Cancel)ಖಚಿತ. ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್(Ration – Aadhar Link) ಮಾಡಿಸುವುದು ಕಡ್ಡಾಯವಾಗಿದ್ದು, ನೀವೇನಾದರೂ ಈ ಕೆಲಸ ಮಾಡದಿದ್ದರೆ, ಡಿಸೆಂಬರ್ ಅಂತ್ಯದವರೆಗೂ ಅವಕಾಶವಿದ್ದರೂ ಕೂಡ ಈಗಲೇ ಮಾಡಿಬಿಡುವುದು ಉತ್ತಮ.
ಕೇಂದ್ರ ಸರ್ಕಾರ(Central Government)ಪಡಿತರ ಚೀಟಿದಾರರೆಲ್ಲರು ಕೂಡ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಎಂದು ಸೂಚನೆ ನೀಡಿದ್ದು, ಈ ಮೊದಲು ನೀಡಿದ್ದ ಸಮಯಾವಕಾಶವನ್ನು ವಿಸ್ತರಣೆ ಮಾಡಿ ಡಿಸೆಂಬರ್ 30ರವರೆಗೆ ರೇಷನ್ ಕಾರ್ಡನ್ನು ಆಧಾರ್ ಜೋಡಣೆ ಮಾಡಿಸಲು ಅನುವು ಮಾಡಿಕೊಡಲಾಗಿದೆ. ಒಂದು ವೇಳೆ, ಈ ದಿನಾಂಕದೊಳಗಾಗಿ ನೀವು ರೇಷನ್ – ಆಧಾರ್ (Ration – Aadhar Link)ಲಿಂಕ್ ಮಾಡದೇ ಹೋದರೆ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ದಟ್ಟವಾಗಿದ್ದು, ಇದರ ಜೊತೆಗೆ ಮುಂದಿನ ದಿನಗಳಲ್ಲಿ ದಂಡ ತೆರಬೇಕಾಗಿ ಬರಬಹುದು.
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ವಿಧಾನ ಹೀಗಿದೆ ನೋಡಿ!!
* ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS)ಪೋರ್ಟಲ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
* ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿಕೊಂಡು ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ.
* ನಂತರ ಒಟಿಪಿ ನಮೂದಿಸಿಕೊಂಡು ಪಡಿತರ ಚೀಟಿ -ಆಧಾರ್ ಕಾರ್ಡ್ ಲಿಂಕ್ ಕ್ಲಿಕ್ ಮಾಡಿದರೆ, ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಲಿದೆ.
ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಕುಟುಂಬದ ಸದಸ್ಯರ ವಿವರ ನಿಖರವಾಗಿ ಸರ್ಕಾರಕ್ಕೆ ದೊರೆಯಲಿದ್ದು, ಈ ಮೂಲಕ ನಕಲಿ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Mangaluru: ಹಿಂದೂ ವ್ಯಾಪಾರಿಗಳ ಸಂಘಕ್ಕೆ ಬಿಗ್ ಶಾಕ್- ಭಾರೀ ವಿರೋಧದ ನಡುವೆಯೂ ಟೆಂಡರ್’ನಲ್ಲಿ ಮುಸ್ಲಿಮರ ಪಾಲಾದ್ವು 6 ಅಂಗಡಿಗಳು