Scholarship: ವಿದ್ಯಾರ್ಥಿಗಳೇ, ಜಸ್ಟ್ ಹೀಗ್ ಮಾಡಿ, ಕೂತಲ್ಲೇ 10,000 ಸ್ಕಾಲರ್ ಶಿಪ್ ಪಡೆಯಿರಿ – ಈ ಚಾನ್ಸ್ ಹೆಚ್ಚು ದಿನ ಇರೋಲ್ಲ !

Education news SBIF Asha scholarship for school student 2023 apply online

SBIF Asha scholarship: ಎಸ್‌ಬಿಐ ಫೌಂಡೇಶನ್‌ನ ಆಶ್ರಯದಲ್ಲಿ ಆಶಾ ವಿದ್ಯಾರ್ಥಿವೇತನ (Scholarship) 2023-24ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ, ಈ ವಿದ್ಯಾರ್ಥಿವೇತನವನ್ನು(SBIF Asha scholarship) ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳೇ, ಜಸ್ಟ್ ಹೀಗ್ ಮಾಡಿ, ಕೂತಲ್ಲೇ 10,000 ಸ್ಕಾಲರ್ ಶಿಪ್ ಪಡೆಯಿರಿ. ಈ ಚಾನ್ಸ್ ಹೆಚ್ಚು ದಿನ ಇರೋಲ್ಲ !

ಸ್ಕಾಲರ್‌ಶಿಪ್ ವಿದ್ಯಾರ್ಥಿವೇತನ ಪಡೆಯಲು ಬೇಕಾದ ಅರ್ಹತೆಗಳೇನು?
6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿರಬೇಕು. ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ INR 3,00,000 ಗಿಂತ ಹೆಚ್ಚಿರಬಾರದು.

ಬೇಕಾಗುವ ದಾಖಲೆಗಳೇನು?
• ಪಾಸ್ ಪೋರ್ಟ್ ಅಳತೆ ಭಾವಚಿತ್ರ
• ಆದಾಯ ಪ್ರಮಾಣ ಪತ್ರ
• ಆಧಾರ್ ಕಾರ್ಡ್
• ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆಯ ವಿವರಗಳು
• ವಿದ್ಯಾರ್ಥಿಗಳ ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿ

ಇದನ್ನೂ ಓದಿ: LPG Cylinder: ಇಂತವರಿಗಿನ್ನು ಸಿಗಲಿದೆ ಕೇವಲ 400ರೂ ಗೆ LPG ಸಿಲಿಂಡರ್, ಭಾರೀ ಮೊತ್ತದ ಪಿಂಚಣಿ ಹಣ !!

Leave A Reply

Your email address will not be published.