Kitchen Hacks: ನಿಮಗೆ ಈರುಳ್ಳಿ ಕತ್ತರಿಸಿ ಪ್ರಿಜ್ ನಲ್ಲಿ ಇಡೋ ಅಭ್ಯಾಸ ಉಂಟಾ?! ದೇವ್ರೇ.. ಇದೆಷ್ಟು ಡೇಂಜರ್ ಗೊತ್ತಾ ?
Lifestyle health news chopped onion must not be kept at refrigerator to avoid this problem
Chopped onion : ಈರುಳ್ಳಿ (Kitchen Hacks) ನಮ್ಮ ದಿನನಿತ್ಯದ ಅಡುಗೆಯ ಒಂದು ಬೇರ್ಪಡಿಸಲಾಗದ ಪದಾರ್ಥವಾಗಿದೆ. ಯಾವುದೇ ರೀತಿಯ ಅಡುಗೆಗಳನ್ನು ತಯಾರಿಸಿದರು ಅದಕ್ಕೆ ಈರುಳ್ಳಿ ಪ್ರಮುಖವಾಗಿ ಬೇಕಾಗುತ್ತದೆ. ಎಲ್ಲಾ ರೀತಿಯ ಅಡುಗೆಗಳಿಗೆ ವಿಶಿಷ್ಟವಾದ ಪರಿಮಳ ಮತ್ತು ರುಚಿಯನ್ನು ನೀಡಲು ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ, ಕೆಲವರು ತಮ್ಮ ಎಲ್ಲಾ ರೀತಿಯ ಅಡುಗೆಗಳಿಗೆ ಪದೇಪದೇ ಈರುಳ್ಳಿಯನ್ನು ಸಿಪ್ಪೆ ಬಿಡಿಸಲು ಸಾಧ್ಯವಾಗುವುದಿಲ್ಲ ಎಂದು ಸಿಪ್ಪೆತೆಗೆದು ಈರುಳ್ಳಿಗಳನ್ನು ಕತ್ತರಿಸಿ ಅವುಗಳನ್ನು ಫ್ರಿಜ್ನಲ್ಲಿ ಇಡುತ್ತಾರೆ. ಇದರಿಂದ ಸಮಯ ಉಳಿತಾಯವಾಗುತ್ತದೆ ಎನ್ನುವುದು ಅವರ ಭಾವನೆಯಾಗಿದೆ. ನಿಮಗೆ ಈರುಳ್ಳಿ ಕತ್ತರಿಸಿ(Chopped onion) ಪ್ರಿಜ್ ನಲ್ಲಿ ಇಡೋ ಅಭ್ಯಾಸ ಉಂಟಾ?! ದೇವ್ರೇ.. ಇದೆಷ್ಟು ಡೇಂಜರ್ ಗೊತ್ತಾ ?
ಈರುಳ್ಳಿಯಲ್ಲಿರುವ ಬಲವಾದ ವಾಸನೆ ಮತ್ತು ಪರಿಮಳವೂ ನಿಮ್ಮ ಖಾದ್ಯಗಳಿಗೆ ರುಚಿಯನ್ನು ನೀಡುತ್ತದೆ. ಆದರೆ ಇವುಗಳನ್ನು ನೀವು ಫ್ರಿಡ್ಜ್ ನಲ್ಲಿ ಸಂಗ್ರಹಿಸಿ ಇಟ್ಟಾಗ ಫ್ರಿಡ್ಜ್ ತೆರೆದಾಗ ದುರ್ವಾಸನೆಯನ್ನು ಉಂಟುಮಾಡುತ್ತವೆ. ತಜ್ಞರ ಪ್ರಕಾರ ಈರುಳ್ಳಿಯಲ್ಲಿ ಗಂಧಕ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಹಲವಾರು ರೀತಿಯ ಔಷಧೀಯ ಗುಣಗಳಿಂದ ಕೂಡಿದೆ ಮತ್ತು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಲಕ್ಷಣಗಳಿಂದ ಕೂಡಿದೆ. ಕೆಲವರು ಪದೇ ಪದೇ ಈರುಳ್ಳಿಯ ಸಿಪ್ಪೆಯನ್ನು ತೆಗೆದು ಕತ್ತರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಈರುಳ್ಳಿಯನ್ನು ಸಿಪ್ಪೆ ತೆಗೆದು ಕತ್ತರಿಸಿ ಶೇಖರಿಸಿಡುತ್ತಾರೆ. ಆದರೆ ಇದು ಉತ್ತಮವಾದ ವಿಧಾನವಲ್ಲ.
ಈರುಳ್ಳಿ ಅಥವಾ ಕತ್ತರಿಸಿದ ಈರುಳ್ಳಿಯನ್ನು ಫ್ರಿಜ್ ನಲ್ಲಿಟ್ಟರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ರೋಗಕಾರಕ ಬ್ಯಾಕ್ಟೀರಿಯಾದಿಂದಾಗಿ ಈರುಳ್ಳಿ ಆಕ್ಸಿಡೀಕರಣಗೊಳ್ಳುತ್ತದೆ ಮತ್ತು ಅದು ಕೊಳೆಯುತ್ತದೆ. ಈ ಕೊಳೆತ ಈರುಳ್ಳಿಯನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ. ಇದಲ್ಲದೇ, ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ರೆಫ್ರಿಜರೇಟರ್ನಲ್ಲಿಟ್ಟರೆ, ಅದರ ಪೌಷ್ಟಿಕಾಂಶದ ಮೌಲ್ಯವು ಕಳೆದುಹೋಗುತ್ತದೆ. ಏಕೆಂದರೆ ಈರುಳ್ಳಿ ರಸವು ಬ್ಯಾಕ್ಟೀರಿಯಾವನ್ನು ಹರಡುತ್ತದೆ.
ಈರುಳ್ಳಿಯನ್ನು ಕತ್ತರಿಸಿದ ನಂತರ ಅದನ್ನು ಎಂದಿಗೂ ತೆರೆದಿಡಬೇಡಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಇದು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ. ಪ್ಲಾಸ್ಟಿಕ್ ಅಥವಾ ಯಾವುದೇ ಲೋಹದ ಪಾತ್ರೆಗಳಲ್ಲಿ ಕತ್ತರಿಸಿದ ಈರುಳ್ಳಿಯನ್ನು ಶೈತ್ಯೀಕರಣಗೊಳಿಸಬೇಡಿ. ಬದಲಿಗೆ ಕತ್ತರಿಸಿದ ಈರುಳ್ಳಿಯನ್ನು ಗಾಳಿಯಾಡದ ಗಾಜಿನ ಡಬ್ಬದಲ್ಲಿ ಇಡಲು ಪ್ರಯತ್ನಿಸಿ.