Late sleep: ರಾತ್ರಿ ಮಲಗುವಾಗ ಹೀಗೆ ಮಾಡಿದ್ರೆ ಹೃದಯದ ಸಮಸ್ಯೆಗಳು ಬರೋದು 100% ಫಿಕ್ಸ್ !!

Health news late sleep may raise heart problem in future life

Late sleep : ಪ್ರತಿದಿನ ಕೇವಲ 90 ನಿಮಿಷಗಳ ಕಾಲ ತಡವಾಗಿ ಮಲಗುವುದರಿಂದ(Late Sleep)ಆಗುವ ಅಪಾಯದ ಬಗ್ಗೆ ನಿಮಗೆ ತಿಳಿದಿದೆಯೇ?? ನೀವೇನಾದರೂ ನಿದ್ರೆಗೆಡುತ್ತಿದ್ದರೆ ಈ ಸುದ್ಧಿ ಓದಲೇಬೇಕು!!

ಕೊಲಂಬಿಯಾ ಯುನಿವರ್ಸಿಟಿ ಮಹಿಳೆಯರ ಮೇಲೆ ಹೊಸ ಅಧ್ಯಯನವನ್ನು ನಡೆಸಿದ್ದು,ಪ್ರತಿದಿನ ಕೇವಲ 90 ನಿಮಿಷಗಳ ಕಾಲ ತಡವಾಗಿ ಮಲಗುವುದರಿಂದ ರಕ್ತನಾಳಗಳನ್ನು ಜೋಡಿಸುವ ಕೋಶಗಳ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಸಮಸ್ಯೆಗಳು ಎದುರಾಗುತ್ತವೆ. ನಿದ್ರೆಯ ಅವಧಿ ಕಡಿಮೆಯಾದರೆ ಹೃದಯ ಸಂಬಂಧಿ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎಂಬುದನ್ನು ಅಧ್ಯಯನವು (Research Report)ಬಹಿರಂಗಪಡಿಸಿದೆ. ಜರ್ನಲ್ ಸೈಂಟಿಫಿಕ್ ವರದಿಯಲ್ಲಿ ಈ ವಿಚಾರವನ್ನು ಪ್ರಕಟಿಸಲಾಗಿದೆ.

ಈ ಅಧ್ಯಯನ ಆರು ವಾರಗಳ ಕಾಲ ನಡೆದಿದ್ದು, ಉತ್ತಮ ವಿಶ್ರಾಂತಿ ಕೋಶಗಳಿಗಿಂತ ರಕ್ತನಾಳಗಳನ್ನು ಜೋಡಿಸುವ ಕೋಶಗಳು ಹಾನಿಕಾರಕ ಆಕ್ಸಿಡೆಂಟ್‌ಗಳಿಂದ ಸಮಸ್ಯೆಗೆ ಒಳಗಾಗುತ್ತವೆ. ಆರೋಗ್ಯವಾಗಿರುವ ಜನರು ಕಡಿಮೆ ನಿದ್ದೆ ಮಾಡಿದರೆ, ಅವರಲ್ಲಿ ಹೃದಯರೋಗದ ಅಪಾಯವು ಹೆಚ್ಚಾಗುತ್ತದೆ.ಆದರೆ, ಏಳರಿಂದ ಏಂಟು ಗಂಟೆಗಳ ಕಾಲ ಉತ್ತಮ ನಿದ್ದೆಯನ್ನು ಮಾಡಿರುವವರಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಬಂದಿದೆ ಎಂದು ವರದಿ ಮಾಹಿತಿ ನೀಡಿದೆ. ನಿದ್ರಾ ಕೊರತೆಯಿಂದ ಕೋಶಗಳು ಉರಿಯೂತ ಮತ್ತು ನಿಷ್ಕ್ರಿಯವಾಗಿರುವ ಜೀವಕೋಶಗಳು, ಹೃದಯರಕ್ತನಾಳದ ಕಾಯಿಲೆಯ ಬೆಳವಣಿಗೆಯ ಆರಂಭಿಕ ಹಂತ ತಲುಪುವ ಬಗ್ಗೆ ಅಧ್ಯಯನ ಮಾಹಿತಿ ನೀಡಿದೆ. ದೀರ್ಘ ನಿದ್ರೆ ಕೊರತೆಯು ಹೃದಯ ರೋಗದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಂಚದ ಕೆಳಗೆ ಈ ವಸ್ತುಗಳನ್ನು ಇಡಬೇಡಿ, ಇಟ್ರೆ ಮದುವೆಯೂ ಇಲ್ಲ, ದುಡ್ಡೂ ಕೈ ಸೇರಲ್ಲ !!

Leave A Reply

Your email address will not be published.