BPL Card ಸೇರಿ ಪಡಿತರ ಚೀಟಿ ಹೊಂದಿರುವವರಿಗೆ ಸರಕಾರದಿಂದ ಮತ್ತೊಂದು ಸಿಹಿ ಸುದ್ದಿ! ಸಿಗಲಿದೆ ನಿಮಗೆ ಇನ್ನು ರಸೀದಿ!!!
Government news good news for ration card holders government distributing receipt
Ration card : ಪಡಿತರ ಚೀಟಿದಾರರಿಗೆ ಸರಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಕೊಡುವಾಗ ರಸೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಮೂಲಕ ಪಡಿತರ ವಿತರಣೆಯಲ್ಲಿ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಆಹಾರ ಇಲಾಖೆ ಆಯುಕ್ತರು ಆದೇಶ ನೀಡಿದೆ. ಹಾಗಾಗಿ ಇನ್ನು ಮುಂದೆ ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪಡಿತರ(Ration card )ಪಡೆದುಕೊಳ್ಳುವ ಗ್ರಾಹಕರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು.
ರಸೀದಿ ನೀಡಲು ಆಹಾರ ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ರಸೀದಿ ನೀಡಲು ಬೇಕಾಗುವ ಎಲ್ಲಾ ಅಗತ್ಯ ಸೌಲಭ್ಯ ಅಳವಡಿಸಿಕೊಳ್ಳಲು ಹೇಳಲಾಗಿದೆ.
ಒಂದು ಕ್ವಿಂಟಲ್ ಪಡಿತರಕ್ಕೆ ರೂ.100 ಕಮಿಷನ್ ಮೊತ್ತ ನೀಡುತ್ತಿದ್ದು, ಅದನ್ನು ಇದೀಗ ರೂ.125 ರೂ.ಗೆ ಹೆಚ್ಚಿಸಲಾಗಿದೆ. ರಸೀದಿ ವಿತರಣೆ ಸೇರಿ ಖರ್ಚು ಭರಿಸಲು ಕಮಿಷನ್ ಹೆಚ್ಚಳ ಮಾಡಲಾಗಿದೆ. ಈ ಮೂಲಕ ವಿತರಕರ ಮನವಿಯನ್ನು ಸರಕಾರ ಪರಿಗಣಿಸಿದೆ.
ಇದನ್ನೂ ಓದಿ: ದೀಪಾವಳಿಗೆ ಮೊದಲು ಸರಕಾರದಿಂದ ದೊಡ್ಡ ಕೊಡುಗೆ; ಅಕ್ಕಿ ಬೆಲೆ ಇನ್ನು ಅಗ್ಗ!!!