Rice price: ದೀಪಾವಳಿಗೆ ಮೊದಲು ಸರಕಾರದಿಂದ ದೊಡ್ಡ ಕೊಡುಗೆ; ಅಕ್ಕಿ ಬೆಲೆ ಇನ್ನು ಅಗ್ಗ!!!
Business news a gift from Central government before Diwali Rice price is cheaper
Rice price : ಕೇಂದ್ರ ಸರಕಾರವು ಜನ ಸಾಮಾನ್ಯರಿಗೆ ಹಬ್ಬ ಹರಿದಿನಗಳ ಆರಂಭಕ್ಕೂ ಮುನ್ನ ಅಕ್ಕಿ ಬೆಲೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಅಕ್ಕಿ ಮೇಲಿನ ರಫ್ತು ಸುಂಕದ ಅವಧಿಯನ್ನು ಸರಕಾರ ಮುಂದಿನ ವರ್ಷದವರೆಗೆ ವಿಸ್ತರಣೆ ಮಾಡಿದೆ. ಮಾರ್ಚ್ 31, 2024 ರವರೆಗೆ ಸುಂಕವನ್ನು ವ್ಯಾಪಾರಿಗಳು ಪಾವತಿಸಬೇಕಾಗುತ್ತದೆ. ಇದಕ್ಕೆ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ ದೇಶಿಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ(Rice price) ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ದುರ್ಗಾಪೂಜೆ ಮತ್ತು ದೀಪಾವಳಿ ಸಂದರ್ಭದಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಕಿ ಬೆಲೆಯೂ ಹೆಚ್ಚಾಗಬಹುದು. ಈ ಕಾರಣದಿಂದಲೇ ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರವು ಅಕ್ಕಿಯ ರಫ್ತಿನ ಮೇಲೆ ವಿಧಿಸಲಾದ ರಫ್ತು ಸುಂಕವನ್ನು 16 ಅಕ್ಟೋಬರ್ 2023 ರಿಂದ 31 ಮಾರ್ಚ್ 2024 ರವರೆಗೆ ಹೆಚ್ಚಿಸಿದೆ.
ಕೇಂದ್ರ ಸರಕಾರ ಹಣದುಬ್ಬರ ನಿಯಂತ್ರಣ ಮಾಡಲು ಬಿಳಿ ಅಕ್ಕಿಯ ಮೇಲೆ ರಫ್ತು ನಿಷೇಧಿಸಲು ನಿರ್ಧಾರ ಮಾಡಿತ್ತು. ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ದೇಶವೆಂದರೆ ಅದು ಭಾರತ. ಇಂತಹ ರಫ್ತು ಸುಂಕ ವಿಧಿಸುವುದರಿಂದ ಅಕ್ಕಿಯ ರಫ್ತು ಕಡಿಮೆಯಾಗಬಹುದು ಎಂದು ಸರಕಾರ ಎನಿಸಿದೆ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಕಡಿಮೆಯಾಗಲಿದೆ.
ಇದನ್ನೂ ಓದಿ: Interesting: ಎಲ್ಲಾದರೂ ವಾಹನ ಆಕ್ಸಿಡೆಂಟ್ ಆದ್ರೆ ನೀವು ತಕ್ಷಣ ಏನು ಗಮನಿಸ್ತೀರಿ ?! ಅದೊಂದನ್ನು ನೀವು ನೋಡಲೇ ಬೇಕು……!!!