Udupi: ಮಹಿಷಾ ದಸರಾಗೆ ನಿರ್ಬಂಧ ಹೇರಿ 2 ದಿನ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿ
Udupi news District Collector imposed ban on Mahisha Dasara for 2 days
Udupi :ಉಡುಪಿ ಜಿಲ್ಲೆಯಲ್ಲಿ (Udupi)ಮಹಿಷಾ ದಸರಾ ನಡೆಸಲು ಭರದ ತಯಾರಿ ನಡೆಯುತ್ತಿದ್ದು, ಈ ನಡುವೆ ಉಡುಪಿ ಜಿಲ್ಲಾಧಿಕಾರಿ ಬಿಗ್ ಶಾಕ್ ನೀಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಮಹಿಷಾ ದಸರಾಗೆ ಸಂಬಂಧಿಸಿದಂತೆ ಪರ /ವಿರೋಧ ವ್ಯಕ್ತವಾಗುತ್ತಿದ್ದಂತೆ, ಯಾವುದೇ ರೀತಿಯ ಪ್ರತಿಭಟನಾ ಮೆರವಣಿಗೆ, ಮತ್ತು ಬ್ಯಾನರ್, ಬಂಟಿಂಗ್ಸ್, ಪೋಸ್ಟರ್ ಗಳನ್ನು ಅಳವಡಿಸಲು ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಹೊರಡಿಸಿದ ಆದೇಶದ ಅನುಸಾರ, ಉಡುಪಿ ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸುಗಮ ಸಂಚಾರಕ್ಕೆ ವ್ಯತ್ಯಯ ಉಂಟಾಗುವ ಹಿನ್ನೆಲೆ ದಿನಾಂಕ:14.10.2023 ಮತ್ತು 15.10.2023 ರಂದು ಮಹಿಷ ದಸರ ಪರ /ವಿರೋಧ ಯಾವುದೇ ರೀತಿಯ ಪ್ರತಿಭಟನ ಮೆರವಣಿಗೆ, ಮತ್ತು ಬ್ಯಾನರ್, ಬಂಟಿಂಗ್ಸ್, ಪೋಸ್ಟರ್ ಗಳನ್ನು ಅಳವಡಿಸುವುದನ್ನು ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಕೆ.ಪಿ. ಆಕ್ಟ್ 1963ರ ಕಲಂ 35 ರಡಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ದಿನಾಂಕ: 14.10.2023 ಬೆಳಿಗ್ಗೆ 6.00 ರಿಂದ ದಿನಾಂಕ: 15.10.2023 ರ ಸಂಜೆ 06.00 ಗಂಟೆಯವರೆಗೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮಕೈಗೊಳ್ಳಲಾಗುವ ಕುರಿತು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ನಿರ್ಬಂಧ
*ಮಹಿಷ ದಸರ ಆಚರಣೆ ಪರ ವಿರೋಧದದ ಬಗ್ಗೆ ಯಾವುದೇ ಪೋಸ್ಟರ್, ಬ್ಯಾನರ್, ಬಂಟಿಂಗ್ ಅಳವಡಿಸುವುದು ಪ್ರತಿಭಟನೆ / ಮೆರವಣಿಗೆಗಳನ್ನು ಅವಹೇಳನಕಾರಿ ರೀತಿಯ ಯಾವುದೇ ಘೋಷಣೆಗಳು/ಭಾಷಣಗಳು ಪ್ರಕಟಣೆಗಳು, ಅವಾಚ್ಯ ಶಬ್ದಗಳ ಬಳಕೆ/ಪ್ರಚೋದನಾಕಾರಿ ಭಾಷಣ/ ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿರ್ಬಂಧ ಹೇರಲಾಗಿದೆ.
* ಶಸ್ತ್ರಗಳು, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲುಗಳು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧ ಹೇರಲಾಗಿದೆ.
* ಪಟಾಕಿಗಳನ್ನು ಸಿಡಿಸುವುದು, ಯಾವುದೇ ಹಾನಿಕಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ.
* ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದನ್ನು ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: Mysore: ‘ಒಕ್ಕಲಿಗರು ಸಂಸ್ಕೃತಿ ಇಲ್ಲದ ಪಶುಗಳು’ – ಮಹಿಷ ದಸರಾದಲ್ಲಿ ಕೇಳಿಬಂತು ಶಾಕಿಂಗ್ ಹೇಳಿಕೆ !! ಹೇಳಿದ್ಯಾರು ಗೊತ್ತೇ ?!