Liquor Shop: ಹೊಸ ಮದ್ಯದಂಗಡಿಗಿಲ್ಲ ಲೈಸೆನ್ಸ್‌, ಮತ್ತೆ ಯಾವುದಕ್ಕೆ ಪರ್ಮಿಶನ್‌?- ಅಬಕಾರಿ ಸಚಿವರು ನೀಡಿದ್ರು ಬಿಗ್‌ ಅಪ್ಡೇಟ್‌!!!

politics news no licence for new liquor shop excise minister rb thimmapura reveal the matter

Liquor News: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಬಂದ ಮೇಲೆ ಜನರಿಗೋಸ್ಕರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ನಾಲ್ಕು ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ಸುಮಾರು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಅದಕ್ಕೆ ಸರಕಾರು ಆದಾಯದ ಮೂಲವನ್ನು ಹೆಚ್ಚಿಸಲು ಮುಂದಾಗಿದೆ. ಹೀಗಾಗಿ ಮದ್ಯದ ಕುರಿತು ಚರ್ಚೆಯಾಗುತ್ತಿದೆ.

ಇದಕ್ಕೆ ಪೂರಕವಾಗಿ ಪ್ರತಿ ಗ್ರಾಮ ಪಂಚಾಯಿತಿಗೆ (Grama Panchayat) ಎರಡರಂತೆ ಮದ್ಯದಂಗಡಿ ತೆರೆಯುವ ಕುರಿತು ಪ್ರಸ್ತಾಪ ಇತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಆ ರೀತಿಯ ಯಾವುದೇ ಯೋಚನೆ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.

ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪುರ (Excise Minister RB Thimmapura) ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಹೊಸ ಮದ್ಯದಂಗಡಿ ತೆರೆಯಲು ಲೈಸೆನ್ಸ್‌ (License for Liquor Shop)ನೀಡಲಾಗುವುದಿಲ್ಲ ಎಂದು ಹೇಳಿದ್ದು, ಆದರೆ ಅಮಾನತಾಗಿದ್ದು, ನವೀಕರಣವಾಗದೇ ಬಾಕಿ ಉಳಿದ, ರದ್ದಾಗಿದ್ದ ಮದ್ಯದಂಗಡಿ ತೆರೆಯಲು ಅನುವು ಮಾಡಿಕೊಡುವುದಾಗಿ ಹೇಳಿದ್ದಾರೆ.

ಹೊಸ ಮದ್ಯದಂಗಡಿಗೆ ಲೈಸೆನ್ಸ್‌ ನೀಡುವುದಿಲ್ಲ. ಆದರೆ ಬಾಕಿ ಉಳಿದಿರುವ ಹಿಂದಿನ ಲೈಸೆನ್ಸ್‌ಗಳು ಹಾಗೂ ಎಂಎಸ್‌ಐಎಲ್‌ (MSIL) ಮದ್ಯದಂಗಡಿ ತೆರೆಯಲು ಅಡ್ಡಿಯಿಲ್ಲ ಎಂದು ಅಬಕಾರಿ ಸಚಿವ ಆರ್‌. ಬಿ.ತಿಮ್ಮಾಪುರ ಅವರು ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮದವರಿಗೆ ಹೇಳಿದ್ದಾರೆ.

 

ಇದನ್ನು ಓದಿ: Ravi Teja: ಚಿತ್ರೀಕರಣದ ಸಂದರ್ಭ ನಟ ರವಿತೇಜಗೆ ಗಂಭೀರ ಗಾಯ! 16 ಸ್ಟಿಚ್‌ ಹಾಕಿಸಿಕೊಂಡ ನಟ!!!

Leave A Reply

Your email address will not be published.