Two wheelers Interesting Facts: ಬೈಕ್ ಗಳಿಗೆ ಪೆಟ್ರೋಲ್ ಮಾತ್ರ ಹಾಕೋದ್ಯಾಕೆ ?! ಡೀಸೆಲ್ ಇಂಜಿನ್ ಗಾಡಿ ಬರಲಿಲ್ಲ ಏಕೆ ?! ಇಲ್ಲಿದೆ ನೋಡಿ ಯಾರೂ ತಿಳಿಸದ ಮಾಹಿತಿ

Two wheelers intresting facts why 2 wheelers do not have diesel engines here is detail

Two wheelers Interesting Facts: ವಾಹನ ಸವಾರರೇ, ನಿಮಗೆ ಈ ವಿಚಾರ ತಿಳಿದಿದೆಯೇ??ದ್ವಿಚಕ್ರ ವಾಹನಗಳು ಕೇವಲ ಪೆಟ್ರೋಲ್ (Petrol)ಮಾತ್ರ ಬಳಸಿಕೊಂಡು ಏಕೆ ಚಲಿಸುತ್ತವೆ?? ಡೀಸೆಲ್ (Disel)ಬಳಸುವುದಿಲ್ಲವೇಕೆ??ದ್ವಿಚಕ್ರ ವಾಹನಗಳಿಗೆ ವಾಹನ ತಯಾರಿಕಾ ಕಂಪನಿ ಕೂಡ ಡೀಸೆಲ್ ಎಂಜಿನ್ ಬಳಕೆ ಮಾಡುವುದಿಲ್ಲ? ಇದಕ್ಕೆ ಕಾರಣವೇನು ಗೊತ್ತಾ ?? ಹೆಚ್ಚಿನವರಿಗೆ ತಿಳಿಯದ ಇಂಟ್ರೆಸ್ಟಿಂಗ್ ಸಂಗತಿ (Two wheelers Interesting Facts)ಇಲ್ಲಿದೆ ನೋಡಿ!!

ಪೆಟ್ರೋಲ್ ಎಂಜಿನ್‌ಗಳು ಪ್ರತಿ ಗ್ಯಾಲನ್ ಇಂಧನವನ್ನು ಸುಡುವ ಮುಖಾಂತರ ಕಡಿಮೆ ಶಕ್ತಿಯನ್ನು ಉತ್ಪಾದನೆ ಮಾಡುತ್ತವೆ. ಡೀಸಲ್‌ಗೆ ಹೋಲಿಸಿದರೆ ಹೆಚ್ಚು ತಂಪಾಗಿರುವ ಹಿನ್ನೆಲೆ ಎಂಜಿನ್‌ಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗುವ ಸಂಭವ ತೀರಾ ವಿರಳ.

ಆರಂಭಿಕ ಬೆಲೆ:
ಕಂಪನಿಗಳು ಹೊಸ ವಾಹನಗಳನ್ನು ಸಿದ್ಧಪಡಿಸುವಾಗ ಕಡಿಮೆ ಬಜೆಟ್ ನಲ್ಲೇ ಉತ್ತಮ ಗುಣಮಟ್ಟವನ್ನು ನೀಡಬೇಕು ಎಂದು ಬಯಸುವುದು ಸಹಜ. ಆದರೆ, ದೊಡ್ಡ ಎಂಜಿನ್ ಮತ್ತು ಹೆಚ್ಚಿನ ಕಂಪ್ರೆಷನ್ ಅನುಪಾತದ ಪರಿಣಾಮ ಡೀಸೆಲ್ ಎಂಜಿನ್‌ಗಳು ಪೆಟ್ರೋಲ್ ಎಂಜಿನ್‌ಗಳಿಗಿಂತ ದುಬಾರಿಯಾಗುತ್ತವೆ. ಬೆಲೆ ಏರಿಕೆಯಾದಂತೆ ಗ್ರಾಹಕರು ಕೂಡ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕುವುದರಿಂದ ತಯಾರಕರು ಪೆಟ್ರೋಲ್ ಎಂಜಿನ್‌ಗಳನ್ನು ಆಯ್ಕೆ ಮಾಡುತ್ತಾರೆ.

ತೂಕ:
ಬೃಹತ್ ಎಂಜಿನ್‌ಗಳು ದ್ವಿಚಕ್ರ ವಾಹನಗಳಿಗೆ ಸರಿ ಹೊಂದುವುದಿಲ್ಲ. ಹೆಚ್ಚಿನ ಬೈಕ್ ತಯಾರಕರು ಪೆಟ್ರೋಲ್ ಎಂಜಿನ್‌ಗಳನ್ನು ಬಳಸುವುದಕ್ಕೆ ಇದು ಕೂಡ ಕಾರಣ. ಡೀಸೆಲ್ ಎಂಜಿನ್‌ಗಳನ್ನು ಬಳಕೆ ಮಾಡಲು ಬೈಕ್‌ಗಳನ್ನು ತುಂಬಾ ದೊಡ್ಡ ಆಕಾರದಲ್ಲಿ ನಿರ್ಮಿಸಬೇಕಾಗುತ್ತದೆ. ಇದರಿಂದ ತೂಕ ಹೆಚ್ಚಾಗಿ ಸವಾರರು ರಸ್ತೆಗಳಲ್ಲಿ ಓಡಿಸಲು ಒದ್ದಾಡಬೇಕಾಗುತ್ತದೆ.

ಯಾವುದೇ ಮೋಟಾರ್‌ಸೈಕಲ್‌ಗಳು ಡೀಸೆಲ್ ಎಂಜಿನ್ ಬಳಕೆ ಮಾಡದೇ ಇರುವುದಕ್ಕೆ ಮುಖ್ಯ ಕಾರಣ ತೂಕ ಎಂದರೇ ತಪ್ಪಾಗದು. ಇದು 24:1 ರ ಸಂಕುಚಿತ ಅನುಪಾತಗಳನ್ನು (Compression ratio) ಒಳಗೊಂಡಿರುತ್ತದೆ. ಇದು ಪೆಟ್ರೋಲ್ ಎಂಜಿನ್‌ಗಳಲ್ಲಿನ ಸಂಕುಚಿತ ಅನುಪಾತಕ್ಕಿಂತ (11:1) ಹೆಚ್ಚು ಎನ್ನಲಾಗಿದೆ. ಅದೇ ರೀತಿ, ಈ ಹೆಚ್ಚಿನ ಸಂಕೋಚನ ದರವನ್ನು ನಿರ್ವಹಿಸಲು ಡೀಸೆಲ್ ಎಂಜಿನ್‌ಗಳು ದೊಡ್ಡದಾಗಿರಬೇಕಾಗುತ್ತದೆ. ಅಷ್ಟೇ ಅಲ್ಲದೇ,ಭಾರವಾದ ವಸ್ತುಗಳಿಂದ ಮಾಡಿರಬೇಕು

ಕಡಿಮೆ ವೇಗ: ಡೀಸೆಲ್ ಎಂಜಿನ್‌ಗಳು ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತವೆ ಆದಾಗ್ಯೂ, ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಕೆ ಮಾಡಿದರೆ ಅವು ಕಡಿಮೆ ಆರ್‌ಪಿಎಂಗೆ ಕಾರಣವಾಗುತ್ತವೆ. ರೈಡರ್‌ಗಳು ತಮ್ಮ ಹೆಚ್ಚಿನ ಪರ್ಫಾಮೆನ್ಸ್ ವಾಹನಗಳಿಗೆ ಹೆಚ್ಚಿನ ಆರ್‌ಪಿಎಮ್‌ಗಳ ಅವಶ್ಯಕತೆ ಇರುವ ಹಿನ್ನೆಲೆ ಡೀಸೆಲ್ ಸೂಕ್ತ ಎನ್ನಲಾಗದು.

ಶಬ್ದ ಮತ್ತು ಕಂಪನ:
ಹೆಚ್ಚಿನ ಸಂಕೋಚನ ಅನುಪಾತ (Compression ratio)ದಿಂದಾಗಿ ಡೀಸೆಲ್ ಎಂಜಿನ್‌ಗಳು ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಸಿದಾಗ ಹೆಚ್ಚು ಶಬ್ದ ಮತ್ತು ಕಂಪನವನ್ನು ಉಂಟು ಮಾಡುತ್ತವೆ. ಮೋಟಾರ್‌ ಸೈಕಲ್‌ಗಳನ್ನು ಈ ಮಟ್ಟದ ಶಬ್ದ ಮತ್ತು ಕಂಪನಗಳನ್ನು ನಿರ್ವಹಣೆ ಮಾಡಲು ಸಿದ್ಧ ಪಡಿಸಿಲ್ಲ. ಈ ಕಾರಣದಿಂದ ಡೀಸೆಲ್ ಎಂಜಿನ್ ಅನ್ನು ಮೋಟಾರ್‌ಬೈಕ್‌ಗಳಲ್ಲಿ ಬಳಕೆ ಮಾಡುವುದಿಲ್ಲ.

ಗಾತ್ರ:
ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್ ಪ್ರತಿ ಗ್ಯಾಲನ್‌ಗೆ ಹೆಚ್ಚಿನ ಶಕ್ತಿಯನ್ನು ಉತ್ಪಾದನೆ ಮಾಡುತ್ತದೆ. ಅದು ಸುಟ್ಟ ಸಂದರ್ಭ ಸಿಲಿಂಡರ್‌ನ ಗೋಡೆಗಳ ರೀತಿಯಲ್ಲಿ ಎಂಜಿನ್ ಭಾಗಗಳನ್ನು ನಾಶಪಡಿಸುವ ದೊಡ್ಡ ಶಾಖವನ್ನು ಉತ್ಪಾದನೆ ಮಾಡುತ್ತದೆ. ಈ ಶಾಖವನ್ನು ಕಡಿಮೆಗೊಳಿಸಲು, ನಿಮಗೆ ಸರಿಯಾದ ಕೂಲಿಂಗ್ ವ್ಯವಸ್ಥೆ ಮತ್ತು ಎಂಜಿನ್‌ಗೆ ಹೆಚ್ಚಿನ ಮೇಲ್ಮೈ ವಿಸ್ತೀರ್ಣದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಡೀಸೆಲ್ ಎಂಜಿನ್‌ಗಳು ದೊಡ್ಡದಾಗಿರಬೇಕಾಗುತ್ತದೆ.

ನಿರ್ವಹಣೆಗೆ ಕಷ್ಟ:
ಡೀಸೆಲ್ ಎಂಜಿನ್‌ಗಳು ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುವ ಹಿನ್ನೆಲೆ ಅವು ಸುಲಭವಾಗಿ ಸವೆಯುತ್ತವೆ. ಹೀಗಾಗಿ, ಪ್ರತಿ 5,000 ಕಿ.ಮೀ ನಂತರ ತೈಲ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಡೀಸೆಲ್ ಎಂಜಿನ್‌ಗಳಿಗೆ ಆಗಾಗ ತೈಲ ಬದಲಾವಣೆ ಎಂದರೆ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಪೆಟ್ರೋಲ್ ಎಂಜಿನ್‌ ಸುಮಾರು 6,000 ಕಿ.ಮೀ ನಿಂದ 8,000 ಕಿ.ಮೀ ನಂತರ ತೈಲ ಬದಲಾವಣೆ ಮಾಡಬಹುದಾಗಿದೆ.

ಇದನ್ನೂ ಓದಿ:World Book of Records: ಆಗಷ್ಟೇ ಹುಟ್ಟಿದ ಮಗುವಿನಿಂದ ಬರೋಬ್ಬರಿ 31 ವಿಶ್ವ ದಾಖಲೆ ಸೃಷ್ಟಿ !! ಪ್ರಪಂಚವನ್ನೇ ಕಾಣದ ಕಂದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದದ್ದೇಗೆ?!

 

Leave A Reply

Your email address will not be published.