Home News Fobia: ಹೆಂಗಸರಿಗೆ ಹೆದರೋ ವ್ಯಕ್ತಿ- 55 ವರುಷಗಳಿಂದ ಮನೆಯೊಳಗೇ ಅಡಗಿ ಕೂತ ಈತ ಮಾಡಿದ್ದೇನು ?!

Fobia: ಹೆಂಗಸರಿಗೆ ಹೆದರೋ ವ್ಯಕ್ತಿ- 55 ವರುಷಗಳಿಂದ ಮನೆಯೊಳಗೇ ಅಡಗಿ ಕೂತ ಈತ ಮಾಡಿದ್ದೇನು ?!

Fobia

Hindu neighbor gifts plot of land

Hindu neighbour gifts land to Muslim journalist

Fobia: ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ರೀತಿಯ ಭಯ ಇರುವುದು ಸಹಜ. ಕೆಲವರಿಗೆ ರಾತ್ರಿ ಎಂದರೆ ಭಯ, ಮತ್ತೆ ಕೆಲವರಿಗೆ ಕತ್ತಲು, ಹಾವು, ಜಿರಳೆ ಎಂದರೆ ಸಾಕು ಭಯದಲ್ಲಿ ಕಿರುಚಾಡುವುದನ್ನು ನೋಡಿರಬಹುದು. ಆದ್ರೆ, ಇಲ್ಲೊಬ್ಬನ ಕಥೆ ಕೇಳಿದರೆ ನಿಮಗೆ ಅಚ್ಚರಿ ಆಗುವುದು ಖಚಿತ!!

71 ವರ್ಷದ ವ್ಯಕ್ತಿಯೊಬ್ಬರು ಮಹಿಳೆಯರ ಮೇಲಿನ ಭಯದಿಂದ(Fobia)ಕಳೆದ 55 ವರ್ಷಗಳಿಂದ ಮನೆಯಲ್ಲೇ(Home)ಉಳಿದುಬಿಟ್ಟಿದ್ದಾನೆ.ಕ್ಯಾಲಿಟ್ಸೆ ನ್ಜಾಮ್ವಿಟಾ ಎಂಬ ವ್ಯಕ್ತಿ 16 ನೇ ವಯಸ್ಸಿನಲ್ಲಿ ಸ್ತ್ರೀಯರ ಮೇಲಿನ ಭಯದಿಂದ ಮಹಿಳೆಯರು ಬರದಂತೆ ತನ್ನ ಮನೆಗೆ ಬೀಗ ಹಾಕಿಕೊಂಡನಂತೆ. ಅಷ್ಟೆ ಅಲ್ಲದೇ,ಯಾವುದೇ ಹೆಣ್ಣು ಮನೆಯೊಳಗೆ ಪ್ರವೇಶಿಸದ ರೀತಿಯಲ್ಲಿ ತಾನೇ ಬ್ಯಾರಿಕೇಡ್ ಮಾಡಿಕೊಂಡಿದ್ದ. ತನ್ನ ಸಂದೇಶ ಉಳಿದವರಿಗೆ ಸ್ಪಷ್ಟವಾಗಿ ಕಳುಹಿಸಲು 15 ಅಡಿ ಬೇಲಿಯನ್ನು ನಿರ್ಮಿಸಿಕೊಂಡಿದ್ದ.

Image source Credit: emerald loaded.in

ಒಬ್ಬ ಮಹಿಳೆ ತನ್ನ ಕಾಂಪೌಂಡ್‌ಗೆ ಸಮೀಪಿಸಿದರೆ ಸಾಕು, ಅವನು ಅವನ ಮನೆಗೆ ಓಡಿ ಹೋಗಿ ಮನೆಗೆ ಹೋಗಿ ಬೀಗ ಹಾಕಿಕೊಳ್ಳುತ್ತಾನಂತೆ. ವರದಿಗಳ ಅನುಸಾರ, 71 ವರ್ಷದ ವ್ಯಕ್ತಿಯು ಗೈನೋಫೋಬಿಯಾ ಎಂಬ ಮಾನಸಿಕ ಸ್ಥಿತಿಯಿಂದ ಬಳಲುತ್ತಿದ್ದು, ಇದು ಮಹಿಳೆಯರ ಭಯವಾಗಿದೆ. ವೈದ್ಯಕೀಯ ವ್ಯವಸ್ಥೆಯಲ್ಲಿ, ಇದನ್ನು “ನಿರ್ದಿಷ್ಟ ಫೋಬಿಯಾ” ಎಂದು ವರ್ಗೀಕರಣ ಮಾಡಲಾಗಿದೆ. ಮಹಿಳೆಯರ ಬಗ್ಗೆ ಅಗಾಧ ಭಯ ಮತ್ತು ಅವರ ಬಗ್ಗೆ ಯೋಚಿಸುವ ಮೂಲಕ ಆತಂಕವನ್ನು ಪ್ರಚೋದಿಸುತ್ತದೆ ಇದು ಗೈನೋಫೋಬಿಯಾದ ಲಕ್ಷಣ ಎನ್ನಲಾಗಿದೆ.

ಈ ವ್ಯಕ್ತಿಗೆ ಹೆಣ್ಣಿನ ಮೇಲೆ ವಿಪರೀತ ಭಯವಿದ್ದರೂ ಕೂಡ ಅಕ್ಕಪಕ್ಕದ ಮನೆಯವರು ಅದರಲ್ಲಿಯೂ ಮಹಿಳೆಯರು ಮಾತ್ರ ಆತನ ಬದುಕಿಗೆ ನೆರವಾಗುತ್ತಿರುವುದು ವಿಶೇಷ!! ಬಲ್ಲ ವರದಿಯ ಅನುಸಾರ, ಆತನ ನೆರೆಹೊರೆಯವರು ಅವನಿಗೆ ಬೇಕಾದ ಆಹಾರ ಮತ್ತು ದಿನಸಿ ವಸ್ತುಗಳನ್ನು ಇಲ್ಲವೇ, ಅವನಿಗೆ ಬೇಕಾದುದನ್ನು ಅವರು ಸಾಮಾನ್ಯವಾಗಿ ಅವರ ಮನೆಗೆ ಎಸೆಯುತ್ತಾರೆ, ಅದನ್ನು ಆ ವ್ಯಕ್ತಿ ತೆಗೆದುಕೊಳ್ಳುತ್ತಾನಂತೆ.

 

ಇದನ್ನು ಓದಿ: D. K. Shivakumar Missing: ಮತ್ತೊಂದು ‘ಕಾಣೆಯಾಗಿದ್ದಾರೆ’ ಪೋಸ್ಟರ್- ಡಿ ಕೆ ಶಿವಕುಮಾರ್ ಬ್ಲಾಕ್ ಅಂಡ್ ವೈಟ್ ಪೋಟೋ ಹಾಕಿ ಅಲ್ಲಿ ಬರೆದದ್ದೇನು ?!