D. K. Shivakumar Missing: ಮತ್ತೊಂದು ‘ಕಾಣೆಯಾಗಿದ್ದಾರೆ’ ಪೋಸ್ಟರ್- ಡಿ ಕೆ ಶಿವಕುಮಾರ್ ಬ್ಲಾಕ್ ಅಂಡ್ ವೈಟ್ ಪೋಟೋ ಹಾಕಿ ಅಲ್ಲಿ ಬರೆದದ್ದೇನು ?!

Political news BJP made a poster regarding d.k shivakumar is missing latest news

D. K. Shivakumar Missing: ರಾಜಕೀಯ ಪಕ್ಷಗಳು ಒಂದರ ಮೇಲೊಂದು ಟೀಕಾ ಪ್ರಹಾರ ನಡೆಸುವುದು ಮಾಮೂಲಿ. ಇದೀಗ, ರಾಜ್ಯದ ಜನತೆಗೆ ಕಿವಿಗೆ ಹೂವಿಟ್ಟು ಸದ್ದಿಲ್ಲದೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಹೀಗಾಗಿ, ಬಿಜೆಪಿ ಕಾಂಗ್ರೆಸ್ (BJP vs Congress)ವಿರುದ್ಧ ಕಿಡಿ ಕಾರಿದ್ದು, ಇದರ ಮುಂದುವರಿದ ಭಾಗವಾಗಿ ಇಂಧನ ಸಚಿವ ಜಾರ್ಜ್(K. J. George Missing) ಮತ್ತು ಡಿ.ಕೆ ಶಿವಕುಮಾರ್ ಕಾಣೆಯಾಗಿದ್ದಾರೆ(D. K. Shivakumar Missing)!! ದಯವಿಟ್ಟು ಹುಡುಕಿಕೊಡಿ ಎಂದು ರಾಜ್ಯ ಬಿಜೆಪಿ ಘಟಕ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ.

ಕಾಂಗ್ರೆಸ್ ಚುನಾವಣಾ ಪ್ರಚಾರದ ಸಂದರ್ಭ ದೊಡ್ಡಮಟ್ಟದಲ್ಲಿ ನೆರವಾದವರ ಋಣವನ್ನು ತೀರಿಸುವ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಲೋಕಸಭೆ ಚುನಾವಣೆಯ ನಂತರ ಸಿಎಂ ಕುರ್ಚಿ ಭದ್ರಪಡಿಸಿಕೊಳ್ಳಲು ಲಾಬಿ ಮಾಡುವ ಸಲುವಾಗಿ ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಕಾಣೆಯಾಗಿ ಬಿಟ್ಟಿದ್ದಾರೆ. ಹಾಗಾಗಿ, ದಯಮಾಡಿ, ಯಾರಾದರೂ ಅವರನ್ನು ಹುಡುಕಿ ಕೊಡಿ ಎಂದು ಮನವಿ ಮಾಡುವ ಹಾಗೆ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಮೂಲಕ ಕಾಂಗ್ರೆಸ್ ಪಕ್ಷದ ಕಾಲೆಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ.

 

ಇದನ್ನು ಓದಿ: JioBharat B1: ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿ- ಬರ್ತಿದೆ ಕಡಿಮೆ ದರದ, ಹಲವು ಫೀಚರ್ ಗಳ ಹೊಸ ಮೊಬೈಲ್!!

Leave A Reply

Your email address will not be published.