World Book of Records: ಆಗಷ್ಟೇ ಹುಟ್ಟಿದ ಮಗುವಿನಿಂದ ಬರೋಬ್ಬರಿ 31 ವಿಶ್ವ ದಾಖಲೆ ಸೃಷ್ಟಿ !! ಪ್ರಪಂಚವನ್ನೇ ಕಾಣದ ಕಂದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದದ್ದೇಗೆ?!
Madhya Pradesh news 3 month old girl child from chhindwara sets world Book of records latest news
World Book of Records: ಇನ್ನೂ ವಿಶ್ವವನ್ನೇ ನೋಡದ ಪುಟ್ಟ ಕಂದಮ್ಮ ಆಗಲೇ 31 ದಾಖಲೆಗಳ ಪುಟಗಳಲ್ಲಿ ಹೆಸರು ಪಡೆದಿದೆ.ಕೇಳಲು ಅಚ್ಚರಿ ಅನಿಸಿದರೂ ಇದು ಸತ್ಯ!! ಹುಟ್ಟಿ ಕೇವಲ 72 ದಿನಗಳಲ್ಲೇ ವಿಶ್ವ ದಾಖಲೆಯ ಪುಟದಲ್ಲಿ (world book of records)ಹೆಸರು ಪಡೆದ ಪುಟ್ಟ ಮಗು ಮಾಡಿದ ಸಾಧನೆಯಾದರೂ ಏನಪ್ಪಾ?? ಎಂದು ನೀವು ಕೇಳಬಹುದು? ಅದಕ್ಕೆ ಉತ್ತರ ಇಲ್ಲಿದೆ ನೋಡಿ!!
ಮಧ್ಯಪ್ರದೇಶದ ಛಿಂದವಾಡ ಜಿಲ್ಲೆಯ ಕೇಸರಿನಂದನ್ ಸೂರ್ಯವಂಶಿ ಮತ್ತು ಪ್ರಿಯಾಂಕಾ ದಂಪತಿಗೆ ಜುಲೈ 8ರಂದು ಶರಣ್ಯಾ ಎಂಬ ಹೆಣ್ಣು ಮಗು(Girl Child) ಜನಿಸಿದ್ದಾಳೆ. ಜನನವಾದ ಮೂರು ತಿಂಗಳಿಗೆ ಬೇಬಿ ಶರಣ್ಯಾ ವಿಶ್ವ ದಾಖಲೆಯನ್ನು ಬರೆದಿದ್ದಾಳೆ. ತಮ್ಮ ಮಗುವಿನ ಜನನವನ್ನು ಶಾಶ್ವತವಾಗಿ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಏನಾದರೂ ಮಾಡಬೇಕೆಂದು ಬಯಸಿದ ದಂಪತಿ 28 ಗುರುತಿನ ಚೀಟಿ ದಾಖಲೆಗಳೊಂದಿಗೆ ಮಗುವಿನ ಹೆಸರನ್ನು ವಿಶ್ವ ದಾಖಲೆಗೆ (World Book Of Records) ಸೇರಿಸಿದ್ದಾರೆ.
ಶರಣ್ಯಾ ಅವರ ಪೋಷಕರಾದ ಕೇಸರಿ ನಂದನ್ ಮತ್ತು ಪ್ರಿಯಾಂಕಾ ಇಬ್ಬರೂ ಚಂದಂಗಾವ್‌ನ ಅಂಚೆ ಇಲಾಖೆಯಲ್ಲಿ ಉದ್ಯೋಗಿಗಳು. ಇದರ ನಡುವೆ ಶರಣ್ಯಾಳ ತಾತ ಕೂಡ ಅಂಚೆ ಉದ್ಯೋಗಿಯಂತೆ. ಹೀಗಾಗಿ, ಶರಣ್ಯ ಪೋಷಕರು ಏನಾದರು ಸಾಧನೆ ಮಾಡಬೇಕೆಂದು ಬಯಸಿ ತಡಮಾಡದೆ ಸ್ಪರ್ಧೆಗೆ ಸಿದ್ದತೆ ನಡೆಸಿ ಶರಣ್ಯಾ ಹುಟ್ಟಿದ 72 ದಿನಗಳಲ್ಲಿ 31 ಗುರುತಿನ ದಾಖಲೆಗಳನ್ನೂ ಶರಣ್ಯ ಪಡೆದುಕೊಂಡಿದ್ದಾರೆ.
ಪಾಸ್‌ಪೋರ್ಟ್, ಐಡಿ ಕಾರ್ಡ್, ಆಧಾರ್ ಕಾರ್ಡ್, ಇಮ್ಯುನೈಸೇಶನ್ ಕಾರ್ಡ್, ‘ಲಾಡ್ಲಿ ಲಕ್ಷ್ಮಿ’ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಸ್ಥಳೀಯ ನಿವಾಸ ಪ್ರಮಾಣಪತ್ರ, ರಾಷ್ಟ್ರೀಯ ಆರೋಗ್ಯ ಕಾರ್ಡ್, ‘ಸುಕನ್ಯಾ ಸಮೃದ್ಧಿ’ ಖಾತೆ, ‘ಮಹಿಳಾ ಸಮ್ಮಾನ್ ಉಳಿತಾಯ ಪತ್ರ’, ‘ರಾಷ್ಟ್ರೀಯ ಉಳಿತಾಯ ದಾಖಲೆಗಳು’, ‘ಕಿಸಾನ್ ವಿಕ’ ಪತ್ರಾ’, ಪೋಸ್ಟ್ ಆಫೀಸ್ ಉಳಿತಾಯ ಖಾತೆ, PNB ATM ಕಾರ್ಡ್, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಬ್ಯಾಂಕ್ ಖಾತೆಗಳು ಹೀಗೆ, ಶರಣ್ಯಾ ಹುಟ್ಟಿದ 72 ದಿನಗಳಲ್ಲಿ 31 ಬಗೆಯ ಪ್ರಮಾಣ ಪತ್ರಗಳನ್ನು ಪಡೆದು ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ಅನೇಕ ಜನರು ಸರಿಯಾದ ಗುರುತಿನ ದಾಖಲೆಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುವ ಜೊತೆಗೆ ಸರ್ಕಾರದ ಹಲವು ಯೋಜನೆಗಳಿಂದ ವಂಚಿತರಾಗುತ್ತಾರೆ. ಅಂತಹವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗಿದೆ ಎಂದು ಶರಣ್ಯಾಳ ಪೋಷಕರು ಹೇಳಿದ್ದಾರೆ ಎಂದು ತಿಳಿದುಬಂದಿದೆ.