Bjp Leaders: ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮತ್ತೆರಡು ಪ್ರಬಲ ಬಿಜೆಪಿ ನಾಯಕರು- ‘ಕಮಲ’ ಪಾಳಯದಲ್ಲಿ ಶುರುವಾಯ್ತು ಸಂಚಲನ !

latest news politics news Two BJP leaders met with Siddaramaiah

Bjp leaders : ಸದ್ಯ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರದ ಕೂಗು ಕೇಳಿಬರುತ್ತಿದೆ. ಪಕ್ಷದ ನಾಯಕರು ಪಕ್ಷಾಂತರ ಮಾಡುತ್ತಲೇ ಇದ್ದಾರೆ. ಸಾಕಷ್ಟು ಬಿಜೆಪಿ (Bjp) ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಹಾಗೆಯೇ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದೂ ಇದೆ. ಇದೀಗ ಎರಡು ಪ್ರಬಲ ಬಿಜೆಪಿ ನಾಯಕರು (Bjp leaders) ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಈ ಹಿನ್ನೆಲೆ ‘ಕಮಲ’ ಪಾಳಯದಲ್ಲಿ ಸಂಚಲನ ಶುರುವಾಗಿದೆ.

ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಅಕ್ಟೋಬರ್ 20 ರಂದು ಕಾಂಗ್ರೆಸ್ ಸೇರುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಜೊತೆಗೆ ಇದೀಗ ಬಿಜೆಪಿಯ ಮಾಜಿ ಶಾಸಕರಾದ ಎಂಪಿ ಕುಮಾರಸ್ವಾಮಿ ಮತ್ತು ರಾಮಪ್ಪ ಲಮಾಣಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಘೋಷಿಸಿದ ಬಳಿಕ ಹಲವಾರು ಬಿಜೆಪಿ ಮುಖಂಡರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಕೂಡ ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆ ಅವರು ಕಾಂಗ್ರೆಸ್ ಸೇರುವ ಸೂಚನೆ ಎಂದು ಮೂಲಗಳು ತಿಳಿಸಿದ್ದವು.

 

ಇದನ್ನು ಓದಿ: Bonus: ಪೌರ ಸ್ವಯಂಸೇವಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಉಡುಗೊರೆ! ಬೋನಸ್‌ ಘೋಷಣೆ ಮಾಡಿದ ಸರಕಾರ!!!

Leave A Reply

Your email address will not be published.