Home News Israel-Hamas War: ಯಪ್ಪಾ.. ಗರ್ಭಿಣಿಯ ಹೊಟ್ಟೆ ಸೀಳಿ `ಬ್ರೂಣ’ವನ್ನೂ ಹೊಸಕಿ ಹಾಕಿದ ಹಮಾಸ್ ರಾಕ್ಷಸರು :...

Israel-Hamas War: ಯಪ್ಪಾ.. ಗರ್ಭಿಣಿಯ ಹೊಟ್ಟೆ ಸೀಳಿ `ಬ್ರೂಣ’ವನ್ನೂ ಹೊಸಕಿ ಹಾಕಿದ ಹಮಾಸ್ ರಾಕ್ಷಸರು : ಕರಾಳತೆಯನ್ನು ಬಿಚ್ಚಿಟ್ಟ ಸ್ವಯಂ ಸೇವಕ!

Israel-Hamas War

Hindu neighbor gifts plot of land

Hindu neighbour gifts land to Muslim journalist

Israel-Hamas War: ಭಾರತದ (India) ಮಿತ್ರರಾಷ್ಟ್ರ ಇಸ್ರೇಲ್ (Israel) ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಸ್ರೇಲ್ ಎಂಬ ಯಹೂದಿ (Jewish) ರಾಷ್ಟ್ರದ ಮೇಲೆ ಏಕಾಏಕಿ ಪ್ಯಾಲಿಸ್ತೇನ್ (Palestinian) ಬೆಂಬಲಿತ ಹಮಾಸ್ (Hamas) ಉಗ್ರರು (Terrorists) ದಾಳಿ ನಡೆಸಿ ಅಪಾರ ಮಂದಿಯ ಸಾವು-ನೋವಿಗೆ ಕಾರಣರಾಗಿದ್ದಾರೆ.

ಗಾಜಾ ಪಟ್ಟಿಯಲ್ಲಿ ನಿಂತು ಪ್ಯಾಲಿಸ್ತೇನಿಯನ್ ಬೆಂಬಲಿತ ಹಮಾಸ್ ಉಗ್ರರು (Gaza Strip) ಇಸ್ರೇಲ್ ಮೇಲೆ ಯುದ್ದ ಸಾರಿದ್ದಾರೆ. ಇಸ್ರೇಲ್ ಮೇಲಿನ ದಾಳಿಯ ಸಂದರ್ಭದಲ್ಲಿ ಹಮಾಸ್ ನಡೆಸಿದ ದೌರ್ಜನ್ಯದ ಕುರಿತು(Israel-Hamas War) ಇಸ್ರೇಲ್ ಸ್ವಯಂಸೇವಕ ನಾಗರಿಕ ತುರ್ತು ಸೇವೆ ಜೆಎಕೆಎ ಕಮಾಂಡರ್ ಯೋಸ್ಸಿ ಲ್ಯಾಂಡೌ ಮಾಹಿತಿ ನೀಡಿದ್ದಾರೆ.

ಹಮಾಸ್ ಉಗ್ರರ ದೌರ್ಜನ್ಯ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಹಮಾಸ್ ಉಗ್ರರ ಮುಂದೆ ಯಾರೇ ಬಂದರೂ ಕೂಡ ಅವರನ್ನು ನಿರ್ದಾಕ್ಷಿಣ್ಯವಾಗಿ ಹಿಂದೂ ಮುಂದೂ ನೋಡದೆ ಕೊಲ್ಲಲಾಗುತ್ತಿತ್ತು.ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಸಮಯದಲ್ಲಿ ಹಮಾಸ್ ದಾಳಿ ಹೇಗಿತ್ತು ಎಂಬುದನ್ನು ವಿವರಿಸುವುದಾದರೆ, ಹಮಾಸ್ ಮುಂದೆ ಮಗು, ವೃದ್ಧ, ಅಂಗವಿಕಲ, ಮಹಿಳೆ ಅಥವಾ ಪುರುಷ ಯಾರೇ ಇರಲಿ! ಅವರಿಗೆ ಪ್ರತಿಯೊಬ್ಬ ವ್ಯಕ್ತಿ ಕೂಡ ಕೇವಲ ಇಸ್ರೇಲಿ ಮತ್ತು ಯಹೂದಿಯಾಗಿ ಮಾತ್ರ ಕಾಣಿಸುತ್ತಿದ್ದ. ಹಮಾಸ್ ದಾಳಿಯಲ್ಲಿ ಎಲ್ಲರನ್ನು ಹತ್ಯೆ ಮಾಡುವುದಷ್ಟೇ ಅವರ ಗುರಿಯಾಗಿತ್ತು.

ಇಸ್ರೇಲಿ ನಾಗರಿಕರು ಕೇವಲ ಗುಂಡುಗಳಿಂದ ಹತ್ಯೆ ಮಾಡುತ್ತಿರಲಿಲ್ಲ. ಇಸ್ರೇಲ್ ಮೇಲೆ ದಾಳಿ ಮಾಡುವ ಸಲುವಾಗಿ ಚಾಕುಗಳು ಮತ್ತು ಬೆಂಕಿಯನ್ನು ಕೂಡ ಕೊಲ್ಲಲು ಬಳಸುತ್ತಿದ್ದರು. ಹಮಾಸ್ ಉಗ್ರರ ಕ್ರೌರ್ಯದ ಪ್ರಭಾವ ದಾಳಿಯ ಆರು ದಿನಗಳ ಬಳಿಕ ಗೋಚರವಾಗುತ್ತಿದೆ.
“ಮನೆಯೊಂದರಲ್ಲಿ ಶೋಧ ನಡೆಸಿದ ಸಂದರ್ಭ, ಗರ್ಭಿಣಿ ಮಹಿಳೆ ನೆಲದ ಮೇಲೆ ಮಲಗಿದ್ದನ್ನು ನಾವು ಗಮನಿಸಿದೆವು.ನಾವು ಆ ಮಹಿಳೆಯನ್ನು ತಿರುಗಿಸಿದ ಸಂದರ್ಭ, ಅವಳ ಹೊಟ್ಟೆ ತೆರೆದಿದ್ದು ಮಾತ್ರವಲ್ಲ ಹುಟ್ಟಲಿರುವ ಮಗುವನ್ನು ಹೊಕ್ಕುಳಬಳ್ಳಿಗೆ ಜೋಡಿಸಲಾಗಿತ್ತು. ಅದನ್ನು ಚಾಕುವಿನಿಂದ ವಿಕೃತವಾಗಿ ಇರಿದಿದ್ದರು. ಇದು ಸಾಲದೆಂಬಂತೆ ತಾಯಿಯ ತಲೆಗೆ ಕೂಡ ಗುಂಡು ಹಾರಿಸಲಾಗಿತ್ತು” ಎಂದು ಹಮಾಸ್ ಉಗ್ರರ ಕ್ರೌರ್ಯತೆ ಬಗ್ಗೆ ಇಸ್ರೇಲ್ನ ಸ್ವಯಂಸೇವಕ ನಾಗರಿಕ ತುರ್ತು ಸೇವೆ ಜೆಎಕೆಎ ಕಮಾಂಡರ್ ಯೋಸ್ಸಿ ಲ್ಯಾಂಡೌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಮತ್ತೊಂದು ಘಟನೆಯನ್ನೂ ಗಮನಿಸಿದಾಗ, ಇಬ್ಬರು ಪೋಷಕರು ತಮ್ಮ ಕೈಗಳನ್ನು ಬೆನ್ನ ಹಿಂದೆ ಕಟ್ಟಿದ್ದರು. ಅವರ ಮುಂದೆ ಇಬ್ಬರು ಚಿಕ್ಕ ಮಕ್ಕಳ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿತ್ತು. ಆ ಬಳಿಕ ಅವರನ್ನು ಬೆಂಕಿ ಹಾಕಿ ಸುಡಲಾಯಿತು. ಪ್ರತಿಯೊಂದೂ ಸುಟ್ಟು ಕರಕಲಾಗುವುದನ್ನ ನೋಡಿಕೊಂಡು ಭಯೋತ್ಪಾದಕರು ಕುಳಿತು ಆಹಾರ ಸೇವಿಸುತ್ತಿದ್ದರು ಎಂದು ಯೋಸ್ಸಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಯಬ್ಬೋ.. ಮನೆಯವರು ಲ್ಯಾಪ್ ಟಾಪ್ ಕೊಡ್ಲಿಲ್ಲ ಎಂದು ತಾನೇ ಹೊಸ ಲ್ಯಾಪ್ ತಯಾರಿಸೋದ ಈ ಪುಟ್ಟ ಪೋರಿ !! ವೈರಲ್ ಆಯ್ತು ಅಚ್ಚರಿಯ ವಿಡಿಯೋ