Home Education Karnataka Education News: ವಿದ್ಯಾರ್ಥಿಗಳೇ ಗಮನಿಸಿ- ಫೆಬ್ರವರಿಯಿಂದ ನಿಮಗಿದೆ ಸಾಲು ಸಾಲು ಪರೀಕ್ಷೆ !! ಇಲ್ಲಿದೆ...

Karnataka Education News: ವಿದ್ಯಾರ್ಥಿಗಳೇ ಗಮನಿಸಿ- ಫೆಬ್ರವರಿಯಿಂದ ನಿಮಗಿದೆ ಸಾಲು ಸಾಲು ಪರೀಕ್ಷೆ !! ಇಲ್ಲಿದೆ ಸಂಪೂರ್ಣ ವಿವರ

Exam pattern change

Hindu neighbor gifts plot of land

Hindu neighbour gifts land to Muslim journalist

Exam pattern change: ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಿ, ಅದರಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ , ಈ ಬಾರಿ 2023-24ನೇ ಸಾಲಿನಿಂದ ಪೂರಕ ಪರೀಕ್ಷೆಯ ಬದಲಿಗೆ 2 ವಾರ್ಷಿಕ ಪರೀಕ್ಷೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಎಸೆಸೆಲ್ಸಿ (SSLC Board Exams), ದ್ವಿತೀಯ ಪಿಯುಸಿಗೆ ತಲಾ ಮೂರು ವಾರ್ಷಿಕ ಪರೀಕ್ಷೆ ನಡೆಯಲಿದೆ.

ಮುಖ್ಯ ಶಿಕ್ಷಕರು/ ಪ್ರಾಂಶುಪಾಲರು ಮೌಲ್ಯಮಾಪನವಾದ ಕೂಡಲೇ ಫ‌ಲಿತಾಂಶವನ್ನು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲು ಸೂಚಿಸಲಾಗಿದೆ. 9ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವಂತಿಲ್ಲ, ಇದರ ಜೊತೆಗೆ, ಪರೀಕ್ಷಾ ಫ‌ಲಿತಾಂಶವನ್ನು ಆಯಾ ವಿದ್ಯಾರ್ಥಿ ಇಲ್ಲವೇ ಪೋಷಕರಿಗೆ ಮಾತ್ರವೆ ನೀಡಬೇಕು. 11ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಆಯಾ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಲು ಮಂಡಳಿಯು ಎಲ್ಲ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.

ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಗೆ ಮೂರು ವಾರ್ಷಿಕ ಪರೀಕ್ಷೆ(Exam pattern change), 11 ಹಾಗೂ 9ನೇ ತರಗತಿಗೆ ಏಕರೂಪ ಪರೀಕ್ಷೆ ನಡೆಯಲಿದೆ. 9ನೇ ತರಗತಿ ಉತ್ತರ ಪತ್ರಿಕೆ ಮೌಲ್ಯಮಾಪನ ತಾಲೂಕು ಹಂತದಲ್ಲಿ ನಡೆಯಲಿದ್ದು, 11ನೇ ತರಗತಿ ಉತ್ತರ ಪತ್ರಿಕೆ ಮೌಲ್ಯಮಾಪನವು ಕಾಲೇಜು ಹಂತದಲ್ಲಿ ನಡೆಯಲಿದೆ.

ಇಲ್ಲಿ ಗಮನಿಸಬೇಕಾದ ವಿಚಾರಗಳು ಹೀಗಿವೆ:
* ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಹಿಂದಿನಂತೆ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿದೆ.
* ಪ್ರಥಮ ಬಾರಿಗೆ ಪರೀಕ್ಷೆ ಬರೆಯುವ ಹೊಸಬರು, ಖಾಸಗಿ ಅಭ್ಯರ್ಥಿಗಳು ಎಲ್ಲ ವಿಷಯಗಳಲ್ಲಿ ಪರೀಕ್ಷೆ-1ನ್ನು ಬರೆಯುವುದು ಕಡ್ಡಾಯವಾಗಿದೆ.
* ನೇರವಾಗಿ ಪರೀಕ್ಷೆ-2, ಪರೀಕ್ಷೆ-3ಕ್ಕೆ ಹಾಜರಾಗಲು ಅವಕಾಶವಿಲ್ಲ.
* ಪರೀಕ್ಷೆ-1ರಲ್ಲಿ ತೇರ್ಗಡೆ ಹೊಂದಿದವರು 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿದರೆ ಅಂಕಪಟ್ಟಿ ಪಡೆಯಬಹುದು.
* ಪರೀಕ್ಷೆ-2, 3 ಬರೆಯಲು ಬಯಸುವವರಿಗೆ ಅಂತಿಮವಾಗಿ ಅಂಕಪಟ್ಟಿ ದೊರೆಯಲಿದೆ.
* ಈ ಮೂರು ಪರೀಕ್ಷೆಯಲ್ಲಿ ವಿಷಯವಾರು ಅತ್ಯುತ್ತಮ ಅಂಕವನ್ನು ಆಯ್ಕೆ ಮಾಡಲು ಅವಕಾಶವಿದ್ದು, ಅಂಕ ಪಟ್ಟಿಗೆ ಒಮ್ಮೆ ಮಾತ್ರ ಶುಲ್ಕ ಪಾವತಿ ಮಾಡಿದರೆ ಸಾಕು.

ಇದನ್ನೂ ಓದಿ: Two wheelers Interesting Facts: ಬೈಕ್ ಗಳಿಗೆ ಪೆಟ್ರೋಲ್ ಮಾತ್ರ ಹಾಕೋದ್ಯಾಕೆ ?! ಡೀಸೆಲ್ ಇಂಜಿನ್ ಗಾಡಿ ಬರಲಿಲ್ಲ ಏಕೆ ?! ಇಲ್ಲಿದೆ ನೋಡಿ ಯಾರೂ ತಿಳಿಸದ ಮಾಹಿತಿ