Caste Census: ಈ ರಾಜ್ಯಗಳಲ್ಲಿ ಜಾತಿ ಗಣತಿಗೆ ಮುಂದಾದ ಕಾಂಗ್ರೆಸ್- ಏನಿದು ‘ಕೈ’ ನಾಯಕರ ಮಾಸ್ಟರ್ ಪ್ಲಾನ್ ?!

Political news Congress decide to do caste census in congress states latest news

Caste Census: ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 4 ಗಂಟೆಗಳ ಕಾಲ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಲು ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಲು ಒತ್ತಡ ಹೇರುವ ನಿರ್ಣಯವನ್ನು ಸರ್ವಾನುಮತದಿಂದ ಕಾಂಗ್ರೆಸ್‌ ಕೈಗೊಂಡಿದೆ.

ಅಲ್ಲದೆ, ದೇಶದಲ್ಲಿ 2024ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶವ್ಯಾಪಿ ಜಾತಿ ಗಣತಿ ನಡೆಸಲಾಗುವುದು. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಕೂಡಲೇ ಶೇ.33ರಷ್ಟು ಮಹಿಳಾ ಮೀಸಲು ಜಾರಿಗೊಳಿಸಲಾಗುವುದು. ಈ ಶೇ.33 ಮಹಿಳಾ ಮೀಸಲಿನಲ್ಲಿ ಒಬಿಸಿ (ಹಿಂದುಳಿದ ವರ್ಗ) ಮೀಸಲು ಜಾರಿಗೊಳಿಸಲಾಗುವುದು ಎಂದು ನಿರ್ಣಯಿಸಲಾಗಿದೆ.

ಆದರೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಜಿ20 ದೇಶಗಳ ಪೈಕಿ ಇಂಥ ಜಾತಿ ಗಣತಿ ನಡೆಸಿದ ಏಕೈಕ ದೇಶವೆಂದರೆ ಅದು ಭಾರತ. ಇದು ನಾಚಿಕೆಗೇಡಿನ ವಿಷಯ ಎಂದು ಕಾರ್ಯಕಾರಿಣಿ ಸಮಿತಿ ನಿರ್ಣಯ ಟೀಕಿಸಿದೆ. ಸಭೆಯಲ್ಲಿ ಜಾತಿ ಗಣತಿ (caste census) ನಿರ್ಣಯಕ್ಕೆ ಖುದ್ದು ರಾಹುಲ್‌ ಗಾಂಧಿ (Rahul Gandhi) ಆಗ್ರಹಿಸಿದರು. ಆಗ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು, ‘ನಾನು ಶೇ.100ರಷ್ಟು ಜಾತಿ ಗಣತಿ ಪರ ಇದ್ದೇನೆ’ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಇನ್ನು ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಸಿಡಬ್ಲ್ಯುಸಿ (CWC)ಕೈಗೊಂಡಿದ್ದು ಐತಿಹಾಸಿಕ ನಿರ್ಧಾರವಾಗಿದೆ. ದೇಶಾದ್ಯಂತ ಜಾತಿ ಗಣತಿ ನಡೆಸುವುದರಿಂದ ಬಡವರ ವಿಮೋಚನೆ ಸಾಧ್ಯವಾಗುತ್ತದೆ’ ಎಂದು ಹೇಳಿದರು. ಮುಖ್ಯವಾಗಿ ಸಭೆಯಲ್ಲಿ ಭಾಗಿಯಾಗಿದ್ದ ನಮ್ಮ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಗಣತಿಗೆ ಆಗ್ರಹಿಸಲಾಗುತ್ತದೆ. ಇದು ಯಾವುದೇ ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ಬಡಜನರಿಗೆ ಸಂಬಂಧಿಸಿದ್ದು, ಇದು ರಾಜಕೀಯವಲ್ಲ ಸಾಮಾಜಿಕ ನ್ಯಾಯ’ ಎಂದರು.

ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಹುಲ್‌ ‘ಜಾತಿಗಣತಿ ಎಂಬುದು ಒಂದೇ ದೇಶದ ಎಕ್ಸ್‌ ರೇ ಇದ್ದ ಹಾಗೆ. ಇದು ಒಬಿಸಿಗಳು, ಬುಡಕಟ್ಟು ಜನಾಂಗಗಳು ಮತ್ತು ದಲಿತರ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ಈಗಾಗಲೇ ಕಾಂಗ್ರೆಸ್‌ ಸರ್ಕಾರ (Congress Govt) ಇರುವ ರಾಜಸ್ಥಾನ, ಕರ್ನಾಟಕ ಹಾಗೂ ಛತ್ತೀಸ್‌ಗಢದಲ್ಲಿ ಜಾತಿಗಣತಿ ಪ್ರಕ್ರಿಯಿ ಶುರುವಾಗಿದೆ ಎಂದಿದ್ದಾರೆ. ಅಲ್ಲದೇ ‘ಪ್ರಧಾನಿ ನರೇಂದ್ರ ಮೋದಿ, ಜಾತಿಗಣತಿಯ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಈ ಜಿಲ್ಲೆಗಳ ವಾಹನ ಸವಾರರ ಜೇಬಿಗೆ ಕತ್ತರಿ ಬೀಳೋದು ಬಹುತೇಕ ಫಿಕ್ಸ್ !! ಬಂತು ಹೊಸ ರೂಲ್ಸ್

Leave A Reply

Your email address will not be published.