D K Shivakumar: ಪ್ರದೀಪ್ ಈಶ್ವರನ್ ಬಿಗ್ ಬಾಸ್ ಎಂಟ್ರಿ ವಿವಾದ – ಅಚ್ಚರಿ ಹೇಳಿಕೆ ನೀಡಿದ ಡಿಕೆ ಶಿವಕುಮಾರ್!!
entertainment Political news DCM DK Shivakumar reacts to pradeep Eshwar entered bigg boss
D K Shivakumar: ಕರ್ನಾಟಕದ ಜನ ಕಾದು ಕೂತಿದ್ದಂತಹ, ಎಲ್ಲರ ನೆಚ್ಚಿನ ಬಿಗ್ ಬಾಸ್ ಸೀಸನ್-10(Bigg boss ಈಗ ತಾನೆ ಶುರುವಾಗಿದೆ. ಅಚ್ಚರಿಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಅದರಲ್ಲೂ ಕಾಂಗ್ರೆಸ್ ನ ಚಿಕ್ಕಬಳ್ಳಾಪುರ (Chikkaballapura MLA) ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರನ್(Pradeep eshwar) ಅವರ ಎಂಟ್ರಿ ಅಂತೂ ಇಡೀ ರಾಜ್ಯದ ಜನತೆಗೆ ಶಾಕ್ ನೀಡಿತ್ತು. ತನ್ನ ಎಂಟ್ರಿ ಬಗ್ಗೆ ರಾಜ್ಯದಾದ್ಯಂತ ಚರ್ಚೆ ಶುರುವಾಗುತ್ತಿದ್ದಂತೆ ಪ್ರದೀಪ್ ಮನೆಯಿಂದ ಔಟ್ ಆಗಿದ್ರು. ಇದೀಗ ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಡಿಸಿಎಂ ಡಿ ಕೆ ಶಿವಕುಮಾರ್(D K Shivakumar) ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಹೌದು, ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗಷ್ಟೇ ಭೇಟಿ ಕೊಟ್ಟಿದ್ದರು. ಒಂದು ದಿನದ ಮಟ್ಟಕ್ಕೆ ಮನಯೊಳಗೆ ಇದ್ದು, ವಾಪಸ್ ಬಂದ ಪ್ರದೀಪ್ ವಿರುದ್ಧ ಇದೀಗ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನೇತರ ಡಿ ಕೆ ಶಿವಕುಮಾರ್ ಅವರು ಮೌನ ಮುರಿದಿದ್ದು ಅವರ ವೈಯಕ್ತಿಕ ಆಯ್ಕೆ, ನಾವು ಯಾರ ತಲೆ ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ಈ ಕುರಿತು ಮಾತನಾಡಿದ ಅವರು, ಇದು ಪ್ರದೀಪ್ ಅವರ ವೈಯಕ್ತಿಕ ಆಯ್ಕೆ. ನಮಗ್ಯಾರಿಗೂ ತಡೆಯುವ ಹಕ್ಕಿಲ್ಲ. ಹಲವಾರು ಸಾರ್ವಜನಿಕ ಪ್ರತಿನಿಧಿಗಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ. ಎಂದು ನನಗೆ ಖಾತ್ರಿಯಿದೆ. ಎಂದ ಹೇಳಿಕೆ ನೀಡಿದ್ದಾರೆ.
ಇನ್ನು ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ಮಾತನಾಡಿದ ಪ್ರದೀಪ್ ಅವರು ನಾನು ಬಿಗ್ ಬಾಸ್ ಮನೆಗೆ ಹೋಗಿದ್ದು ಶೋಕಿಗಲ್ಲ. ಸ್ಪರ್ಧಿಗಳಲ್ಲಿ ಆಶಾಭಾವನೆ ಮೂಡಿಸಿ ಅವರ ಮೂಲಕ ಇಡೀ ರಾಜ್ಯಕ್ಕೆ ಸಂದೇಶ ಸಾರಲು ಹೋಗಿದ್ದೆ. ನಾನೊಬ್ಬ ಜನ ನಾಯಕ. ಬಿಗ್ ಬಾಸ್ ಮನೆಯಲ್ಲಿ 100 ದಿನ ನಾನು ಇರೋದಕ್ಕೆ ಆಗುವುದಿಲ್ಲ ಎಂದು ನನಗೆ ಗೊತ್ತಿಲ್ವಾ? ನನ್ನ ಸ್ನೇಹಿತರು ಪ್ರೀತಿಯಿಂದ ಕರೆದಿದ್ರು, ಅದಕ್ಕೆ ಹೋಗಿ ಬಂದೆ ಎಂದಿದ್ದಾರೆ.
ಇದನ್ನೂ ಓದಿ : Bengaluru job : ಬೆಂಗಳೂರಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ ಬರೋಬ್ಬರಿ 80,000 ಸಂಬಳ ; ಅರ್ಜಿ ಹಾಕಲು ಇಂದೆ ಕೊನೆ ದಿನ