Gangavathi: ಡಿಜೆ ಸೌಂಡ್‌ಗೆ ಎದ್ದು, ಬಿದ್ದು ಸ್ಟೆಪ್ ಹಾಕಿದ ಯುವಕ – ಸ್ಥಳದಲ್ಲೇ ಕುಸಿದು ಹೃದಯಾಘಾತಕ್ಕೆ ಬಲಿ

Koppala news young man died due to heart attack while dancing in gangavathi latest news

Gangavathi: ಇತ್ತೀಚೆಗೆ ಹೃದಯಾಘಾತ ಸಮಸ್ಯೆ ಚಿಕ್ಕವರಿಂದ ದೊಡ್ಡವರವರೆಗೂ ಕಾಡುತ್ತಿದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತದಿಂದ (Heart Attack) ಮರಣ ಹೊಂದುವವರ ಸಂಖ್ಯೆ ದಿನದಿಂದ ದಿನಕ್ಕೆ ಸಂಖ್ಯೆ ಏರುತ್ತಿದೆ. ಇದೀಗ ಯುವಕನೊಬ್ಬ, 21 ದಿನದ ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಕೊಪ್ಪಳ ಜಿಲ್ಲೆಯ ಗಂಗಾವತಿ (Gangavathi) ನಗರದಲ್ಲಿ ಮಂಗಳವಾರ ಬೆಳ್ಳಂಬೆಳ್ಳಿಗೆ ಈ ಘಟನೆ ನಡೆದಿದ್ದು, 30 ವರ್ಷದ ಸುದೀಪ್ ಸಜ್ಜನ್ ಎಂಬಾತನೇ ಹೃದಯಾಘಾತದಿಂದ ಮೃತಪಟ್ಟ ಯುವಕನಾಗಿದ್ದಾನೆ . 21 ದಿನದ ಗಣೇಶ ವಿಸರ್ಜನೆ ವೇಳೆ ಈ ದುರಂತ ಸಂಭವಿಸಿದ್ದು, ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಸುದೀಪ್ ಸಾವನ್ನಪ್ಪಿದ್ದಾನೆ.

ಗಣೇಶ ವಿಸರ್ಜನೆ ಪ್ರಯುಕ್ತ, ಗಂಗಾವತಿಯ ಪ್ರಶಾಂತ ನಗರದ ಯುವಕರು ಡಿಜೆ ಮೆರವಣಿಗೆ ಆಯೋಜನೆ ಮಾಡಿದ್ದರು. ಮೆರವಣಿಗೆ ಸಾಗುತ್ತಿದ್ದ ವೇಳೆ ಸುದೀಪ್ ಡ್ಯಾನ್ಸ್ ಮಾಡುತ್ತಿದ್ದನು. ಆ ಸಮಯದಲ್ಲಿ ಸುದೀಪ್ಗೆ ಏಕಯೇಕಿ ಹೃದಯಾಘಾತವಾಗಿದ್ದು, ಘಟನೆಯಿಂದ ಯುವಕರು ಸ್ವಯಂ ಪ್ರೇರಿತವಾಗಿ ಅರ್ಧಕ್ಕೆ ಡಿಜೆ ಬಂದ್ ಮಾಡಿದ್ದಾರೆ.

ಇದೀಗ ಯುವಕನ ಮೃತದೇಹವನ್ನ ಗಂಗಾವತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಗಾವತಿ ನಗರ ಠಾಣೆ ಪೊಲೀಸರು ಡಿಜೆ ವಶಕ್ಕೆ ಪಡೆದಿದ್ದು, ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: ಮಹಿಳೆಯರಿಗೆ ಬಿಗ್ ಶಾಕ್- ಫ್ರೀ ಬಸ್ ಕುರಿತು ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ ಹೈಕೋರ್ಟ್

Leave A Reply

Your email address will not be published.