Pm Kisan 15th Installment: ರೈತರೇ ಪಿಎಂ ಕಿಸಾನ್ ನ 2,000 ಪಡೆಯಲು ಕೂಡಲೇ ಈ 3 ಕೆಲಸಗಳನ್ನು ಮಾಡಿಬಿಡಿ !! ಇಲ್ಲಾಂದ್ರೆ ಖಾತೆಗೆ ಬಂದ ಹಣ ಕೈ ಸೇರೋದು ಡೌಟ್

PM Kisan 15th Installment latest updates for farmers

PM KISAN 15th Installment: ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 15ನೇ ಕಂತಿಗಾಗಿ(PM KISAN 15th Installment) ರೈತರು ಎದುರು ನೋಡುತ್ತಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.

ನವೆಂಬರ್ ತಿಂಗಳಲ್ಲಿ ಸರ್ಕಾರವು 15 ನೇ ಕಂತನ್ನು ರೈತರ ಖಾತೆಗೆ ಹಣ ರವಾನಿಸಲಿದೆ ಎನ್ನಲಾಗುತ್ತಿದ್ದು, ಇಲ್ಲಿಯವರೆಗೆ, ಈ ಯೋಜನೆಗೆ ಅರ್ಜಿ ಸಲ್ಲಿಸದೆ ಇರುವ ರೈತರು, ಈ ಯೋಜನೆಯ ಲಾಭವನ್ನು ಪಡೆಯಲು ಬೇಗ ಅರ್ಜಿ ಸಲ್ಲಿಸಿ ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಿರಿ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸೇರುವ ರೈತರು KYC ಅನ್ನು ಪೂರ್ಣಗೊಳಿಸುವುದು ಅನಿವಾರ್ಯ. ಇದೀಗ, ಪಿಎಂ ಕಿಸಾನ್ ಯೋಜನೆಯಲ್ಲಿ ಅಪ್ಲಿಕೇಶನ್‌ನಲ್ಲಿ ಮುಖ ಗುರುತಿಸುವಿಕೆ ಆಯ್ಕೆ ಕೂಡ ಪರಿಚಯಿಸಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಈಗಾಗಲೇ ಇ- ಕೆವೈಸಿ ಪೂರ್ಣಗೊಳಿಸಿದ ರೈತರಿಗೆ ಮಾತ್ರ ರೂ. 2 ಸಾವಿರ ಲಭ್ಯವಾಗಲಿದ್ದು, ಪ್ರಸ್ತುತ 14ನೇ ಕಂತಿನಡಿ ರೈತರು ರೂ. 2 ಸಾವಿರ ಪಡೆದಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಕಂತುಗಳ ಲಾಭವನ್ನು ಪಡೆಯಲು ನೀವು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. E- KYC ಮಾಡಲು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ KYC ಅನ್ನು ಪೂರ್ಣಗೊಳಿಸಬಹುದು. ಇದನ್ನು ಹೊರತುಪಡಿಸಿ, ನೀವು ಪಿಎಂ ಕಿಸಾನ್ ಪೋರ್ಟಲ್ pmkisan.gov.in ನಲ್ಲಿ ಕೂಡ ಇ-ಕೆ ವೈಸಿ ಮಾಡಲು ಅವಕಾಶವಿದೆ. ನೀವು ಒಂದು ವೇಳೆ kyc ಮಾಡದೇ ಹೋದರೆ ನಿಮ್ಮ ಖಾತೆಗೆ ಹಣ ಜಮೆ ಆಗದು.

 

ಇದನ್ನು ಓದಿ: Kodi Mutt Swamiji: ಕೋಡಿಶ್ರೀ ಹೇಳಿದ ಭವಿಷ್ಯ ನಿಜವಾಗುತ್ತ? ಒಂದು ದೇಶ ಭೂಪಟದಿಂದ ಕಣ್ಮರೆ, ಇಸ್ರೇಲ್‌ ಅಥವಾ ಪ್ಯಾಲೆಸ್ತೇನ್‌?

Leave A Reply

Your email address will not be published.