Actor Chetan Kumar: ರಾಜ್ಯ, ದೇಶ ಎಲ್ಲಾ ಆಯ್ತು ಈಗ ಇಸ್ರೇಲ್- ಪ್ಯಾಲೇಸ್ತೆನ್ ಯುದ್ಧದಲ್ಲೂ ಮೂಗು ತೂರಿದ ನಟ ಚೇತನ್- ಅಚ್ಚರಿ ಸ್ಟೇಟ್ ಮೆಂಟ್ ಕೇಳಿ ಜನರೇ ಶಾಕ್

Actor Chetan ahimsa given statement regarding Israel hamas war

Actor Chethan Kumar: ಸದಾ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ನಟ ಚೇತನ್ (Actor Chethan Kumar) ಇದೀಗ, ಇಸ್ರೇಲ್‌ ಹಾಗೂ ಪ್ಯಾಲೇಸ್ತೇನ್‌ ನಡುವಿನ ಯುದ್ಧದಲ್ಲಿ ಭಾರತ, ಪ್ಯಾಲೆಸ್ತೇನ್‌ ದೇಶದ ಪರವಾಗಿ ನಿಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ನಡೆಸುತ್ತಿದ್ದು, ಇದರ ನಡುವೆ ಕನ್ನಡದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ, ಇಸ್ರೇಲ್‌ ದೇಶ ಇರೋದೇ ಕದ್ದ ಭೂಮಿಯಲ್ಲಿ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೆ ಅಲ್ಲದೇ, ಭಾರತ ಪ್ಯಾಲೆಸ್ತೇನ್‌ ದೇಶದ ಪರವಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

ಭಾರತ ಈ ಯುದ್ಧದಲ್ಲಿ ಇಸ್ರೇಲ್‌ ದೇಶಕ್ಕೆ ಬೆಂಬಲ ನೀಡುತ್ತಿದೆ.ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇಸ್ರೇಲ್‌ನ ಪರವಾಗಿ ಟ್ವೀಟ್‌ ಮಾಡಿ, ಇಸ್ರೇಲ್‌ನಲ್ಲಿ ಅಮಾಯಕರ ಸಾವಿಗೆ ಮರುಕ ವ್ಯಕ್ತಪಡಿಸಿದ್ದರು. ಇಸ್ರೇಲ್‌ನ ವಿದೇಶಾಂಗ ಇಲಾಖೆ, ಮೊಸಾದ್‌ ಕೂಡ ಭಾರತದಿಂದ ಸಿಕ್ಕಿರುವ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದೆ. ಇದೆಲ್ಲದರ ಮಧ್ಯೆ,ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್ (Chetan)ಇಸ್ರೇಲ್‌ ಎನ್ನುವುದು ಕದ್ದ ಭೂಮಿಯಾಗಿದ್ದು, ಈ ಹೋರಾಟದಲ್ಲಿ ಪ್ಯಾಲೆಸ್ತೇನ್‌ನ ನ್ಯಾಯದ ಪರವಾಗಿ ಭಾರತ ನಿಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾ ಪುಟಗಳಲ್ಲಿ ಅವರು ಬರೆದುಕೊಂಡಿದ್ದಾರೆ.

ಇಸ್ರೇಲ್ (Isreal) ದೇಶವು ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೋನಿಯಾಗಿದ್ದು, ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು. ಇದರ ಜೊತೆಗೆ ಪ್ಯಾಲೇಸ್ಟಿನಿಯನ್ (Palestinian) ನ್ಯಾಯದ ಪರವಾಗಿ ನಿಲ್ಲಬೇಕು ಎಂದು ನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ. ‘ಪ್ಯಾಲೆಸ್ಟೀನಿಯನ್ನರಿಗೆ ನ್ಯಾಯವು ಅವಶ್ಯಕವಾಗಿದ್ದು, ಪ್ಯಾಲೇಸ್ಟಿನಿಯನ್ ಹಮಾಸ್ ಸತ್ತ ಇಸ್ರೇಲಿ ಮಹಿಳೆಯರ ದೇಹಗಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳು ಕ್ರೂರವಾಗಿದೆ ಎಂದು ಪೋಸ್ಟ್ ಮೂಲಕ ನಟ ಚೇತನ್ ಅಹಿಂಸಾ ಬರೆದುಕೊಂಡಿದ್ದಾರೆ.

 

ಇದನ್ನು ಓದಿ: Attack On Young lady: ಅಜ್ಞಾತ ಸ್ಥಳಕ್ಕೆ ಮುಸ್ಲಿಂ ಹುಡುಗಿ ಎಳೆದೊಯ್ದು ಮಾರಣಾಂತಿಕ ಹಲ್ಲೆ – ರಕ್ತದ ಮಡುವಿನಲ್ಲಿ ಒದ್ದಾಡಿದ ಜೀವ

Leave A Reply

Your email address will not be published.