Mangalore: ಗಣಪತಿ ಕಟ್ಟೆಯಲ್ಲಿ ಮುಸ್ಲಿಂ ಧ್ವಜ ಹಾರಿಸಿದ ಕಿಡಿಗೇಡಿಗಳು !! ಸ್ಥಳಕ್ಕೆ ಬಂದ ಪೋಲೀಸ್ ಆಫೀಸರ್ ಮಾಡಿದ್ದೇನು ?
Mangalore news Muslim flag in ganapati katte at moodabidre latest news
Mangalore: ದ. ಕ ಜಿಲ್ಲೆಯ ಮೂಡಬಿದ್ರೆಯ ಪುಚ್ಚೆಮೊಗೇರು ಎಂಬಲ್ಲಿ ಗಣಪತಿ ಕಟ್ಟೆಯ ಮೇಲೆ ಕೆಲವು ಕಿಡಿಗೇಡಿಗಳು ಮುಸ್ಲಿಮರ ಹಸಿರು ಬಾವುಟವಿಟ್ಟು (Green Colour Flag) ಗಲಭೆಗೆ ಯತ್ನಿಸಿದ್ದ ಘಟನೆ ನಡೆದಿದೆ(Mangalore). ಆದರೀಗ ಇಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಅವರ ಸಮಯ ಪ್ರಜ್ಞೆಯಿಂದ ಗಲಬೆಗೆ ಅವಕಾಶ ದೊರೆಯದಂತಾಗಿದೆ.
ಹೌದು, ಕಳೆದ ಸೆ.28 ರ ಈದ್ ಮಿಲಾದ್ ದಿನ ಕಿಡಿಗೇಡಿಗಳು ಮೂಡಬಿದಿರೆಯ ಪುಚ್ಚೆಮೊಗರು ಗಣಪತಿ ಕಟ್ಟೆಯಲ್ಲಿ ಹಸಿರು ಬಣ್ಣದ ಮುಸ್ಲಿಮರ ಬಾವುಟ ಹಾಕಿದ್ದರು. ತಕ್ಷಣ ಗಮನಿಸಿದ ಸ್ಥಳೀಯರು ಅಲ್ಲಿನ ಹೊಸಬೆಟ್ಟು ಗ್ರಾಮ ಪಂಚಾಯತ್‍ನ ಪಿಡಿಓ ಶೇಖರ್ ಅವರ ಗಮನಕ್ಕೆ ತಂದಿದ್ದರು. ಆದರೂ ಪಿಡಿಓ ಕ್ರಮಕೈಗೊಳ್ಳದೆ ಎರಡು ದಿನಗಳ ಕಾಲ ಬಾವುಟ ಅದೇ ಜಾಗದಲ್ಲಿತ್ತು. ಆದರೆ ಮೂಡಬಿದಿರೆಯ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿಯವರ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ.
ಅಂದಹಾಗೆ ಸೆ.30 ರಂದು ವಿಚಾರ ತಿಳಿದ ಮೂಡಬಿದ್ರೆ ಠಾಣಾ ಇನ್ಸ್‍ಪೆಕ್ಟರ್ ಸಂದೇಶ್ ಪಿ.ಜಿ ಸಿಬ್ಬಂದಿ ಜೊತೆ ಸ್ಥಳಕ್ಕೆ ಬಂದಿದ್ದು, ಪಿಡಿಓ ಶೇಖರ್ ಅವರನ್ನೂ ಕರೆಸಿದ್ದರು. ಪಿಡಿಓ ವರ್ತನೆಗೆ ಕೆಂಡಾಂಮಡಲವಾದ ಇನ್ಸ್‍ಪೆಕ್ಟರ್, ಇದರ ಮೇಲೆ ಬಾವುಟ ಹಾಕಲು ಅನುಮತಿ ಇದ್ಯಾ?, ಅನುಮತಿ ಇಲ್ಲದೆ ಹಾಕಿದ್ದರೆ ಪೋಲೀಸ್ ದೂರು ನೀಡಬೇಕಿತ್ತು. ನಿನ್ನ ಅಧಿಕಾರ ಏನು ಅನ್ನೋದು ನಿನಗೆ ಗೊತ್ತಿಲ್ಲ, ನನಗೇನು ಸಂಬಂಧ ಇಲ್ಲ ಅನ್ನೋ ನೀನು ಪಿಡಿಓ ಆಗಿದ್ಯಾಕೆ?, ಇವನನ್ನೇ ಆರೋಪಿ ಮಾಡಬೇಕೆಂದು ಕೆಂಡಾಮಂಡಲವಾಗಿ ಇನ್ಸ್‍ಪೆಕ್ಟರ್ ಬೈದಿದ್ದಾರೆ. ಬಳಿಕ ಸಿಬ್ಬಂದಿ ಮೂಲಕ ಬಾವುಟವನ್ನು ಇನ್ಸ್‍ಪೆಕ್ಟರ್ ತೆರವುಗೊಳಿಸಿದ್ದಾರೆ.
ಸದ್ಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲೆಡೆ ಭಾರೀ ವೈರಲ್ ಆಗ್ತಿದೆ. ಜೊತೆಗೆ ಇನ್ಸ್‍ಪೆಕ್ಟರ್ ಸಮಯಪ್ರಜ್ಞೆಯಿಂದ ದೊಡ್ಡ ಗಲಬೆಯೊಂದು ತಪ್ಪಿದ್ದು ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆಯೂ ಆಗುತ್ತಿದೆ.
ಇದನ್ನೂ ಓದಿ: Sunny leon: ಬಹಳ ಸಮಯದ ನಂತ್ರ ತನ್ನ ಹೊಸ ವಿಡಿಯೋ ಹರಿಬಿಟ್ಟ ಸನ್ನಿ ಲಿಯೋನ್ !! ಏನೇನಿದೆ ಅದರಲ್ಲಿ ?!