Mangalore: ಮಂಗಳೂರಿನ ಜನತೆಗೆ ಬೊಂಬಾಟ್ ಸುದ್ದಿ- KSRTCಯಿಂದ ಟೂರ್ ಪ್ಯಾಕೇಜ್ ಘೋಷಣೆ !! ದರ, ಸಮಯ, ದಿನಾಂಕಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
Karnataka news Mangaluru division KSRTC announced KSRTC Dasara package tour latest news
Mangalore: ನವರಾತ್ರಿ ಸಂಭ್ರಮದ ಸಿದ್ಧತೆ ಈಗಿನಿಂದಲೇ ಗರಿಗೆದರಿದೆ. ಈ ಹಬ್ಬದ ಸಂದರ್ಭದಲ್ಲಿ ದೇಗುಲ ದರ್ಶನಕ್ಕೂ ಸಾಕಷ್ಟು ಮಂದಿ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ, ಜನರ ಅನುಕೂಲಕ್ಕೆ ತಕ್ಕಂತೆ ಕೆಎಸ್‌ಆರ್‌ಟಿಸಿ ಜನರಿಗೆ ಕೆಲವು ಪ್ಯಾಕೇಜ್ ಗಳನ್ನು ಘೋಷಿಸಿದೆ. ಅಂತೆಯೇ ಈ ಬೆನ್ನಲ್ಲೇ ಮಂಗಳೂರು(Mangalore)ಜನತೆಗೂ KSRTC ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಮಂಗಳೂರು ವಿಭಾಗ ಟೂರ್ ಪ್ಯಾಕೇಜ್ ಘೋಷಿಸಿದೆ.
ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಂಗಳೂರು ವಿಭಾಗವು ಅಕ್ಟೋಬರ್ 15 ರಿಂದ 24 ರವರೆಗೆ ಮಂಗಳೂರು ಸಾರ್ವಜನಿಕರ ಬೇಡಿಕೆಯ ಮೇರೆಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಆಯೋಜಿಸುತ್ತಿದೆ. ಹಾಗಿದ್ರೆ ನವರಾತ್ರಿಯ ಈ 10 ದಿನಗಳ ಅವದಿಯಲ್ಲಿ ಯಾವ್ಯಾವ ಬಸ್‌ಗಳು ಯಾವ ಮಾರ್ಗಗಳಲ್ಲಿ ಸಂಚರಿಸಲಿವೆ, ಪ್ಯಾಕೇಜ್ ದರಗಳು ಹಾಗೂ ಸಮಯಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಯಾವ ಯಾವ ಬಸ್ ನಿಯೋಜನೆ ಮಾಡಲಾಗಿದೆ?
ಮಂಗಳೂರು ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು ಮತ್ತು ಸಿಟಿ ವೋಲ್ವೊ ಬಸ್‌ಗಳು ಕಾರ್ಯನಿರ್ವಹಿಸಿದರೆ, ಮಂಗಳೂರು-ಮಡಿಕೇರಿ ಮತ್ತು ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸಕ್ಕೆ ಕರ್ನಾಟಕ ಸರಿಗೆ ಬಸ್‌ಗಳು ಮತ್ತು ಪಂಚದುರ್ಗ ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ.
ಸಮಯ ಮತ್ತು ಸ್ಥಳ:
ಮಂಗಳೂರು ದರ್ಶನ ಪ್ರವಾಸವು ಕೆಎಸ್‌ಆರ್‌ಟಿಸಿ ಬಿಜೈ ಟರ್ಮಿನಲ್‌ನಿಂದ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಸಂಜೆ 7:30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಪ್ಯಾಕೇಜ್‌ನಲ್ಲಿ ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ ಮತ್ತು ಬೀಚ್, ಚಿತ್ತಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಯಮ್ಮ ಮತ್ತು ಕುದ್ರೋಳಿ ಗೋಕರ್ಣನಾಥ ಸ್ಥಳಗಳು ಒಳಗೊಂಡಿವೆ.
ಜೆಎನ್‌ಎನ್‌ಯುಆರ್‌ಎಂ ಬಸ್‌ಗಳಲ್ಲಿ ಪ್ಯಾಕೇಜ್ ಪ್ರವಾಸ ಕೈಗೊಳ್ಳುವುದಾದರೆ, ವಯಸ್ಕರಿಗೆ ₹400 ಮತ್ತು 6-12 ವರ್ಷ ವಯಸ್ಸಿನ ಮಕ್ಕಳಿಗೆ ₹300 ಪಾವತಿಸಬೇಕಾಗುತ್ತದೆ. ಆದರೆ ವೋಲ್ವೋದಲ್ಲಿ ಆಹಾರ ಹೊರತುಪಡಿಸಿ ಆಯಾ ವರ್ಗಗಳಿಗೆ ₹500 ಮತ್ತು ₹400 ಪಾವತಿಸಬೇಕಾಗುತ್ತದೆ.
ಮಂಗಳೂರು-ಮಡಿಕೇರಿ (KSRTC ಬಸ್) ಪ್ಯಾಕೇಜ್ ಟೂರ್ ಪ್ಯಾಕೇಜ್ ಬೆಳಗ್ಗೆ 7ಗಂಟೆಗೆ ಬಿಜೈನಿಂದ ಪ್ರಾರಂಭವಾಗಲಿದ್ದು, ರಾತ್ರಿ 10.30 ಕ್ಕೆ ಕೊನೆಗೊಳ್ಳುತ್ತದೆ. ಈ ವೇಳೆ ರಾಜಾ ಸೀಟ್, ಅಬ್ಬಿ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಅಣೆಕಟ್ಟುಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಈ ಪ್ಯಾಕೇಜ್ ದರಗಳನ್ನು ನೋಡುವುದಾದರೆ, ವಯಸ್ಕರಿಗೆ ₹500 ಮತ್ತು ಮಕ್ಕಳಿಗೆ ₹400 ದರವನ್ನು ನಿಗದಿ ಮಾಡಲಾಗಿದೆ.
ಬೆಳಗ್ಗೆ 8 ಗಂಟೆಗೆ ಬಿಜೈಯಿಂದ ಆರಂಭವಾಗುವ ಕೊಲ್ಲೂರು (KSRTC ಬಸ್) ಪ್ಯಾಕೇಜ್ ಟೂರ್ ಸಂಜೆ 6.30ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ಮಾರನಕಟ್ಟೆ ಮಹಾಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ, ಕಮಲಶಿಲೆ ದುರ್ಗಾಪರಮೇಶ್ವರಿ, ಉಚ್ಚಿಲ ಮಹಾಲಕ್ಷ್ಮಿ ಸ್ಥಗಳಿಗೆ ಭೇಟಿ ನೀಡಬಹುದಾಗಿದೆ. ಇಲ್ಲಿನ ದರಗಳನ್ನು ಗಮನಿಸುವುದಾದರೆ, ವಯಸ್ಕರಿಗೆ ₹500 ಮತ್ತು ಮಕ್ಕಳಿಗೆ ₹400 ದರಗಳನ್ನು ನಿಗದಿ ಮಾಡಲಾಗಿದೆ.
ಪಂಚದುರ್ಗಾ ದರ್ಶನ ಪ್ಯಾಕೇಜ್ ಟೂರ್ (ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು) ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ತಲಪಾಡಿ ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಮುಂಡ್ಕೂರು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಚಿತ್ರಾಪುರ ದುರ್ಗಾಪರಮೇಶ್ವರಿಗೆ ಭೇಟಿ ನೀಡಬಹುದಾಗಿದೆ. ಇಲ್ಲಿ ವಯಸ್ಕರಿಗೆ ₹400 ಮತ್ತು ಮಕ್ಕಳಿಗೆ ₹300 ದರ ನಿಗದಿಪಡಿಸಲಾಗಿದೆ.
ಅಂದಹಾಗೆ ನವರಾತ್ರಿ ಹಬ್ಬದ ಸಿದ್ಧತೆ ಬಲು ಜೋರಾಗಿದೆ. ಕರಾವಳಿ ಜಿಲ್ಲೆಗಳಲ್ಲಿಯೂ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. `ಮಂಗಳೂರು ದಸರಾ’ ಕೂಡಾ ಸಾಕಷ್ಟು ಖ್ಯಾತಿ ಗಳಿಸಿದೆ. ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ವೈಭವದ ದಸರಾ ನಡೆಯುತ್ತದೆ. ಈ ಸಂದರ್ಭದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ಖುಷಿಯ ಕ್ಷಣಕ್ಕೆ ಸಾಕಷ್ಟು ಜನರು ಸಾಕ್ಷಿಯಾಗುತ್ತಾರೆ. ಈ ಹಬ್ಬದ ಹತ್ತು ದಿನಗಳ ಕಾಲ ಮಂಗಳೂರು ವಿದ್ಯುದ್ದೀಪಾಲಂಕಾರದಿಂದ ನವವಧುವಿನಂತೆ ಕಂಗೊಳಿಸುತ್ತಿರುತ್ತದೆ. ಇನ್ನು ದೇಗುಲಗಳಲ್ಲೂ ವಿಶೇಷ ಪೂಜೆ ನಡೆಯುತ್ತಿರುತ್ತದೆ. ಅಂತೆಯೇ, ಪ್ರತೀ ವರ್ಷದಂತೆ ಕೆಎಸ್‌ಆರ್‌ಟಿಸಿ ಕೂಡಾ ಹಬ್ಬಕ್ಕೆ ಜನರಿಗೆ ಗಿಫ್ಟ್ ಕೊಟ್ಟಿದೆ.
ಬುಕ್ ಮಾಡುವುದು ಹೇಗೆ?
ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿಯೇ ಟಿಕೆಟ್ ಖರೀದಿಸಬಹುದಾಗಿದೆ. ನೀವು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ https://ksrtc.in ನಲ್ಲಿ `ಮಂಗಳೂರಿನಿಂದ ಕಟೀಲು ನಮೂದಿಸಿ, ನಿಮ್ಮ ಪ್ರಯಾಣದ ದಿನಾಂಕವನ್ನು ನಮೂದಿಸಬೇಕು. (MANGALORE- KATIL) ಹೀಗೆ ನಮೂದಿಸಿ ನಿಮ್ಮ ಪ್ರಯಾಣದ ದಿನಾಂಕ ಹಾಕಿದರೆ ಟಿಕೆಟ್ ಬುಕ್ಕಿಂಗ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ 0800MNGKTLPKG( SPL )ಎಂದು ಕಾಣಿಸುತ್ತದೆ. ಇಲ್ಲಿನ ಲಿಂಕ್ ಕ್ಲಿಕ್ ಮಾಡಿ ನೀವು ಮುಂಗಡ ಟಿಕೆಟ್ ಪಡೆದುಕೊಳ್ಳಬಹುದು.
ಇನ್ನು ಹೆಚಿನ ಮಾಹಿತಿಗಾಗಿ, 7760990702, 776099071, ಮಂಗಳೂರು ಮುಂಗಡ ಕಾಯ್ದಿರಿಸುವಿಕೆ ಕೌಂಟರ್ 9663211553 ಅಥವಾ ಮಂಗಳೂರು ಬಸ್ ನಿಲ್ದಾಣ, 7760990720 ನಂಬರ್‌ಗೆ ಕರೆ ಮಾಡಬಹುದಾಗಿದೆ.
ಇದನ್ನೂ ಓದಿ: ಮಂಗಳೂರು : ಗಣಪತಿ ಕಟ್ಟೆಯಲ್ಲಿ ಮುಸ್ಲಿಂ ಧ್ವಜ ಹಾರಿಸಿದ ಕಿಡಿಗೇಡಿಗಳು !! ಸ್ಥಳಕ್ಕೆ ಬಂದ ಪೋಲೀಸ್ ಆಫೀಸರ್ ಮಾಡಿದ್ದೇನು ?