Uttar Pradesh: ರಷ್ಯಾದ ನರ್ತಕಿಯನ್ನು ನೋಡಿ ಮನಸೋತ ಪ್ರೇಕ್ಷಕರು; ಕಂಟ್ರೋಲ್ ತಪ್ಪಿದ ಯುವಕರ ಆಸೆಗೆ ಪೊಲೀಸರಿಂದ ಲಾಠಿ ಚಾರ್ಜ್!!!
Uttar Pradesh news Russian girl dance in crowd police lathi charge to control crowd in jhansi latest news
Lathi charge in jhansi: ಉತ್ತರಪ್ರದೇಶದ ಜಾನ್ಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ (Lathi charge in jhansi) ಪೊಲೀಸರು ಲಾಠಿ ಚಾರ್ಜ್ ನಡೆದ ಘಟನೆಯೊಂದು ನಡೆದಿದೆ. ಮೌರಾನಿಪುರ ಪುರಸಭೆ ಆಯೋಜಿಸಿದ್ದ ಸ್ವೀಟ್ ನೈಟ್ ಕಾರ್ಯಕ್ರಮದಲ್ಲಿ ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಪ್ರತಿ ವರ್ಷದಂತೆ ಗುರುವಾರ ರಾತ್ರಿಯೂ ನಡೆಯುತ್ತಿರುವ ಮೇಳ ಜಲ ವಿಹಾರ ಮಹೋತ್ಸವದ ಅಡಿಯಲ್ಲಿ ಸ್ವೀಟ್ ನೈಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯ ಜನರನ್ನು ರಂಜಿಸಲು ರಷ್ಯಾದ ನೃತ್ಯಗಾರರನ್ನು ಕಾರ್ಯಕ್ರಮದಲ್ಲಿ ಕರೆಯಲಾಗಿತ್ತು. ನೃತ್ಯ ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು. ಗುಂಪಿನಲ್ಲಿದ್ದ ಕೆಲವು ಯುವಕರು ವೇದಿಕೆಯ ಬಳಿ ನೃತ್ಯ ಮಾಡಲು ಪ್ರಾರಂಭಿಸಿದ್ದರಿಂದ ಕೂಡಲೇ ಎಲ್ಲಾ ಕಡೆ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಯಾಯಿತು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯುವಕರ ಮೇಲೆ ಲಾಠಿ ಪ್ರಹಾರ ನಡೆಸಿದ್ದು, ಕಾಲ್ತುಳಿತ ಉಂಟಾಯಿತು. ಈ ವೇಳೆ ಸ್ವೀಟ್ ನೈಟ್ ಕಾರ್ಯಕ್ರಮ ಆಯೋಜಿಸಲು ಪೊಲೀಸರು ಅನುಮತಿ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಪೊಲೀಸ್ ಲಾಠಿಚಾರ್ಜ್‌ನಲ್ಲಿ ಗಾಯಗೊಂಡ ಯುವಕರಲ್ಲಿ ಒಬ್ಬನನ್ನು ಚಿಕಿತ್ಸೆಗಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಡಾಕ್ಟರ್ ತಿಳಿಸಿರುವ ಕುರಿತು ವರದಿಯಾಗಿದೆ.
और देखो रशियन डांस
झांसी में रशियन डांसर देखकर भीड हुई बेकाबू, पुलिस ने चलाई लाठी।#Jhansi pic.twitter.com/IVazXl2xKC
— Satyam Mishra/सत्यम् मिश्र (@satyammlive) October 6, 2023
ಇದನ್ನೂ ಓದಿ: Govt Job: ಮಂಗಳೂರಿನಲ್ಲಿ ಸರ್ಕಾರಿ ಉದ್ಯೋಗ, ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಭರ್ಜರಿ ಆಫರ್! ಈ ಕೂಡಲೇ ಅರ್ಜಿ ಸಲ್ಲಿಸಿ