Watermelon health Tips: ಕಲ್ಲಂಗಡಿ ಹಣ್ಣನ್ನು ಯಾವ ಸಮಯದಲ್ಲಿ ತಿಂದರೆ ಆರೋಗ್ಯಕ್ಕೆ ಬಹಳ ಉತ್ತಮ?
Lifestyle health news Watermelon health tips: When to eat watermelon fruit is good for health
Watermelon health Tips: ದಿನೇ ದಿನೇ ಬೇಸಿಗೆ ಕಾಲದಲ್ಲಿ ಬಿಸಿಲು ಏರುತ್ತಲೇ ಇದೆ. ಸೂರ್ಯ ನೆತ್ತಿ ಮೇಲೆ ಒಂದೇ ಸಮನೆ ಕಾಯುತ್ತಿದ್ದಾನೆ. ಹವಾಮಾನ (weather) ಇಲಾಖೆ ಕೂಡ ಬೇಸಿಗೆ ಮತ್ತು ಬಿಸಿ ಗಾಳಿ ಬಗ್ಗೆ ಎಚ್ಚರಿಕೆ ನೀಡಿದೆ. ಹವಾಮಾನ (weather) ಬದಲಾಗುತ್ತಿದ್ದಂತೆ ಸೇವಿಸುವ ಆಹಾರ ಪದ್ಧತಿ ಕೂಡ ಬದಲಿಸಿಕೊಳ್ಳಬೇಕು. ಮಳೆಗಾಲದ ಅಥವ ಚಳಿಗಾಲದ ಆಹಾರ ಬೇಸಿಗೆ ಕಾಲಕ್ಕೆ ಸರಿಯಾಗುವುದಿಲ್ಲ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನೀರನ್ನು ಕುಡಿಯಬೇಕು ಹಾಗೂ ಬಿಸಿಗೆ ತಾಂಪಾಗಿ ನೀರಿನ ಅಂಶ ಇರುವ ಆಹಾರವನ್ನು ಸೇವಿಸುವುದು ಉತ್ತಮ. ಅಧಿಕ ನೀರಿನ ಅಂಶವಿರುವ ಹಣ್ಣು ಎಂದರೆ ಅದು ಕಲ್ಲಂಗಡಿ. ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ (Watermelon health Tips). ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ.
ಯಾವುದೇ ಹಣ್ಣನ್ನಾಗಲಿ (fruits) ತಿನ್ನಲು ಒಂದು ಸಮಯ ಹಾಗೂ ನಿಯಮ ಇರುತ್ತದೆ. ಈ ನಿಯಮ ರೀತಿ ತಿಂದರೆ ಹಣ್ಣು ದೇಹದ ಆರೋಗ್ಯವನ್ನು ಸರಿಯಾಗಿ ಕಾಪಾಡುತ್ತದೆ. ಹಾಗೆಯೇ ಕಲ್ಲಂಗಡಿ ಹಣ್ಣನ್ನು ತಿನ್ನಲು ಕೂಡ ಒಂದು ನಿಯಮವಿದೆ. ನೀವು ಕಲ್ಲಂಗಡಿಯನ್ನು ಊಟ ಮತ್ತು ಊಟದ ನಡುವೆ ಕಲ್ಲಂಗಡಿ ತಿನ್ನಬಾರದು ಮತ್ತು ರಾತ್ರಿ ಕೂಡ ಈ ಹಣ್ಣ(fruits) ನ್ನು ತಿನ್ನಬಾರದು. ಸಂಜೆಯ ವೇಳೆಗೆ ಈ ಹಣ್ಣನ್ನು ತಿನ್ನುವುದು ಸೂಕ್ತವಾದ ಸಮಯ.
ಕಲ್ಲಂಗಡಿ ಹಣ್ಣಿನಲ್ಲಿ ಅಧಿಕವಾಗಿ ವಿಟಮಿನ್ ಸಿ (vitamin C) ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಕಲ್ಲಂಗಡಿಯಲ್ಲಿರುವ ವಿಟಮಿನ್ ಎ (vitamin A) ಮತ್ತು ಬೀಟಾ ಕ್ಯಾರೋಟಿನ್ (bita kyaritin) ತ್ವಚೆಯನ್ನು ಆರೋಗ್ಯಕರವಾಗಿ ಇಡಲು ಕಾರಣವಾಗಿರುತ್ತದೆ. ಕೂದಲಿನ ಬೆಳವಣಿಗೆಗೂ ಕಾರಣವಾಗಿದೆ.
ಕಲ್ಲಂಗಡಿ ಹಣ್ಣು ತೂಕವನ್ನು ಇಳಿಸಲು ಸಹಾಯಕವಾಗಿದೆ. ಸಾಮಾನ್ಯವಾಗಿ ಜನರು ಕಲ್ಲಂಗಡಿ ಸಿಹಿಯಾಗಿರುತ್ತದೆ ಹಾಗಾಗೀ ಇದರಲ್ಲಿ ಹೆಚ್ಚು ಸಕ್ಕರೆ ಅಂಶವಿದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದು ನಿಜವಲ್ಲ. 100 ಗ್ರಾಂ (gram) ಕಲ್ಲಂಗಡಿಯಲ್ಲಿ 6.2 ಗ್ರಾಂ (gram) ಸಕ್ಕರೆ ಇರುತ್ತದೆ. ಹಾಗೂ ಇದು ಕಡಿಮೆ ಕ್ಯಾಲೋರಿಗಳ (kyarolin) ನ್ನು ಹೊಂದಿದ್ದು, ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.
ನಿಮ್ಮ ಹೃದಯದ ಆರೋಗ್ಯ ಕಾಪಾಡಲು ಕಲ್ಲಂಗಡಿ ಹೇಳಿ ಮಾಡಿಸಿದ್ದು. ಇದು ಅನೇಕ ಪೋಷಕಾಂಶವನ್ನು ಹೊಂದಿದೆ. ಕಲ್ಲಂಗಡಿಯಲ್ಲಿರುವ ಲೈಕೋಪಿನ್ ಕೊಲೆಸ್ಟ್ರಾಲ್ (chelesterol) ಅನ್ನು ಕಡಿಮೆ ಮಾಡುತ್ತದೆ. ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕಲ್ಲಂಗಡಿ ಅಮೈನೋ ಆಮ್ಲ ಸಿಟ್ರುಲಿನ್ ಮತ್ತು ನೈಟ್ರಿಕ್ ಆಕ್ಸೈಡ್ (accidied) ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯ ಅಂಶ ಬೇಗ ಜಾಸ್ತಿಯಾಗದಂತೆ ಕಾಪಾಡುತ್ತದೆ.
ಇದನ್ನೂ ಓದಿ: Health tips: ನಿಂಬೆ ನೀರು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?: ಹೇಗೆಂದು ನಿಮಗೆ ತಿಳಿದಿದೆಯೇ?ಇಲ್ಲಿದೆ ಓದಿ