Shakti Yojana: ಶಕ್ತಿ ಯೋಜನೆ ಎಫೆಕ್ಟ್ – 300 ಜನ ಕಂಡಕ್ಟರ್ಸ್ ಸಸ್ಪೆಂಡ್ !! ಏನಿದು ಶಾಕಿಂಗ್ ನ್ಯೂಸ್?!

Karnataka news Shakti scheme effect more than 300 govt bus conductor suspended

Shakti Scheme : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದ ಶಕ್ತಿ ಯೋಜನೆಯಿಂದ( Shakthi Free Bus Effect)ಫ್ರೀ ಫ್ರೀ ಎಂದು ಟ್ರಿಪ್ ಹೊಡೆಯುವ ಮಹಿಳೆಯರು ಸಿಕ್ಕಿದ್ದೇ ಚಾನ್ಸ್ ಎಂದು ತೀರ್ಥ ಕ್ಷೇತ್ರ ದರ್ಶನ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಕಾಮನ್ ಆಗಿ ಬಿಟ್ಟಿದೆ.

ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಲ್ಲಿ (Congress Guarantee scheme) ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು ,ಇದರಿಂದ ನಾಲ್ಕು ನಿಗಮಗಳಿಗೆ ಆದಾಯ ಹೆಚ್ಚಾಗಿದೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾಮಣಿಗಳು ನೂಕು ನುಗ್ಗಲಿನಿಂದ ಓಡಾಡುವುದು ಸಾಮಾನ್ಯವಾಗಿ ಬಿಟ್ಟಿದ್ದು, ಬಸ್ಸಿನಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರ ಒದ್ದಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತಿದೆ.

ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಎಡವಟ್ಟಿನಿಂದ ಜೊತೆಗೆ ನಿರ್ವಾಹಕರ ಸ್ವಯಂಕೃತ ತಪ್ಪಿನ ಪರಿಣಾಮ ರಾಜ್ಯದಲ್ಲಿ ಇದುವರೆಗೂ ನಾಲ್ಕೂ ನಿಗಮ ಸೇರಿ ಒಟ್ಟು 300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿರುವ ಕುರಿತು ಎಂದು ಟಿವಿ9 ಡಿಜಿಟಲ್ಗೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲಾಗಿದೆ. ಕೆಲವು ನಿರ್ವಾಹಕರು ಇನ್ಸೆಂಟಿವ್ (ಪ್ರೋತ್ಸಾಹಧನ) ಪಡೆಯುವ ಸಲುವಾಗಿ ಸುಳ್ಳು ಟಿಕೆಟ್ ಹರಿಯುತ್ತಿದ್ದಾರೆ ಎಂಬ ಆರೋಪ ಜೋರಾಗಿ ಕೇಳಿಬಂದಿದೆ. ಇದರ ಜೊತೆಗೆ ನಿರ್ವಾಹಕ ಮಹಿಳೆಯರಿಗೆ ಅವರು ಪ್ರಯಾಣಿಸುವ ಮಾರ್ಗದ ಟಿಕೆಟ್ ನೀಡಿದ್ದರು ಕೆಲವೊಮ್ಮೆ ಮಹಿಳೆಯರು ತಾನು ಇಳಿಯಬೇಕಾದ ಸ್ಥಳವನ್ನು ತಲುಪುವ ಮೊದಲೇ ಇಳಿದು ಬಿಟ್ಟರೆ , ನಿರ್ವಾಹಕನಿಗೆ ಸಮಸ್ಯೆ ಎದುರಾಗುವುದು ಖಚಿತ. ಒಂದು ವೇಳೆ, ಟಿಕೆಟ್ ಕಲೆಕ್ಟರ್ ಪರಿಶೀಲನೆಗೆ ಬಂದರೆ, ಅಲ್ಲಿ ಮಹಿಳಾ ಪ್ರಯಾಣಿಕರಿಲ್ಲದೆ ಹೋದಲ್ಲಿ ಕಲೆಕ್ಟರ್ ನಿರ್ವಾಹಕನಿಗೆ ದಂಡ ವಿಧಿಸಿ, ಮೇಲಾಧಿಕಾರಿಗಳಿಗೆ ಈ ವಿಚಾರ ತಿಳಿಸಿ ನಿರ್ವಾಹಕನನ್ನು ಸಸ್ಪೆಂಡ್ ಮಾಡಲಾಗುತ್ತದೆ. ಈ ಎರಡು ಕಾರಣದಿಂದ ರಾಜ್ಯಾದ್ಯಂತ ಸಾರಿಗೆ ಇಲಾಖೆ 300ಕ್ಕೂ ಹೆಚ್ಚು ನಿರ್ವಾಹಕರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Quality Air Index: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರವಿದೆ ಗುಣಮಟ್ಟದ, ಆರೋಗ್ಯಕರ ಗಾಳಿ! ಕೇಂದ್ರ ಸರ್ಕಾರ ಘೋಷಣೆ ಮಾಡಿದ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಕೂಡ ಉಂಟಾ ?!

Leave A Reply

Your email address will not be published.