Pallakki Utsav: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೆ ಗುಡ್‌ನ್ಯೂಸ್; ಇಂದಿನಿಂದ ಪಲ್ಲಕ್ಕಿ ಉತ್ಸವ ಆರಂಭ! ಏನೇನಿದೆ?
Karnataka news good news from KSRTC bus pallaki utsav bus start from today
Pallakki Utsav: ಕೆ.ಎಸ್.ಆರ್.ಟಿ.ಸಿಯ ನೂತನ ಪಲ್ಕಕ್ಕಿ ಉತ್ಸವಕ್ಕೆ (Pallakki Utsav) ಕ್ಕೆ ಮುಖ್ಯಮಂತ್ರಿ ಸಿದ್ದರಾಮ್ಯ್ಯ (CM Siddaramaiah) ಅವರು ಚಾಲನೆ ನೀಡಲಿದ್ದಾರೆ.
40 ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಇಂದು ಗ್ರೀನ್ ಸಿಗ್ನಲನ್ನು ಮುಖ್ಯಮಂತ್ರಿ ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಪಲ್ಲಕ್ಕಿ ಉತ್ಸವ ಬಸ್‌ಗಳ ಉದ್ಘಾಟನೆ ಮಾಡಲಿದ್ದಾರೆ.
ಇಂದು ಬೆಳಗ್ಗೆ ಹತ್ತು ಗಂಟೆಗೆ ಚಾಲನೆ ನೀಡಲಿದ್ದಾರೆ. ಹಾಗೆನೇ ಶಕ್ತಿಯೋಜನೆಯ ಸಾಮಾನ್ಯ ಬಸ್‌ಗಳಿಗೆ ಅಂದರೆ ನೂರು ಬಸ್‌ಗಳಿಗೆ ಕೂಡಾ ಗ್ರೀನ್ ಸಿಗ್ನಲ್ ನೀಡಲಾಗುತ್ತದೆ.
ಪಲ್ಲಕ್ಕಿ ಉತ್ಸವದ ಬಸ್‌ಗಳ ವಿಶೇಷತೆ ಏನು?
ಇದು ನಾನ್ ಎಸಿ ಸ್ಲೀಪರ್ ಬಸ್. ಹೊರಾಂಗಣ ಆರ್ಕಷಕದ ಜೊತೆಗೆ ಒಳಾಂಗಣ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ.
28 ಸೀಟುಗಳ ಸಾಮರ್ಥ್ಯವನ್ನು ಪಲ್ಲಕ್ಕಿ ಉತ್ಸವ ಸ್ಲೀಪರ್ ಬಸ್ ಹೊಂದಿದೆ.ಪ್ರತಿ ಬಸ್ ಬೆಲೆ 45 ಲಕ್ಷ ರೂ. ಅಶೋಕ್ ಲೇಲ್ಯಾಂಡ್ ಕಂಪನಿಯ ನಿರ್ಮಾಣ.
ಒಟ್ಟು ನಲುವತ್ತು ಬಸ್ಸುಗಳ ಪೈಕಿ ಮೂವತ್ತು ಬಸ್‌ಗಳು ರಾಜ್ಯದೊಳಗೆ, ಉಳಿದ ಹತ್ತು ಬಸ್ಸುಗಳು ಹೊರರಾಜ್ಯ ಸಂಚರಿಸಲಿದೆ.
ಇಂದಿನಿಂದ ಈ ಬಸ್‌ಗಳ ಸೇವೆ ಆರಂಭವಾಗುತ್ತಿದೆ.
ಇದನ್ನೂ ಓದಿ: Dasara holidays: ಈ ಜಿಲ್ಲೆಯ ಶಾಲೆಗಳಿಗೆ ದಸರಾ ರಜೆಯಲ್ಲಿ ಬದಲಾವಣೆ- ಮಹತ್ವದ ಆದೇಶ ಹೊರಡಿಸಿದ ಜಿಲ್ಲಾಡಳಿತ