NDA Alliance: NDA ಕೂಟದಿಂದ ಮತ್ತೊಂದು ಪ್ರಬಲ ಪಕ್ಷ ಔಟ್ – ಬಿಜೆಪಿ ಮೈತ್ರಿ ಬಲಕ್ಕೆ ಭಾರೀ ದೊಡ್ಡ ಶಾಕ್
NDA alliance another shock to BJP Jana Sena party came out of nda and to support TDP
NDA alliance: ವಿಪಕ್ಷಗಳೆಲ್ಲಾ ಸೇರಿ 26 ಪಕ್ಷಗಳ ಮೈತ್ರಿಯೊಂದಿಗಿ ‘ಇಂಡಿಯಾ’ ಕೂಟ ರಚಿಸಿದ ಬೆನ್ನಲ್ಲೇ 36 ಪಕ್ಷಗಳನ್ನು ಸೇರಿಸಿ ಬಿಜೆಪಿ ತನ್ನ ನೇತೃತ್ವದಲ್ಲಿ NDA ಮೈತ್ರಿ ಕೂಟ(NDA alliance) ರಚಿಸಿ ವಿಪಕ್ಷಗಳಿಗೆ ಟಕ್ಕರ್ ಕೊಟ್ಟಿತ್ತು. ಆದರೀಗ NDA ಕೂಟದ ಒಂದೊಂದೇ ಪಕ್ಷಗಳು ಬಿಜೆಪಿಗೆ ಶಾಕ್ ನೀಡುತ್ತಿವೆ.
ಹೌದು, ಇತ್ತೀಚೆಗಷ್ಟೆ ತಮಿಳು ನಾಡಿನ AIDMK ಪಕ್ಷವು NDA ಮೈತ್ರಿ ಕೂಟದಿಂದ ಹೊರನಡೆದು ಬಿಜೆಪಿಗೆ ಶಾಕ್ ನೀಡಿತ್ತು. ಇದು ದಕ್ಷಿಣ ಭಾರತದಲ್ಲಿ ಪ್ರಮುಖ ಪಕ್ಷ ಆದ್ದರಿಂದ, ಮೈತ್ರಿಯಿಂದ ಹೊರನಡೆದುದರಿಂದ ಬಿಜೆಪಿಗೆ ಅರಗಿಸಿಕೊಳ್ಳುವುದು ಕೊಂಚ ಕಷ್ಟವೇ ಆಗಿತ್ತು. ಆದರೀಗ ಈ ಬೆನ್ನಲ್ಲೇ ಮತ್ತೆ ಬಿಜೆಪಿಗೆ ಭಾರೀ ದೊಡ್ಡ ಆಘಾತ ಎದುರಾಗಿದ್ದು, ದಕ್ಷಿಣ ಭಾರತದ ಮತ್ತೊಂದು ಪ್ರಮುಖ ಪಕ್ಷವಾದ ‘ಜನಸೇನಾ ಪಕ್ಷ’ವು ಮೈತ್ರಿ ಕೂಟದಿಂದ ಹೊರನಡೆದಿದೆ.
ಅಂದಹಾಗೆ ಬದಲಾದ ಕಾಲಘಟ್ಟದಲ್ಲಿ ಜಗನ್ ಸರ್ಕಾರದ ವಿರುದ್ಧ ಸಿಡಿದಿರುವ ನಟ ಪವನ್ ಕಲ್ಯಾಣ್ (Pawan Kalyan) ತೆಲುಗುದೇಶಂ ಜೊತೆಗೂಡಿ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಷ್ಟಕಾಲದಲ್ಲಿ ಬಂಧಿತ ಚಂದ್ರಬಾಬು ನಾಯ್ಡ (Chandrababu Naidu) ಜೊತೆ ಇರಲು ಎನ್‌ಡಿಎ ಮೈತ್ರಿಕೂಟ ತೊರೆದಿದ್ದೇನೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಅಲ್ಲದೆ ಟಿಡಿಪಿ-ಜನಸೇನೆ ಮೈತ್ರಿಯಿಂದ ವೈಎಸ್‌ಆರ್ ಕಾಂಗ್ರೆಸ್ (YSR Congress) ಸೋಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತೆಲಂಗಾಣ ಚುನಾವಣೆ ಬಳಿಕ ತೆಲುಗುದೇಶಂ-ಜನಸೇನಾ ಪಕ್ಷಗಳು ಕಾಂಗ್ರೆಸ್ ಜೊತೆಗೂಡಬಹುದು ಎಂಬ ಸುದ್ದಿಯೂ ಹಬ್ಬಿದೆ.
https://x.com/ANI/status/1709773897237926029?t=1oHfWt9ybk98R2KZfNPNDA&s=08
ಇದನ್ನೂ ಓದಿ: Tumakuru: ಲೇಡಿ PSI ಗೆ ಲೈಂಗಿಕ ಕಿರುಕುಳ ಕೊಟ್ಟ ಭೂಪ !! ನಂತರ ಏನಾಯ್ತು ಗೊತ್ತಾ ?!