Rahul Gandhi: ರಾಹುಲ್ ಗಾಂಧಿಯನ್ನು ‘ಹೊಸ ಯುಗದ ರಾವಣ’ ಎಂದು ಕರೆದ ಬಿಜೆಪಿ, ಪೋಸ್ಟರ್‌ ವೈರಲ್‌!

National politics news BJP Shares Poster Of Rahul Gandhi as new era Ravana On Social Media

Rahul Gandhi: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚುನಾವಣಾ ಸಂಭ್ರಮದ ನಡುವೆಯೇ ಬಿಜೆಪಿ ರಾಹುಲ್ ಗಾಂಧಿಯನ್ನು ರಾವಣ ಎಂದು ಕರೆದಿದೆ. ರಾಹುಲ್ ಫೋಟೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ (@bjp4india) ʼರಾಹುಲ್ ಗಾಂಧಿಯ ಗುರಿ ಭಾರತವನ್ನು ನಾಶಮಾಡುವುದಾಗಿದೆʼ ಎಂದು ಬರೆದಿದೆ. ಅವರು ಧರ್ಮ ಮತ್ತು ರಾಮನನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ರಾಹುಲ್ ಗಾಂಧಿ ಅವರ ಮಾರ್ಫ್ ಮಾಡಿದ ಫೋಟೋವನ್ನು ಸಹ ಹಂಚಿಕೊಂಡಿದೆ. ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿಯನ್ನು ರಾವಣ ಎಂದು ಕರೆಯುವ ಮೂಲಕ ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ದಾಳಿ ಮಾಡಲು ಪ್ರಯತ್ನಿಸಿದೆ.

ರಾಹುಲ್ ಟಾರ್ಗೆಟ್ ಮಾಡಲು ಬಿಜೆಪಿ ಫೋಟೋಶಾಪ್ ಮಾಡಿದ ಚಿತ್ರವನ್ನು ಬಳಸಿದ್ದು, ಅದರಲ್ಲಿ ರಾಹುಲ್ ಅವರ ಏಳು ತಲೆಗಳನ್ನು ತೋರಿಸಲಾಗಿದೆ. ರಾಹುಲ್ ಅವರ ಬಟ್ಟೆಯನ್ನು ಯೋಧನಂತೆ ಬಿಂಬಿಸುವ ಪ್ರಯತ್ನವೂ ನಡೆದಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ತೀಕ್ಷ್ಣ ದಾಳಿ ಹೊಸ ರಾಜಕೀಯ ರಂಗಕ್ಕೆ ಆಧಾರವಾಗಬಹುದು.

 

ಇದನ್ನೂ ಓದಿ: NDA Alliance: NDA ಕೂಟದಿಂದ ಮತ್ತೊಂದು ಪ್ರಬಲ ಪಕ್ಷ ಔಟ್ – ಬಿಜೆಪಿ ಮೈತ್ರಿ ಬಲಕ್ಕೆ ಭಾರೀ ದೊಡ್ಡ ಶಾಕ್

Leave A Reply

Your email address will not be published.