BJP-JDS: ಮೈತ್ರಿ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್ – ಬಿಜೆಪಿಗಂತೂ ಇದು ಊಹಿಸಲಾರದ ಹೊಡೆತ
Karnataka politics news jds leaders join Congress after BJP and JDS alliance in kodagu
BJP-JDS alliance : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕರ್ನಾಟಕದಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಲು ಬಿಜೆಪಿ ಸಕಲ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಜೆಡಿಎಸ್ ಜೊತೆ ಮೈತ್ರಿಯನ್ನೂ (BJP-JDS alliance) ಮಾಡಿಕೊಂಡಿದೆ. ಇದು ಘೋಷಣೆ ಕೂಡ ಆಗಿದೆ. ಈ ಹಿನ್ನಲೆಯಲ್ಲಿ ದುಶ್ಮನ್ ಗಳಾಗಿದ್ದ ಬಿಜೆಪಿ ಹಾಗೂ ಜೆಡಿಎಸ್(BJP-JDS) ಎರಡು ಪಕ್ಷಗಳು ಬಾಯಿ-ಬಾಯಿ ಎನ್ನುತ್ತಾ ಚುನಾವಣೆ ಎದುರಿಸಲು ತಯಾರಿ ನಡೆಸಿವೆ. ಆದರೆ ಈ ಬೆನ್ನಲ್ಲೇ ಬಿಜೆಪಿಗೆ ಜೆಡಿಎಸ್ ನಾಯಕರು ಭಾರಿ ದೊಡ್ಡ ಶಾಕ್ ನೀಡಿದ್ದಾರೆ.
ಹೌದು, ಜಾತ್ಯಾತೀತ ಜನತಾ ಪಾರ್ಟಿ ಎನಿಸಿರುವ ಜೆಡಿಎಸ್, ಸದಾ ಹಿಂದುತ್ವ ಎನ್ನುವ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಹಲವು ಜೆಡಿಎಸ್ ನ ಅಲ್ಪಸಂಖ್ಯಾತ ನಾಯಕರಿಗೆ ಅಸಮಾಧಾನ ಉಂಟುಮಾಡಿದೆ. ರಾಜ್ಯಾಧ್ಯಕ್ಷರ ಗಮನಕ್ಕೇ ತರದೆ, ಯಾರ ಅಭಿಪ್ರಾಯಗಳನ್ನು ಕೇಳದೆ ಏಕಾಏಕಿ ಏಕ ನಿರ್ಧಾರದಿಂದ ಜೆಡಿಎಸ್, ಬಿಜೆಪಿ ಜೊತೆ ದೋಸ್ತಿ ಬೆಳೆಸಿರುವುದು ಹಲವು ಮುಸಲ್ಮಾನ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರಲ್ಲದೆ ಇತರ ಅನೇಕ ಜೆಡಿಎಸ್ ನಾಯಕರು ಸಾಮೂಹಿಕವಾಗಿ ಕಾಂಗ್ರೆಸ್ ಸೇರಲು ಹೊರಟಿದ್ದಾರೆ. ಇದು ಮೈತ್ರಿಯಿಂದ ನಮ್ಮ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂದು ಎಣಿಸಿದ್ದ ಬಿಜೆಪಿಗಂತೂ ಊಹಿಸದ ನಷ್ಟವಾಗಿದೆ.
ಅಂದಹಾಗೆ ಕೊಡಗು ಜೆಡಿಎಸ್ ಪಕ್ಷದ ಬಹುತೇಕ ಜಿಲ್ಲಾ ನಾಯಕರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಪ್ರತ್ಯೇಕ ಸಭೆ ನಡೆಸಿರುವ ಜೆಡಿಎಸ್ ನಾಯಕರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರಲು ವೇದಿಕೆಯೂ ಸಜ್ಜಾಗಿದೆ.
ಯಾರೆಲ್ಲಾ ಕಾಂಗ್ರೆಸ್ ಸೇರುತ್ತಾರೆ:
ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷರಾಗಿದ್ದ ಕೆ.ಎಂ ಗಣೇಶ್, ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಇಸಾಕ್ ಖಾನ್, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಮೋಹನ್ ಮೌರ್ಯ ಸೇರಿದಂತೆ ಹಲವರು ಈಗಾಗಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಖಚಿತವಾಗುತ್ತಿದ್ದಂತೆ ಉಳಿದ ಬಹುತೇಕ ನಾಯಕರು ಜೆಡಿಎಸ್‌ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆ.ಎಂ ಗಣೇಶ್ ನಾವೆಲ್ಲರೂ ಜಾತ್ಯಾತೀತ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತಿರುವವರು. ಈಗ ಕುಮಾರಣ್ಣ ಅವರು ಇದ್ದಕ್ಕಿದ್ದಂತೆ ಬಿಜೆಪಿ ಜೊತೆಗೆ ಕೈಜೋಡಿಸಿದರೆ ನಾವೆಲ್ಲರೂ ಅದನ್ನು ಸಹಿಸಿಕೊಳ್ಳುವುದು ಹೇಗೆ. ಅದು ನಮ್ಮ ಮನಸ್ಸಿಗೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ನಾವೆಲ್ಲರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ. ಅಕ್ಟೋಬರ್ 28 ರಿಂದ ನವೆಂಬರ್ 1 ರ ಒಳಗಾಗಿ ಮಡಿಕೇರಿಯಲ್ಲಿ ಬೃಹತ್ ಸಮಾವೇಶ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡು ಸಾವಿರ ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ. ಕಾಂಗ್ರೆಸ್ ಜಿಲ್ಲಾ ನಾಯಕರೊಂದಿಗೆ ಸೇರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: Raj Kundra: ಬಟ್ಟೆ ತೆಗೆಯೋ ಬಗ್ಗೆ ಕಾಮಿಡಿ ಮಾಡಿದ ರಾಜ್ ಕುಂದ್ರ! ವೇದಿಕೆಯಲ್ಲೇ 18+ ಜೋಕ್ ಹೇಳಿದ ಶಿಲ್ಪಾ ಶೆಟ್ಟಿ ಪತಿ