Syrups: ಈ ಎರಡು ಔಷಧ ಕಂಪನಿಗಳ ಸಿರಪ್‌ಗಳಲ್ಲಿ ವಿಷಕಾರಿ ರಾಸಾಯನಿಕ ಪತ್ತೆ!

National news Toxic chemical detection in the syrups of these two drug companies

Syrups: ಸರಕಾರದ ವರದಿಯಲ್ಲಿ ಗುಜರಾತ್‌ನ ಫಾರ್ಮಾ ಕಂಪನಿಯ ಕೆಮ್ಮಿನ ಸಿರಪ್‌( Syrups)ಮತ್ತು ಅಲರ್ಜಿ ವಿರೋಧಿ ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕ ಅಂಶಗಳು ಕಂಡು ಬಂದಿರುವ ಕುರಿತು ಮಾಹಿತಿಯೊಂದು ಬಹಿರಂಗವಾಗಿದೆ.

 

ಈ ಔಷಧಿಗಳು ವಿಷಕಾರಿ ಎಂದು ಗುಜರಾತ್‌ ಆಹಾರ ಮತ್ತು ಔಷಧ ನಿಯಂತ್ರಣ ಆಡಳಿತ ಆಯುಕ್ತ ಎಚ್‌.ಜಿ.ಕೋಶಿಯಾ ಅವರು ಒಂದು ತಿಂಗಳಿನಿಂದ ಕಂಪನಿಯ ಕಾರ್ಖಾನೆಯಲ್ಲಿ ತಪಾಸಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಹೇಳಿದ್ದಾರೆ.

ಫಾರ್ಮಾ ಕಂಪನಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ರೈಮ್ಯಾಕ್ಸ್‌ ಎಕ್ಸ್ಪೆಕ್ಟರಂಟ್‌ ಶೇಕಡಾ 0.118 ರಷ್ಟು ಇಜಿಯನ್ನು ಹೊಂದಿದ್ದರೆ, ಅಲರ್ಜಿ ಔಷಧಿ ಸಿಲ್ಪ್ರೋಪ್ಲಸ್‌ ಸಿರಪ್‌ ಶೇ.0.171 ರಷ್ಟು ಎಥಿಲೀನ್‌ ಗ್ಲೈಕಾಲ್‌ (ಇಜಿ) ಮತ್ತು 0.243 ಶೇಕಡಾ ಡೈಥಿಲೀನ್‌ ಗ್ಲೈಕಾಲ್‌ (ಡಿಇಜಿ) ಅನ್ನು ಹೊಂದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ:Ration Card: BPL ಮಾತ್ರವಲ್ಲ, ಇದು APL ಕಾರ್ಡ್ ದಾರರಿಗೂ ಸಂತಸ ಕೊಡೋ ಸುದ್ದಿ- ತಪ್ಪದೇ ಓದಿ, ಈ ಪ್ರಯೋಜನ ಪಡೆಯಿರಿ !

Leave A Reply

Your email address will not be published.