Shivmogga: ಶಿವಮೊಗ್ಗ ‘ಈದ್ ಮಿಲಾದ್’ ಆಚರಣೆಗೆ ಬರೋಬ್ಬರಿ 5 ಕೋಟಿ ರೂಪಾಯಿ ಸಂಗ್ರಹ !! ಈ ಹಣ ಬಂದದ್ದೆಲ್ಲಿಂದ ಗೊತ್ತೆ ?!
Karnataka district Shivamogga news 5 crore collection for shimoga Eid milad festival latest news
Eid milad in Shivamogga : ಶಿವಮೊಗ್ಗ(Shivamogga) ಈದ್ ಮಿಲಾದ್ ಹಬ್ಬದ ದಿನ ರಾಗಿ ಗುಡ್ಡ ಕಲ್ಲು ತೂರಾಟ ಮತ್ತು ಹಿಂಸಾಚಾರ ಪ್ರಕರಣವು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಸಂಬಂಧ 40ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ(C M Siddaramaiah)ಹೇಳಿದ್ದಾರೆ. ಅಲ್ಲದೆ ಎಲ್ಲಾ ಪಕ್ಷಗಳ ನಾಯಕರು ಈ ಪ್ರಕರಣದ ಕುರಿತು ಮನಬಂದಂತೆ ಹೇಳಿಕೆ ನೀಡುತ್ತಿದ್ದು, ಪ್ರಕರಣದ ತೀವ್ರತೆಯೂ ಹೆಚ್ಚುತ್ತಿದೆ. ಸದ್ಯ ಪೋಲೀಸರ ಸಹಕಾರದೊಂದಿಗೆ ಈ ಗಲಬೆ ಇದೀಗ ಕೊಂಚ ನಿಯಂತ್ರಣಕ್ಕೆ ಬಂದಿದೆ. ಆದರೆ ಈ ನಡುವೆ ಅಚ್ಚರಿ ಎಂಬಂತೆ ಈ ಅದ್ದೂರಿಯಾದ ಈದ್ ಮಿಲಾದ್ ಹಬ್ಬದ(Eid milad in Shivamogga) ಆಚರಣೆಗೆ 5 ಕೋಟ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಹೌದು, ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಇಂದು ಈ ಪರಿಸ್ಥಿತಿ ಕೊಂಚ ಮಟ್ಟಿಗೆ ಸುಧಾರಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ಹಸುರಿನಿಂದ ಸಿಂಗಾರಗೊಂಡ ಶಿವಮೊಗ್ಗ ನಗರದ ಬಡಾವಣೆಯೊಂದಕ್ಕೆ ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ್ದ ಮಹಾನ್ ದೊರೆ ಔರಂಗಜೇಬ್ ಎಂದು ಪಾಕಿಸ್ತಾನ ಒಳಗೊಂದ ಭಾರತ ದೇಶದ ನಕ್ಷೆಯನ್ನು ಅಳವಡಿಕೆ ಮಾಡಲಾಗಿತ್ತು. ಜೊತೆಗೆ ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಹಿಂದೂ ಸೈನಿಕರನ್ನು ಕೊಂದು ಅವರ ಕಾಲಿಟ್ಟಿರುವ ಬೃಹತ್ ಕಟೌಟ್ ನಿರ್ಮಿಸಿ ಅಳವಡಿಸಲಾಗಿದೆ. ಟಿಪ್ಪು ಸುಲ್ತಾನ್ ಖಡ್ಗವನ್ನು ಹಿಡಿದು ದಾಳಿ ಮಾಡುವಂತಹ ಸುಮಾರು 50 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಾಣ ಮಾಡಿ ಅದರ ಮೇಲೆ ಮುಸ್ಲಿಂ ಬಾವುಟ ಅಳಡಿಸಲಾಗಿದೆ. ಇದೆಲ್ಲವೂ ಶಿವಮೊಗ್ಗ ಜನತೆಗಷ್ಟೇ ಅಲ್ಲದೆ ನೋಡುಗರಿಗೆಲ್ಲರಿಗೂ ಇದು ಭಾರತವೋ ಇಲ್ಲಾ ಶಿವಮೊಗ್ಗವೋ ಎಂಬ ಅನುಮಾನ ಹುಟ್ಟುಹಾಕಿ, ಎಲ್ಲರಿಗೂ ಆತಂಕವನ್ನು ತಂದೊಡ್ಡಿತ್ತು.
ಇನ್ನೂ ಇದಷ್ಟೆ ಅಲ್ಲದೆ ಶಿವಮೊಗ್ಗ ನಗರದ ರಾಗಿಗುಡ್ಡ ಬಡಾವಣೆಯ ಪ್ರವೇಶ ದ್ವಾರಕ್ಕೆ ಸಾಬ್ರು ಸಾಮ್ರಾಜ್ಯ ಎಂದು ದೊಡ್ಡ ದ್ವಾರವನ್ನು ನಿರ್ಮಾಣ ಮಾಡಲಾಗಿದೆ. ನಗರದ ಮಧ್ಯ ಭಾಗದಲ್ಲಿಯೇ ಟಿಪ್ಪು ಸಾಮ್ರಾಜ್ಯ ಎಂದು ಬೃಹತ್ ಬ್ಯಾನರ್ ಅಳವಡಿಕೆ ಮಾಡಾಗಿದೆ. ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಅವರ ಬೃಹತ್ ಕಟೌಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ
ಶಿವಮೊಗ್ಗದ ಗಾಂಧಿ ನಗರದಲ್ಲಿ ಭಾನುವಾರ ಸಂಜೆ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಯುವಕರ ಗುಂಪೊಂದು ಖಡ್ಗ ಪ್ರದರ್ಶನ ಮಾಡಿದೆ. ಒಟ್ಟಿನಲ್ಲಿ ಶಿವಮೊಗ್ಗ ನಗರದ ಪ್ರಮುಖ ಬಡಾವಣೆ, ವೃತ್ತಗಳಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಭರ್ಜರಿ ಅಲಂಕಾರ ಮಾಡಲಾಗಿತ್ತು. ಅಲಂಕಾರಕ್ಕಾಗಿಯೇ ಸಾಕಷ್ಟು ಹಣ ಖರ್ಚು ಮಾಡಲಾಗಿತ್ತು. ಸದ್ಯ ಈ ಎಲ್ಲಾ ಆಚರಣೆಗೆ ಬರೋಬ್ಬರಿ 5 ಕೋಟಿ ಸಂಗ್ರವಾಗಿದ್ದು, ಈ ಹಣ ಎಲ್ಲಿಂದ ಬಂತೆದು ಕಂಡುಹಿಡಿಯಲು ಪೋಲೀಸರು ಬಲೆ ಬೀಸಿದ್ದಾರೆ.
ಬಂದಿವೆ ಹಲವು ಆರೋಪಗಳು!!
ಸ್ಥಳೀಯ ಮುಸ್ಲಿಂ ಮುಖಂಡರು, ಯುವಕರು ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡಿದ್ದಾರೆ. ಕೆಲವೆಡೆಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಅದರಂತೆ ಹೊರಗಡೆಯಿಂದಲೂ ಈದ್ ಮಿಲಾದ್ ಹಬ್ಬ ಆಚರಣೆಗೆ ಈ ಬಾರಿ ಧನ ಸಂಗ್ರಹವಾಗಿದೆ (Funding) ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಧಿಕ ಹಣ ಸಂಗ್ರಹವಾಗಿದ್ದರಿಂದಲೇ ಎಲ್ಲೆಂದರಲ್ಲಿ ಕಟೌಟ್, ಬ್ಯಾನರ್ , ಖಡ್ಗ ಹಾಕಿದ್ದರು ಎನ್ನಲಾಗಿದೆ. ಈಗ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹ ಹೇಗಾಯ್ತು? ಹೊರಗಿನಿಂದ ಸಹಾಯ ಧನ ಮಾಡಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಗುಂಪು ಪುಂಡಾಟ ಮೆರೆದಿತ್ತು. ಈ ಘಟನೆ ನಡೆಯುತ್ತಿದ್ದಂತೆ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಪ್ರಚೋದನಾತ್ಮಕ ಭಾವನೆಗಳಿಗೆ ಧಕ್ಕೆ ತರುವ ಬ್ಯಾನರ್, ಬಂಟಿಂಗ್ಸ್ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದೆ. ಈ ಸೂಚನೆಯ ಮೊದಲ ಪರಿಣಾಮ ಕರಾವಳಿ ಜಿಲ್ಲೆ ಉಡುಪಿ ಮೇಲೆ ಬಿದ್ದಿದೆ. ಅಕ್ಟೋಬರ್ 10 ರಂದು ಎಂಜಿಎಂ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದೆ. ಕಾರ್ಯಕ್ರಮಕ್ಕೆ ನಗರ ಸಿದ್ಧಗೊಳ್ಳುತ್ತಿದೆ. ಸರಕಾರದ ಸೂಚನೆಯಂತೆ ಎಸ್ ಪಿ ಎಲ್ಲಾ ಅನಧಿಕೃತ ನಿಯಮಬಾಹಿರ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದ್ದಾರೆ.
ಇದನ್ನೂ ಓದಿ: Kerala: ಮಗುವಿಗೆ ಹೆಸರಿಡಲು ದಂಪತಿಗಳ ಜಗಳ – ಕೊನೆಗೆ ಹೈಕೋರ್ಟೇ ಮಾಡಿತು ನಾಮಕರಣ !! ಅರೆ.. ಇಟ್ಟ ಹೆಸರೇನು ಗೊತ್ತಾ ?!