Hindu Marriage: ಹಿಂದೂ ಮದುವೆಗಳಲ್ಲಿ ಇದೊಂದು ‘ಶಾಸ್ತ್ರ’ ಮಾಡದೇ ಇದ್ರೆ ಅದಕ್ಕೆ ಮಾನ್ಯತೆ ಇಲ್ಲ !! ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್
High Court passed an important order on Hindu marriage
Hindu Marriage: ‘ಸಪ್ತಪದಿ’ ಮತ್ತಿತರ ವಿಧಿ ವಿಧಾನಗಳಿಲ್ಲದ ಹಿಂದೂ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ತನಗೆ ವಿಚ್ಛೇದನ ನೀಡದೆ ವಿಚ್ಛೇದಿತ ಪತ್ನಿ ಎರಡನೇ ವಿವಾಹವಾಗಿದ್ದಾಳೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ‘ಸಪ್ತಪದಿ’ ಮತ್ತಿತರ ವಿಧಿ ವಿಧಾನಗಳಿಲ್ಲದ ಹಿಂದೂ ವಿವಾಹಕ್ಕೆ (Hindu Marriage) ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದೆ.
ಮಾಹಿತಿ ಪ್ರಕಾರ ನ್ಯಾಯಾಲಯವು ಹಿಂದೂ ವಿವಾಹ ಕಾಯಿದೆ, 1955 ರ ಸೆಕ್ಷನ್ 7 ರ ಮೇಲೆ ಅವಲಂಬಿತವಾಗಿದೆ, ಇದು ಹಿಂದೂ ವಿವಾಹವನ್ನು ಯಾವುದೇ ಪಕ್ಷಗಳ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳುತ್ತದೆ. ಎರಡನೆಯದಾಗಿ, ಅಂತಹ ವಿಧಿಗಳು ಮತ್ತು ಸಮಾರಂಭಗಳಲ್ಲಿ ‘ಸಪ್ತಪದಿ’ (ಪವಿತ್ರವಾದ ಬೆಂಕಿಯ ಸುತ್ತಲೂ ವರ ಮತ್ತು ವಧು ಜಂಟಿಯಾಗಿ ಏಳು ಹೆಜ್ಜೆಗಳನ್ನು ಹಾಕುವುದು) ಸೇರಿದೆ. ಹಿಂದೂ ಧರ್ಮದಲ್ಲಿ ಯಾವುದೇ ಗಂಡು ಹೆಣ್ಣು ಸಪ್ತಪದಿ ತುಳಿದು ಜೊತೆಯಾಗಿ ಏಳು ಹೆಜ್ಜೆಗಳನ್ನು ಇಟ್ಟಾಗ ವಿವಾಹ ವಿಧಿಗಳು ಪೂರ್ಣವೆಂದು ಅರ್ಥ ಎಂಬುದನ್ನೂ ನ್ಯಾಯಾಲಯ ಒತ್ತಿ ಹೇಳಿದೆ.
ಪೂರ್ಣ ಪ್ರಕರಣ ಏನೆಂದರೆ:
ಸತ್ಯಂ ಸಿಂಗ್ ಎಂಬುವವರು ನನ್ನ ಪತ್ನಿ ಸ್ಮಿತಿ ಸಿಂಗ್ ನನಗೆ ವಿಚ್ಛೇದನ ನೀಡದೆ ಎರಡನೇ ಮದುವೆಯನ್ನು ಆಗಿದ್ದಾಳೆ, ಅವಳಿಗೆ ಶಿಕ್ಷೆ ನೀಡಬೇಕು ಎಂದು ಹೇಳಿ ದೂರು ನೀಡಿದ್ದ. ಇದನ್ನು ಪ್ರಶ್ನಿಸಿ ಸ್ಮಿತಿ ಸಿಂಗ್ ಮರು ಅರ್ಜಿ ಸಲ್ಲಿಸಿದ್ದಳು. ಸತ್ಯಂ ಸಿಂಗ್ ಆಕೆ ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ ಎಂಬುವುದರ ಬಗ್ಗೆ ಯಾವುದೇ ಸಾಕ್ಷ್ಯ ಒದಗಿಸಿರಲಿಲ್ಲ. ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಪ್ತಪದಿ ತುಳಿಯದಿದ್ದರೆ ಅದನ್ನು ಮದುವೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಮದುವೆ ಸಪ್ತಪದಿ ತುಳಿದು ಮದುವೆಯಾದರೆ ಮಾತ್ರ ಅದನ್ನು ಮದುವೆಯೆಂದು ಪರಿಗಣಿಸಲಾಗುವುದು, ಇಲ್ಲದಿದ್ದರೆ ಅದು ಮದುವೆಯಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಸತ್ಯಂ ಸಿಂಗ್ಗೆ ಸ್ಮೃತಿ ಸಿಂಗ್ ಜೊತೆಗೆ 2017ರಲ್ಲಿ ಮದುವೆಯಾಗಿತ್ತು. ಆದರೆ ಅವರಿಬ್ಬರ ನಡುವೆ ಹೊಂದಾಣಿಕೆಯಿಲ್ಲದ ಕಾರಣ ಅತ್ತೆ ಮನೆ ಬಿಟ್ಟು ಹೊರ ಬಂದು, ಗಂಡ ಹಾಗೂ ಅತ್ತೆ ವಿರುದ್ಧ ವರದಕ್ಷಿಣೆ ಕೇಸ್ ನೀಡಿದ್ದಳು. ಅಲ್ಲದೆ ತಿಂಗಳ ಖರ್ಚು ಗಂಡ ಭರಿಸಬೇಕೆಂದು ಕೋರಿ ಅರ್ಜಿ ನೀಡಿದ್ದಳು.
ಅಂತೆಯೇ ಕೋರ್ಟ್ನ ವಿಚಾರಣೆ ಮಾಡಿ ಮಿರ್ಝಾಪುರದ ಕುಟುಂಬ ನ್ಯಾಯಾಲಯ 2021, ಜನವರಿಯಲ್ಲಿ ಆಕೆಗೆ ಪ್ರತಿ ತಿಂಗಳು 4000 ಸಾವಿರ ರುಪಾಯಿ ಆಕೆಯ ಖರ್ಚಿಗೆ ನೀಡಬೇಕು, ಆಕೆ ಮರು ಮದುವೆಯಾಗುವವರೆಗೆ ಈ ಹಣವನ್ನು ನೀಡಬೇಕು ಎಂಬ ಆದೇಶವನ್ನು ನೀಡಿತು.
ಇದರಿಂದಾಗಿ ಸತ್ಯಂ ಸಿಂಗ್ಗೆ ಆಕೆಗೆ ನಾಲ್ಕು ಸಾವಿರ ನೀಡಬೇಕಾಗಿತ್ತು. ಹೀಗಾಗಿ ಸತ್ಯಂಸಿಂಗ್ ಸ್ಮೃತಿ ಸಿಂಗ್ಗೆ ಎರಡನೇ ಮದುವೆ ಶಾಸ್ತ್ರೋಕ್ತವಾಗಿ ಆಗಿದೆ, ಆಕೆ ವಿಚ್ಚೇದನ ಪಡೆಯುವ ಮೊದಲೇ ಮದುವೆಯಾಗಿದ್ದಾಳೆ ಎಂದು ದೂರನ್ನು ಸಲ್ಲಿಸಿದ್ದ. ಇದರ ವಿಚಾರಣೆಯಲ್ಲಿ ಆತ ಸ್ಮೃತಿಸಿಂಗ್ ಶಾಸ್ತ್ರೋಕ್ತವಾಗಿ ಮದುವೆಯಾಗಿರುವುದಕ್ಕೆ ಯಾವುದೇ ಸಾಕ್ಷಿ ಒದಗಿಸಿರಲಿಲ್ಲ.
ಆದ್ದರಿಂದ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ‘ಸಪ್ತಪದಿ’ ಮತ್ತಿತರ ವಿಧಿ ವಿಧಾನಗಳಿಲ್ಲದ ಹಿಂದೂ ವಿವಾಹಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದೆ.
ಇದನ್ನು ಓದಿ: Bigg Boss Season-10: ದೊಡ್ಮನೆಗೆ ಕಾಲಿಡಲಿರುವ ಮಜಾಭಾರತ ಖ್ಯಾತಿಯ ʼಚಂದ್ರಪ್ರಭಾʼ?!