BPL Card Updates: ರೇಷನ್‌ಕಾರ್ಡ್ ಹೊಸ ಹೆಸರು ಸೇರ್ಪಡೆ/ತಿದ್ದುಪಡಿಗೆ ಬೇಕಾಗುವ ದಾಖಲೆಗಳ ಕಂಪ್ಲೀಟ್ ವಿವರ ಇಲ್ಲಿದೆ!
BPL Card Updates documents required for Ration Card New Name Addition or Correction details is here
BPL Card Updates: ರಾಜ್ಯ ಸರಕಾರ ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರು ಸೇರ್ಪಡೆ/ ತಿದ್ದುಪಡಿಗೆ ಅವಕಾಶ ನೀಡಿದೆ. ಇದೀಗ ಇದಕ್ಕೆ ಬೇಕಾಗುವ ದಾಖಲೆಗಳು ಏನು ಎಂದು ತಿಳಿಯೋಣ.
ರೇಷನ್ ಕಾರ್ಡ್ ಅಪ್‌ಡೇಟ್(BPL Card Updates) ಮಾಡಲು ಏನೆಲ್ಲಾ ದಾಖಲೆಗಳ ಅವಶ್ಯಕತೆ ಇದೆ ಬನ್ನಿ ತಿಳಿಯೋಣ.
ಆಧಾರ್‌ನೊಂದಿಗೆ ಆದಾಯ ಪ್ರಮಾಣ ಪತ್ರವೊಂದು ಕಾರ್ಡ್‌ನಲ್ಲಿ ಹೆಸರು ಸೇರ್ಪಡೆಗೆ ನೀಡಬೇಕು.
ಆರು ವರ್ಷದೊಳಗಿನ ಮಕ್ಕಳ ಹೆಸರು ನೋಂದಾಯಿಸಲು ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ್ ಸಂಖ್ಯೆ, ಜನನ ಪ್ರಮಾಣ ಪತ್ರ ಕಡ್ಡಾಯ
ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ, ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್ ಬೇಕು
ಹೆಂಡತಿ ಹೆಸರು ಸೇರ್ಪಡೆಗೆ ಆಧಾರ್ ಕಾರ್ಡ್, ಗಂಡನ ಮನೆಯ ಪಡಿತರ ಚೀಟಿಯ ಪ್ರತಿ ಬೇಕು.
ಕರ್ನಾಟಕ ಒನ್, ಗ್ರಾಮ ಒನ್, ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದೆಂದು ಈಗಾಗಲೇ ಆಹಾರ ಮತ್ತು ನಾಗರಿಕ ಇಲಾಖೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ. ಅ.5 ರಿಂದ ಅ.7 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Koragajja: ‘ಜೊತೆಜೊತೆಯಲಿʼ ಸೀರಿಯಲ್ ನಟ ಅನಿರುದ್ಧ್ ಕೊರಗಜ್ಜನ ಸನ್ನಿಧಾನದಲ್ಲಿ!!!