

Raj Kundra: ಸೆಪ್ಟೆಂಬರ್ 2021 ರಲ್ಲಿ ಆಶ್ಲೀಲ ವಿಡಿಯೋ ನಿರ್ಮಾಣ ಹಾಗೂ ವಿತರಣೆ ಮಾಡಿದ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಕಾಲ ರಾಜ್ ಕುಂದ್ರಾ ಈ ಪ್ರಕರಣಕ್ಕೆ ಸಂಬಂಧ ಜೈಲಿನಲ್ಲಿದ್ದರು.
ಇದೀಗ ರಾಜ್ ಕುಂದ್ರಾ(Raj Kundra) ಮೊದಲ ಬಾರಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನರ ಮುಂದೆ ಕಾಣಿಸಿಕೊಂಡಿದ್ದಲ್ಲದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅವರು 18+ ಜೋಕ್ಸ್ ಗಳನ್ನು ಹೇಳಿದ್ದಾರೆ. ಹೌದು, ಸ್ಟ್ಯಾಂಡ್ ಅಪ್ ಕಾಮಿಡಿಯ ಝಲಕ್ ನ್ನು ರಾಜ್ ಕುಂದ್ರಾ ಅವರೇ ಸ್ವತಃ ಹಂಚಿಕೊಂಡಿದ್ದಾರೆ. ವೇದಿಕೆಯ ಬರುವ ವೇಳೆ ಅವರು “ನಾನು ಹೇಳುವ ‘ಲೈಂಗಿಕ ಜೋಕ್‌ಗಳಿಂದ'(18+) ನಿಮಗೆ ಮುಜುಗರವಾದರೆ ನೀವು ಇಲ್ಲಿಂದ ಹೋಗಬಹುದು” ಎಂದಿದ್ದಾರೆ.
ಹೌದು, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಆಶ್ಲೀಲ ವಿಡಿಯೋ ಪ್ರಕರಣ ಸುದ್ದಿಯಾದ ದಿನದಿಂದ ಇಂದಿನವರೆಗೆ ಮುಖ ಮುಚ್ಚಿಕೊಂಡೇ ಜನರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.
ವಿಡಿಯೋ ದಲ್ಲಿ, ಲೇಡೀಸ್ & ಜಂಟಲ್ ಮೆನ್ ನಾನು ರಾಜ್ ಕುಂದ್ರಾ, ‘ಮಾಸ್ಕ್ ಮ್ಯಾನ್’ ಶಿಲ್ಪಾ ಕಾ ಪತಿ ಮತ್ತು ‘ಸಾಸ್ತಾ ಕನ್ಯೆ ವೆಸ್ಟ್’ ಎಂದೂ ನನ್ನನು ಕರೆಯುತ್ತಾರೆ. 18 ವರ್ಷದವನಾಗಿದ್ದಾಗ ಲಂಡನ್ ನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದೆ. 21ನೇ ವಯಸ್ಸಿನಲ್ಲಿ ಪಾಶ್ಮಿನಾ ಶಾಲು ಉದ್ಯಮವನ್ನೇ ಕಟ್ಟಿ ಬೆಳೆಸಿದೆ. ನನ್ನ ಕೆಲಸ ಯಾವತ್ತೂ ಬಟ್ಟೆ ಏರಿಸುವುದೇ ಆಗಿತ್ತು, ಬಟ್ಟೆ ತೆಗೆಯುವುದಿಲ್ಲ” ಎಂದು ಪರೋಕ್ಷವಾಗಿ ಆಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಹೀಗೆ ಸ್ಟ್ಯಾಂಡ್ ಅಪ್ ಕಾಮಿಡಿಯ ಈ ವಿಡಿಯೋ ಕ್ಲಿಪಿಂಗ್ ನ್ನು ರಾಜ್ ಕುಂದ್ರಾ ಅವರು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ನೋಡಿ ವೀಕ್ಷಕರು ಹಲವಾರು ಪ್ರಶ್ನೆಗಳನ್ನು ಇಟ್ಟಿದ್ದಾರೆ.
https://www.instagram.com/reel/Cx-EPe5MH8x/?utm_source=ig_web_copy_link
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್- ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ













