Poultry Farming : ಕೋಳಿ ಸಾಕಣೆದಾರರೇ ಇತ್ತ ಗಮನಿಸಿ – ಕಡಿಮೆ ಖರ್ಚು, ಹೆಚ್ಚು ಆದಾಯ ಗಳಿಸೋ ವಿನೂತನ ಪ್ರಯತ್ನದ ಬಗ್ಗೆ ತಿಳಿಯಿರಿ !

Latest news agricultural activity How to earn money by Poultry Farming

Poultry Farming : ಹಲವರು ಕೋಳಿ ಸಾಕಣೆ (Poultry Farming) ಮಾಡಿ ಹಣ ಗಳಿಸುತ್ತಾರೆ. ಆದರೆ, ನಿಮಗೆ ವಿಭಿನ್ನ ರೀತಿಯ ಕೋಳಿ ಸಾಕಾಣೆ ಗೊತ್ತಾ? ಕಡಿಮೆ ಖರ್ಚು, ಹೆಚ್ಚು ಆದಾಯ ಗಳಿಸೋ ವಿನೂತನ ಪ್ರಯತ್ನದ ಬಗ್ಗೆ ಮಾಹಿತಿ ಇಲ್ಲಿದೆ ತಿಳಿಯಿರಿ. ಕಡಿಮೆ ಜಾಗದಲ್ಲಿ ಹೆಚ್ಚು ಕೋಳಿ ಸಾಕಣೆ ಮಾಡುವುದು, ಆ ಕೋಳಿಗಳಿಗೆ ಅಗತ್ಯವಿರುವ ಆಹಾರವನ್ನು ಅಲ್ಲಿಯೇ ದೊರೆಯುವಂತೆ ಮಾಡುವುದೇ ಕೊರಿಯನ್ ಪದ್ಧತಿಯ ವಿಶೇಷತೆ.

ಕಡಿಮೆ ಖರ್ಚಿನಲ್ಲಿ ಕೋಳಿ ಸಾಕಣೆ ಮಾಡಬಯಸುವವರ ಪಾಲಿಗೆ ಈ ವಿಧಾನ ಸಹಕಾರಿಯಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಹೆಚ್ಚು ಮಾನವಶ್ರಮದ ಅಗತ್ಯವೂ ಇಲ್ಲ. ಖರ್ಚು ಕೈ ಸುಡುವುದಿಲ್ಲ. ಲಕ್ಷಾಂತರ ರೂ. ಬಂಡವಾಳ ಹೂಡುವ ಅವಶ್ಯಕತೆಯೂ ಇಲ್ಲ.

ಒಂದು ಕಡೆ ಕೋಳಿ ಸಾಕಣೆಯಿಂದ ಆದಾಯ ಬಂದರೆ 8-10 ತಿಂಗಳಿಗೇ ಯಥೇಚ್ಛ ಗೊಬ್ಬರ ಸಿಗುತ್ತದೆ. ಈ ಗೊಬ್ಬರವನ್ನು ಜಮೀನಿಗೆ ಬಳಕೆ ಮಾಡಿದರೆ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಹೀಗೆ ಕೋಳಿ ಸಾಕುವ ಜಾಗದಲ್ಲಿ ಗೊಬ್ಬರವನ್ನು ತೆರವುಗೊಳಿಸಿದ ಬಳಿಕ ಮತ್ತೆ ಆರಂಭದಂತೆಯೇ ಮಣ್ಣು, ಅಡಕೆ ಸಿಪ್ಪೆಯ ಅಂಕಣ ಸಿದ್ಧಪಡಿಸಿ ಅದನ್ನು ತೇವಗೊಳಿಸಬೇಕು. ವರ್ಷಕ್ಕೊಮ್ಮೆಯಾದರೂ ಇದನ್ನು ತೆರವು ಮಾಡಲೇಬೇಕು.

ಕೊರಿಯನ್ (korean) ಪದ್ಧತಿ ಅಳವಡಿಸಿಕೊಳ್ಳಲು ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ. ಕೇವಲ 10ಗಿ10 ವಿಸ್ತೀರ್ಣದ ಜಾಗದಲ್ಲಿ ಸುಮಾರು ಮೂರು ಅಡಿ ಆಳದ ಸಮತಟ್ಟಾದ ಭೂಮಿಯನ್ನು ಮೊದಲು ಅಣಿಗೊಳಿಸಬೇಕು. ಅದರಲ್ಲಿ ಒಂದೂವರೆ ಅಡಿ ಆಳಕ್ಕೆ ಮಣ್ಣನ್ನು ತುಂಬಬೇಕು. ಅದರಲ್ಲೂ ಗೆದ್ದಲು ಹುತ್ತದ ಮಣ್ಣಾಗಿದ್ದರೆ ಇನ್ನೂ ಉತ್ತಮ. ಹೀಗೆ ಮಣ್ಣು ತುಂಬಿದ ಬಳಿಕ ದರಗು(ಒಣಗಿದ ಎಲೆಗಳು), ಕ್ರಮೇಣ ತೇವಾಂಶದಲ್ಲಿ ಕೊಳೆಯಬಹುದಾದ ಸಣ್ಣ ಸೌದೆ ತುಂಡುಗಳನ್ನು ತುಂಬಬೇಕು.

ಅದರ ಮೇಲೆ ಒಣಗಿದ ಅಡಕೆ ಸಿಪ್ಪೆ ಹಾಕಬೇಕು. ನಂತರ ಕೆಲವು ದಿನ ಇದಕ್ಕೆ ನೀರು ಬಿಟ್ಟು ಹೆಚ್ಚಿನ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಯಾವಾಗಲೂ ಒಂದು ಹಂತದ ತೇವಾಂಶ ಕಾಪಾಡಿಕೊಳ್ಳುವುದು ಅವಶ್ಯ. ಕೆಲವೇ ದಿನಗಳಲ್ಲಿ ಈ ಜಾಗವು ಗೆದ್ದಲು, ಇರುವೆ ವಾಸಕ್ಕೆ ಯೋಗ್ಯವಾಗುತ್ತದೆ. ಬಳಿಕ ಈ ಜಾಗದಲ್ಲಿ ಕೋಳಿಗಳನ್ನು ಬಿಟ್ಟರೆ ಗೆದ್ದಲು, ಇರುವೆ ಕೋಳಿಗೆ ಆಹಾರವಾಗುತ್ತದೆ. ಕೋಳಿ ಸಾಕಣೆಯ ವೆಚ್ಚ ತಗ್ಗುತ್ತದೆ.

 

ಇದನ್ನು ಓದಿ: Actor Prabhas: ಏಕಾಏಕಿ ಬಂದು ನಟ ಪ್ರಭಾಸ್ ಕಪಾಳಕ್ಕೆ ಹೊಡೆದು ಓಡಿದ ಹುಡುಗಿ – ವಿಡಿಯೋ ವೈರಲ್ !

Leave A Reply

Your email address will not be published.