7th Pay Commission: ಸರಕಾರಿ ನೌಕರರಿಗೆ ಡಬಲ್‌ ಅಲ್ಲ ತ್ರಿಬಲ್‌ ಧಮಾಕಾ ಆಫರ್!!!‌ ವೇತನ ಹೆಚ್ಚಳ, ಡಿಎ ಅರಿಯರ್ಸ್ ಕುರಿತು ಬಿಗ್‌ ಅಪ್ಡೇಟ್‌ ಇಲ್ಲಿದೆ!!

7th pay commission latest news Central Government employees DA arrears and salary and da hike

7th Pay Commission: ಹಬ್ಬದ ಸೀಸನ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಇಲ್ಲಿದೆ. ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಸಂಬಳ ಹೆಚ್ಚಾಗುವ ನಿರೀಕ್ಷೆಯಿದೆ. 2023 ರಲ್ಲಿ ಎರಡನೇ ಸುತ್ತಿನ ತುಟ್ಟಿಭತ್ಯೆ (ಡಿಎ) ಹೆಚ್ಚಳದ(7th Pay Commission) ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಎದುರು ನೋಡುತ್ತಿದ್ದಾರೆ.

ಕರ್ನಾಟಕ, ಮಧ್ಯಪ್ರದೇಶ, ಸಿಕ್ಕಿಂ, ಒಡಿಶಾ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ಒಳಗೊಂಡಂತೆ ವಿವಿಧ ರಾಜ್ಯ ಸರ್ಕಾರಗಳು ಇತ್ತೀಚೆಗೆ ತಮ್ಮ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದೆ. ಜುಲೈ 2023 ರ ಡಿಎ ಹೆಚ್ಚಳವನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಗಳಿದ್ದು, ಇದರ ಹೊರತಾಗಿ ಉದ್ಯೋಗಿಗಳಿಗೆ ಮತ್ತೊಂದು ಸಿಹಿ ಸುದ್ದಿಯಿದೆ.

ಭಾರತದಲ್ಲಿ ಸೆಪ್ಟೆಂಬರ್‌ನಿಂದ ಹಬ್ಬಗಳ ಹೀಗಿರುವಾಗ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ ಇಲ್ಲಿದೆ. ಹಬ್ಬ ಹರಿದಿನಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಬೊಂಬಾಟ್ ಸುದ್ದಿ ನೀಡುವ ಸಾಧ್ಯತೆಯಿದೆ. ಇದರ ಜೊತೆಗೆ ಹೆಚ್ಚಿನ ರಾಜ್ಯಗಳಲ್ಲಿ, ಉದ್ಯೋಗಿಗಳು ಈಗ 38 ಪ್ರತಿಶತದ ಬದಲಿಗೆ 42 ಪ್ರತಿಶತ ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು 2023ರ ಜನವರಿಯ ತುಟ್ಟಿಭತ್ಯೆ ಹೆಚ್ಚಳವನ್ನು ಮಾರ್ಚ್‌ನಲ್ಲಿ ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮತ್ತೊಂದು ಸಂತಸದ ಸುದ್ದಿಯಿದ್ದು, ಪ್ರಸ್ತುತ ಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿ 2024 ರ ಜನವರಿಯಲ್ಲಿ ಮತ್ತೆ ಶೇಕಡಾ 4 ರಷ್ಟು ಡಿಎ ಹೆಚ್ಚಳವಾದರೆ, ಉದ್ಯೋಗಿಗಳ ಒಟ್ಟು ಭತ್ಯೆ ಶೇಕಡಾ 50 ಕ್ಕೆ ತಲುಪಲಿದೆ. ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ನಡುವೆ, ಕೇಂದ್ರ ಸರ್ಕಾರವು ಜುಲೈ 2023 ರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಪುತ್ತೂರು : ಸೆಲೂನ್ ಬಾಡಿಗೆ ವಿಚಾರ : ಕ್ಷೌರಿಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ

Leave A Reply

Your email address will not be published.